ಚಿಕ್ಕಮಗಳೂರು: ಫ್ರೀಲಾನ್ಸ್ ಕೆಲಸದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 8,56,723 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಸೈಯದ್ ಅಂಜುಮ್ ಅವರು ಫೇಸ್ಬುಕ್ನಲ್ಲಿ ಪಾರ್ಟ್ ಟೈಮ್ ಉದ್ಯೋಗ ಹುಡುಕುತ್ತಿದ್ದಾಗ ‘ದ ರಿಟ್ಸ್ ಕಾರ್ಲ್ಟನ್’ ಹೆಸರಿನ ನಕಲಿ ಲಿಂಕ್ ಮೂಲಕ ವಂಚಕರ ಜಾಲಕ್ಕೆ ಸಿಲುಕಿದ್ದಾರೆ.
ಟೆಲಿಗ್ರಾಂನಲ್ಲಿ ಕೀರ್ತನಾ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ವ್ಯಕ್ತಿಯು ಹೋಟೆಲ್ ರೂಮ್ ಬುಕಿಂಗ್ ಮಾಡಿದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ನಂಬಿಸಿ, ಹಂತ ಹಂತವಾಗಿ ಹಣವನ್ನು ಡೆಪಾಸಿಟ್ ಮಾಡಿಸಿಕೊಂಡಿದ್ದಾರೆ.
ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಖಾತೆಯ ಸೆಕ್ಯೂರಿಟಿ ಕಾರಣ ನೀಡಿ ಮತ್ತೆ 6,68,280 ರೂಪಾಯಿ ಪಾವತಿಸುವಂತೆ ವಂಚಕರು ಒತ್ತಾಯಿಸಿದ್ದಾರೆ. ಇದರಿಂದ ಅನುಮಾನಗೊಂಡ ಸಂತ್ರಸ್ತರು ತಾವು ಮೋಸ ಹೋಗಿರುವುದನ್ನು ಅರಿತು ತಕ್ಷಣ ಪೊಲೀಸರ ಮೊರೆ ಹೋಗಿದ್ದಾರೆ.
ಈ ಸಂಬಂಧ ಸೆನ್ ಪೊಲೀಸ್ ಠಾಣೆಯ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ಇಂತಹ ಅಪರಿಚಿತ ಲಿಂಕ್ಗಳು ಹಾಗೂ ಅತಿಯಾದ ಲಾಭದ ಆಮಿಷ ತೋರಿಸುವ ಆನ್ಲೈನ್ ಕೆಲಸಗಳ ಬಗ್ಗೆ ಎಚ್ಚರದಿಂದಿರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
Freelance work lured – Rs 9 lakh fraud
Leave a comment