
ತರೀಕೆರೆಯಲ್ಲಿ ಪಾಳು ಬಿದ್ದಿರುವ ಶ್ರೀಗಂಧದ ಕೋಟೆ
ತರೀಕೆರೆ: ಶ್ರೀಗಂಧ ಬೆಳೆದ ರೈತರ ಬದುಕಿಗೆ ಬೆಂಕಿ ಇಟ್ಟ ಸರ್ಕಾರ ನೊಂದ ರೈತರಿಗೆ ದಿಕ್ಕು ತೋರಿಸುವವರು ಯಾರು ? ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಶ್ರೀಗಂಧದ ಕೋಟೆಯನ್ನು 1958 ರಲ್ಲಿ ಆರಂಭಿಸಲಾಗಿತ್ತು.
ತರೀಕೆರೆಯಲ್ಲಿ ಇಂದು ಶ್ರೀಗಂಧದ ಕೋಟೆ ಮುಚ್ಚಿ ಹಲವಾರು ವರ್ಷಗಳಾಗಿವೆ.ಅಂದರೆ ಶ್ರೀಗಂಧ ಕಡಿಮೆಯಾಗಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ . ತರೀಕೆರೆ ತಾಲ್ಲೂಕಿನ ರೈತರು ಶ್ರೀಗಂಧ ಬೆಳೆದು ಕೈ ಸುಟ್ಟುಕೊಂಡಿಲ್ಲಾ ಮೈಗೆ ಬೆಂಕಿ ಹಚ್ಚಿ ಕೊಳ್ಳುವ ದುಸ್ಥಿತಿಗೆ ಬಂದಿದ್ದಾರೆ.
ಶ್ರೀಗಂಧದ ಕೋಟೆಯಲ್ಲಿ ಈ ಭಾಗದಲ್ಲಿ ಬೆಳೆಯುತ್ತಿದ್ದ ಶ್ರೀಗಂಧದ ತುಂಡುಗಳನ್ನು ಶೇಖರಿಸಿ ನಂತರ ಸಣ್ಣ,ಸಣ್ಣ ಪೀಸ್ ಮಾಡಿ ಶಿವಮೊಗ್ಗದಲ್ಲಿ ತಯಾರುಮಾಡುವ ಗಂಧದ ಫ್ಯಾಕ್ಟರಿಗೆ ಸಾಗಿಸಲಾಗುತ್ತಿತ್ತು ಅಂದರೆ ಈ ಪ್ರದೇಶದಲ್ಲಿ ಅಪಾರ ಗಂಧ ನೈಸರ್ಗಿಕವಾಗಿ ಬೆಳೆಯುತ್ತದೆ ಎಂಬುದಕ್ಕೆ ಶ್ರೀಗಂಧದ ಕೋಟೆ ನಿರ್ಮಾಣ ಮಾಡಿರುವುದು ಸಾಕ್ಷಿ ಆಗುತ್ತದೆ.
ಕಳೆದ ಹಲವಾರು ವರ್ಷಗಳಿಂದ ಶ್ರೀಗಂಧ ಬೆಳೆದು ಇತರರು ಬೆಳೆಯಲು ಅರಿವು ಮೂಡಿಸಿದ ಟಿ.ಎನ್.ವಿಶುಕುಮಾರ್ ಪಾಲಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವವಾಗಿದೆ. ಬೆಂಗಳೂರು ಟೂ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಗೆ ಶ್ರೀಗಂಧ ಬೆಳೆದ ಜಾಗ ಬಿಟ್ಟುಕೊಡಲು ರೈತರು ತಯಾರಿದ್ದಾರೆ.ಆದರೆ ಅರಣ್ಯ ಇಲಾಖೆ ಮತ್ತು ಸರ್ಕಾರ ಬೆಳೆಗೆ ನ್ಯಾಯಯುತ ಬೆಲೆ ನಿಗಧಿಪಡಿಸದೆ ರೈತರನ್ನು ಕಷ್ಟಕ್ಕೆ ತಳ್ಳುತ್ತಿದೆ.
ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬ ಇಬ್ಬಗೆಯ ನೀತಿ ಮತ್ತು ಆಡಳಿತದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಂದಾಯ ಇಲಾಖೆಗೆ ಕಣ್ಣಿಲ್ಲ ಅರಣ್ಯ ಇಲಾಖೆಗೆ ತಲೆ ಇಲ್ಲ ಹೀಗಾಗಿ ಕಳೆದ ವಾರ ವಿಶುಕುಮಾರ್ ಗೆ ಸೇರಿದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.ರೈತರ ಪ್ರತಿಭಟನೆಗೆ ಸೊಪ್ಪು ಹಾಕದೆ ಸಮಸ್ಯೆ ಬಿಗಡಾಯಿಸುವಂತೆ ಮಾಡಿದ್ದಾರೆ.
ಈ ಸಂಬಂಧ ರೈತ ವಿಶುಕುಮಾರ್ ರಾಜಧಾನಿ ಯ ವಿಧಾನ ಸೌಧದ ಬಳಿಯಿದ್ದ ಶ್ರೀಗಂಧ ಗಿಡದ ರೆಂಬೆ ಕಡಿದು ತನ್ನ ನೋವು ತೊಡಗಿಕೊಂಡರು ಕಣ್ಣು, ಕಿವಿ,ಮೂಗಿಲ್ಲದ ಜನಪ್ರತಿನಿಧಿ ಗಳು ಮತ್ತು ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುವುದು ನೋಡಿದರೆ ಶ್ರೀಗಂಧದ ನಾಡು ಮತ್ತು ಬೀಡಾಗಿದ್ದ ಕರ್ನಾಟಕ ವನ್ನು ಬರುಡು ಭೂಮಿ ಮಾಡಲು ಹೊರಟಂತೆ ಕಾಣುತ್ತಿದೆ.
ನಿತ್ಯ ಹೋರಾಟ ನಡೆಸುತ್ತಿರುವ ವಿಶುಕುಮಾರ್ ನಂತಹ ರೈತರ ಜೊತೆಗೆ ಸಂಘ ಸಂಸ್ಥೆಗಳು ಮತ್ತು ಸಂಘಟನೆಗಳು ಕೈಜೋಡಿಸ ಬೇಕಾಗಿದೆ. ನಿನ್ನೆ ದಿನ ಕೂಡ ಪ್ರತಿಭಟನೆ ಮಾಡಿ ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಶ್ರೀಗಂಧದ ಮರಗಳಿಗೆ ನ್ಯಾಯಯುತ ಬೆಲೆ ನೀಡುವ ಜವಾಬ್ದಾರಿ ಸರ್ಕಾರದ್ದು .
Who is the direction for the farmers who were burnt for the scent of sandalwood?
Leave a comment