Home namma chikmagalur chikamagalur ಆನೆ ದಾಳಿಯಿಂದ ಕಾರ್ಮಿಕ ಮಹಿಳೆಗೆ ಗಾಯ
chikamagalurCrime NewsHomeLatest Newsnamma chikmagalur

ಆನೆ ದಾಳಿಯಿಂದ ಕಾರ್ಮಿಕ ಮಹಿಳೆಗೆ ಗಾಯ

Share
Share

ಮೂಡಿಗೆರೆ: ಕಾಫಿನಾಡಿನ ಪರಿಸರದಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷದ ಭೀತಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು, ಮೂಡಿಗೆರೆ ತಾಲೂಕಿನ ಜಿ. ಹೊಸಳ್ಳಿ ಗ್ರಾಮದಲ್ಲಿ ತೋಟದ ಕೆಲಸದಲ್ಲಿದ್ದ ಕಾರ್ಮಿಕ ಮಹಿಳೆಯೊಬ್ಬರ ಮೇಲೆ ಆನೆ ದಾಳಿ ನಡೆಸಿರುವ ಆತಂಕಕಾರಿ ಘಟನೆ ವರದಿಯಾಗಿದೆ.

ಗುರುವಮ್ಮ ಎಂಬುವವರು ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ಕಾಡಾನೆ ಅವರ ಮೇಲೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೂ ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ಮಹಿಳೆಯನ್ನು ತಕ್ಷಣವೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆಯಿಂದಾಗಿ ಸುತ್ತಮುತ್ತಲ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ.

ಈ ಭಾಗದಲ್ಲಿ ಬೀಟಮ್ಮ 2, ಭುವನೇಶ್ವರಿ ಹಾಗೂ ಓಲ್ಡ್ ಬೆಲ್ಟ್ ಗುಂಪಿನ ಆನೆಗಳು ಬೀಡುಬಿಟ್ಟಿರುವುದು ಜನರ ನೆಮ್ಮದಿ ಕೆಡಿಸಿದ್ದು, ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಮತ್ತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Woman worker injured in elephant attack

Share

Leave a comment

Leave a Reply

Your email address will not be published. Required fields are marked *

Don't Miss

ನಾಗಾಲ್ಯಾಂಡ್ ಮೂಲದ ಯುವತಿ ಆತ್ಮಹತ್ಯೆ

ಚಿಕ್ಕಮಗಳೂರು: ನಾಗಾಲ್ಯಾಂಡ್ ಮೂಲದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅರವಿಂದ ನಗರ ಬಡಾವಣೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 22 ವರ್ಷದ ಲುನ್ಸುಲಾ ಎಂದು ಗುರುತಿಸಲಾಗಿದ್ದು, ಈಕೆ ನಗರದ ಹೊರವಲಯದಲ್ಲಿರುವ ಖಾಸಗಿ...

ಅಪ್ರಾಪ್ತ ಪ್ರೇಮಿಗಳ ಪ್ರಕರಣ-ಲವ್ ಜಿಹಾದ್’ ಆರೋಪ

ಚಿಕ್ಕಮಗಳೂರು:  ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದೆ. ಇದು ಕೇವಲ ಪ್ರೇಮ ಪ್ರಕರಣವಾಗಿ ಉಳಿಯದೆ, ‘ಲವ್ ಜಿಹಾದ್’ ಆರೋಪ, ಹಲ್ಲೆ ಹಾಗೂ...

Related Articles

ಚಿಕ್ಕಮಗಳೂರು ನಗರದಲ್ಲಿ ಮಧ್ಯ ರಾತ್ರಿ ಕರಡಿ ವಾಕಿಂಗ್

ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಕರಡಿಗಳು ಓಡಾಡುತ್ತಿವೆ. ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಸಮೀಪ ಕರಡಿಯೊಂದು...

ಭಗವಾನ್ ಮಹಾವೀರರ ಸಂದೇಶ ನಾಗರಿಕ ಸಮಾಜಕ್ಕೆ ಅಗತ್ಯ

ಚಿಕ್ಕಮಗಳೂರು:  ಭಗವಾನ್ ಮಹಾವೀರರ ಸಂದೇಶ ನಾಗರಿಕ ಸಮಾಜಕ್ಕೆ ಅವಶ್ಯಕತೆ ಇದ್ದು, ಜಗತ್ತು ಎದುರಿಸುತ್ತಿರುವ ಜಾಗತಿಕ ಸಮಸ್ಯೆಗೆ...

ವಿದ್ಯುತ್ ಸ್ಪರ್ಶ-ನಾಲ್ಕು ಹಸುಗಳು ಸ್ಥಳದಲ್ಲೇ ಸಾವು

ಚಿಕ್ಕಮಗಳೂರು: ಮೆಸ್ಕಾಂ ನಿರ್ಲಕ್ಷ್ಯಕ್ಕೆ ನಾಲ್ಕು ಮೂಕ ಪ್ರಾಣಿಗಳು ಬಲಿಯಾಗಿರುವ ಘಟನೆಯೊಂದು ಚಿಕ್ಕಮಗಳೂರು ಸಮೀಪದ ಇಂದಾವರ ಗ್ರಾಮದಲ್ಲಿ...

ಆಂಧ್ರಪ್ರದೇಶ ಯುವಕ ಭದ್ರಾ ಬಲದಂಡೆ ನಾಲೆಗೆ ಹಾರಿ ಆತ್ಮಹತ್ಯೆ

ತರೀಕೆರೆ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಆಂಧ್ರಪ್ರದೇಶ ಮೂಲದ...