ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಪಿತೂರಿಯಿಂದ ದೆಹಲಿಯ ಅಬಕಾರಿ ಹಗರಣದಲ್ಲಿ ಸಿಲುಕಿಸಲಾಗಿದ್ದ ಅರವಿಂದ್ ಕೇಜ್ರವಾಲ್ ಮತ್ತು ಇತರ ೨೩ ನಾಯಕರನ್ನು ದೆಹಲಿಯ ನ್ಯಾಯಾಲಯವು ಕೋರ್ಟ್ ದೋಷಮುಕ್ತಗೊಳಿಸಿರುವುದು ಪಕ್ಷಕ್ಕೆ ಸಂದ ಜಯವಾಗಿದೆ ಎಂದು ಆಮ್ ಆದ್ಮ ಪಾರ್ಟಿ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ಅವರು ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿಂದು ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಎದುರಿಸಿದ್ದ ಟೀಕೆಗಳಿಗೆ ನ್ಯಾಯಾಲಯದಿಂದ ಉತ್ತರ ಸಿಕ್ಕಿದ್ದು, ಇದು ಕೋಮುವಾದಿ ಮತ್ತು ಭ್ರಷ್ಟ ಶಕ್ತಿಯ ವಿರುದ್ಧ ಹೋರಾಡಲು ಸ್ಫೂರ್ತಿ ನೀಡಿದೆ ಎಂದರು.
ಆಮ್ ಆದ್ಮ ಪಕ್ಷದ ನೈತಿಕ ಶಕ್ತಿಯನ್ನು ಕುಗ್ಗಿಸಲು ಮತ್ತು ಅದರ ಹೆಸರನ್ನು ಹಾಳುಮಾಡಲು ಇಂತಹ ಸುಳ್ಳು ಹಗರಣಗಳನ್ನು ಸೃಷ್ಟಿಸಲಾಗಿತ್ತು ಎಂಬುದು ನ್ಯಾಯಾಲಯದ ಆದೇಶದಿಂದ ಸಾಬೀತಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ ಪಿತೂರಿಯಿಂದ ಕೇಜ್ರವಾಲ್ ಸುಸೋಡಿಯಾಗೆ ಜೈಲಾಗಿದ್ದು, ಈಗ ದೆಹಲಿಯ ಸೊಕಾಲ್ಡ್ ಅಬಕಾರಿ ಹಗರಣ ಸಂಬಂಧ ಸಿ.ಬಿ.ಐ.ಚಾರ್ಜ್ ಶೀಟನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ತಿರಸ್ಕರಿಸಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಮತ್ತು ಇನ್ನಿತರ ೨೩ ನಾಯಕರನ್ನು ದೋಷಮುಕ್ತಗೊಳಿಸಿದೆ. ಕೋಮುವಾದಿ ಭ್ರಷ್ಟಶಕ್ತಿಯ ವಿರುದ್ಧ ಹೋರಾಟ ಮಾಡಲು ಸ್ಪೂರ್ತಿ ನೀಡಿದಂತಾಗಿದೆ ಎಂದರು.
ನಗರದ ಮೂರು ಕಣ್ಣಂತಿರುವ ಬಸವನಹಳ್ಳಿ ಕೆರೆ, ಶತಮಾನೋತ್ಸವ ಕ್ರೀಡಾಂಗಣ, ಕೋಟೆ ಕೆರೆ ಅವ್ಯವಸ್ಥೆಯ ಆಗರವಾಗಿದ್ದು, ಸಾರ್ವಜನಿಕರು ಮೂಗುಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿಯಾಗಿದೆ ಇದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಉಪಯೋಗವಾಗಿಲ್ಲಾ ಎಂದರು.
ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗಿದ್ದು, ಇಲ್ಲಿಯವರೆಗೂ ರೈತರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ಶೀಘ್ರವಾಗಿ ಕೊಡಬೇಕೆಂದು ಆಗ್ರಹಿಸಿದರು.
ಆಮ್ ಆದ್ಮ ಪಾರ್ಟಿ ಆಗ್ರಹಿಸುತ್ತದೆ. ಮತ್ತು ಬಾಳೆಹೊನ್ನೂರಿನಲ್ಲಿ ರೈತರ ಮೇಲೆ ದೌರ್ಜನ್ಯ ಎಸಗಿದಂತಹ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ದೌರ್ಜನ್ಯಕ್ಕೆ ಆಮ್ ಆದ್ಮ ಪಾರ್ಟಿ ಖಂಡಿಸುತ್ತದೆಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಮಾದ್ಯಮ ಸಂಚಾಲಕರು ಸುಂದರಗೌಡ, ಕಾರ್ಯದರ್ಶಿ ಅಂತೋಣಿ, ಯುವ ಘಟಕದ ಅಧ್ಯಕ್ಷ ಪ್ರಭು, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ವಾಸಿಮ್ ಮುಖಂಡರಾದ ವಿಲಿಯಮ್ ಪಿರೇರಾ ಇದ್ದರು.
A landslide victory for Arvind Kejriwal’s faultless party
Leave a comment