Home Crime News ಕಿತ್ತೂರು ಚೆನ್ನಮ್ಮ ಶಾಲೆಯ ಗೋಧಿ ಹೆಗ್ಗಣಗಳು
Crime NewsHomeLatest Newsnamma chikmagalurTarikere

ಕಿತ್ತೂರು ಚೆನ್ನಮ್ಮ ಶಾಲೆಯ ಗೋಧಿ ಹೆಗ್ಗಣಗಳು

Share
Share

ತರೀಕೆರೆ: ಇಲ್ಲಿಗೆ ಸಮೀಪದ ನಂದಿ ಹೊಸಹಳ್ಳಿಯ ಕಿತ್ತೂರು ಚೆನ್ನಮ್ಮವಸತಿ ಶಾಲೆಯಲ್ಲಿ ಗೋಧಿ ತಿನ್ನುವ ಹೆಗ್ಗಣಗಳಿವೆ.ಮಕ್ಕಳ ಆಹಾರ ಕದ್ದು ತಿನ್ನುವ ಹೆಗ್ಗಣಗಳು 70 ಕ್ವಿಂಟಾಲ್ ನಷ್ಟು ಗೋಧಿಯನ್ನು ಶಾಲೆಯ ಬಳಿ ಗುಂಡಿ ತೆಗೆಸಿ ಮುಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

ಹರೀಶ್ ಎಂಬುವನು ಈ ಶಾಲೆಯಲ್ಲಿ ಮುಖ್ಯಸ್ಥನಾದ ಸಮಯದಲ್ಲಿ ಕಳ್ಳತನ ಮಾಡಿ ರಾತ್ರೋರಾತ್ರಿ ಗೋಧಿಯನ್ನು ಮಾರಲು ಗುಂಡಿ ತೆಗೆಸಿ ಮುಚ್ಚಿಟ್ಟದ್ದಾನೆ ಎನ್ನಲಾಗುತ್ತಿದೆ.ಈ ವಿಷಯ ಗ್ರಾಮದ ಹಲವರಿಗೆ ತಿಳಿದಿದ್ದು ಸಂಭಂಧ ಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸ್ಥಳಕ್ಕೆ ಬಂದ ಅಧಿಕಾರಿಗಳು ಗುಂಡಿ ತೆಗೆಸಿದ್ದ ಜಾಗದ ಬಳಿ ಆಗೆಸಿ ನೋಡಿದಾಗ ಗೋಧಿ ಮುಚ್ಚಿಟ್ಟಿರುವುದು ಪತ್ತೆಯಾಗಿದೆ.ಮಕ್ಕಳಿಗೆ ಚಾಪತಿ ಮಾಡಿಕೊಡಬೇಕಾದ ಗೋಧಿಯನ್ನು ಮಾರಾಟ ಮಾಡಲು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಗುಂಡಿ ಅಗೆಯಲು ಸ್ಥಳೀಯರನ್ನು ಬಳಸಿಕೊಂಡು ಈ ರೀತಿಯ ಕೃತ್ಯ ನಡೆಸಿರುವ ಹರೀಶ್ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕು ಎಂದು ಸ್ಥಳೀಯರ ಜೊತೆಗೆ ಪೋಷಕರು ಒತ್ತಾಯ ಮಾಡಿದ್ದಾರೆ.

ಹರೀಶ್ ಒಬ್ಬನೇ ಈ ಕೃತ್ಯ ನಡೆಸಿಲ್ಲ ಸಿಬ್ಬಂದಿ ಕೈ ಜೋಡಿಸಿ ದ್ದಾರೆ ಎನ್ನಲಾಗಿದೆ. ಮಕ್ಕಳ ಆಹಾರ ಕದಿಯುವ ಖದೀಮರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿದ್ದಾರೆ.

Wheat fields of Kitturchennamma School

Share

Leave a comment

Leave a Reply

Your email address will not be published. Required fields are marked *

Don't Miss

ನಿವೇಶನಕ್ಕೆ ಒತ್ತಾಯಿಸಿ ಹೋರಾಟ ವೇದಿಕೆಯಿಂದ ಪ್ರತಿಭಟನೆ

ಮೂಡಿಗೆರೆ: ನಿವೇನಕ್ಕಾಗಿ ಒತ್ತಾಯಿಸಿ ತಾಲೂಕಿನ ಗೋಣಿಬೀಡು ಗ್ರಾ.ಪಂ. ಎದುರು ಗುರುವಾರ ವಸತಿಗಾಗಿ ಹೋರಾಟ ವೇದಿಕೆಯ ಮುಖಂಡರು  ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವೇದಿಕೆಯ ಗೌರವಾಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, ಗೋಣಿಬೀಡು ಹೋಬಳಿ, ಕಮ್ಮರಗೋಡು...

ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ

ಕಡೂರು: ತಾಲ್ಲೂಕಿನ ಚೌಳಹಿರಿಯೂರು ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಿದ್ದು ಜನ, ಜಾನುವಾರುಗಳು ಭೀತಿಯಿಂದ ಬದುಕುವಂತಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಚೌಳಹಿರಿಯೂರು ಸೇರಿದಂತೆ ಸುತ್ತಮುತ್ತ ಇ ತಿಮ್ಮಾಪುರ, ಕುರುಬರಹಳ್ಳಿ, ತಾಂಡ್ಯ, ಮಂಜುನಾಥಪುರ...

Related Articles

ಮುಳ್ಳಯ್ಯನಗಿರಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್

ಚಿಕ್ಕಮಗಳೂರು:  ಕರ್ನಾಟಕದ ನೆಚ್ಚಿನ ಪ್ರವಾಸಿ ತಾಣವಾದ ಕಾಫಿನಾಡು ಚಿಕ್ಕಮಗಳೂರಿನ  ಪ್ರಸಿದ್ಧ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹೊಸ...

ನಗರಸಭೆಯಲ್ಲಿ 2.60 ಕೋಟಿ ರೂ. ಉಳಿತಾಯ ಬಜೆಟ್‌ ಮಂಡನೆ

ಚಿಕ್ಕಮಗಳೂರು: ನಗರ ಸಭೆ ಸಿಬ್ಬಂದಿ ವೇತನ, ವಿದ್ಯುತ್‌ ಬಿಲ್‌ ಪಾವತಿ ಅನುದಾನ ಸೇರಿದಂತೆ ವಾರ್ಷಿಕ ಕೇವಲ 58...

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಅನಾರೋಗ್ಯ ವಿದ್ಯಾರ್ಥಿ

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢಶಾಲೆಯಲ್ಲಿ ಮಾನವೀಯತೆ ಮೆರೆಯುವ ಘಟನೆ ನಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ...

ಪೊಲೀಸ್ ಸೇವೆ ಎಂದರೆ ಅದು ಸಮಾಜದ ಭರವಸೆ

ಚಿಕ್ಕಮಗಳೂರು: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವುದು ನನ್ನ ಪೂರ್ವಜನ್ಮದ ಪುಣ್ಯ. ಪೊಲೀಸ್ ಎಂದರೆ ಕೇವಲ ಬಂದೂಕು...