ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅವರು ಈ ವರ್ಷದ ‘ಚೈತ್ರೋತ್ಸವ ಫಲಪುಷ್ಪ ಪ್ರದರ್ಶನ’ದ ಪೋಸ್ಟರ್ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಈ ಸೌಂದರ್ಯದ ಹಬ್ಬದ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಜಿಲ್ಲೆಯ ಜನತೆಗೆ ಸ್ವಾಗತ ಕೋರಿದ್ದಾರೆ.
ಕಾಫಿನಾಡಿನ ಜನರಿಗೆ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಜನವರಿ 26 ರಿಂದ 28 ರವರೆಗೆ ಚಿಕ್ಕಮಗಳೂರಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ‘ಚೈತ್ರೋತ್ಸವ ಫಲಪುಷ್ಪ ಪ್ರದರ್ಶನ-2026’ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅವರು ಜನವರಿ 26 ರಂದು ಬೆಳಗ್ಗೆ 10:00 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿಯ ಪ್ರದರ್ಶನದ ಹೈಲೈಟ್ ಎಂದರೆ ಹೂವುಗಳಿಂದ ಸಿದ್ಧವಾಗಲಿರುವ ‘ಭದ್ರಬಾಲ್ಯ’ ಮತ್ತು ‘ನಾಡಲೋಕ’ ಕಲಾಕೃತಿಗಳು. ಇದರೊಂದಿಗೆ ಮಹಿಳಾ ವಿಶ್ವಕಪ್ ಕ್ರಿಕೆಟ್ ತಂಡದ ಮಾದರಿ, ಶಾರದಾಂಬೆ ಮೂರ್ತಿ ಹಾಗೂ ಸಾಲುಮರದ ತಿಮ್ಮಕ್ಕ ಅವರ ಪ್ರತಿಕೃತಿಗಳು ಹೂವು ಮತ್ತು ಸಿರಿಧಾನ್ಯಗಳ ಅಲಂಕಾರದಲ್ಲಿ ಕಣ್ಮನ ಸೆಳೆಯಲಿವೆ.
ಸುಮಾರು 8000ಕ್ಕೂ ಹೆಚ್ಚು ಹೂಕುಂಡಗಳ ಜೋಡಣೆ, ಕಾಫಿ ಬೆಳೆಯ ವಿಶೇಷ ಅರ್ಚ್ ಈ ಬಾರಿ ಪ್ರದರ್ಶನದ ಅಂದವನ್ನು ಹೆಚ್ಚಿಸಲಿವೆ. ಕೇವಲ ಹೂವುಗಳಷ್ಟೇ ಅಲ್ಲದೆ, ಪ್ರಾಣಿ-ಪಕ್ಷಿಗಳ ತರಕಾರಿ ಕೆತ್ತನೆಗಳು, ಅಪರೂಪದ ಹಣ್ಣು-ತರಕಾರಿಗಳ ಪ್ರದರ್ಶನ ಹಾಗೂ ಮಲೆನಾಡು-ಕರಾವಳಿಯ ಪುರಾತನ ನಾಣ್ಯಗಳ ಸಂಗ್ರಹವೂ ಇಲ್ಲಿರಲಿದೆ. ಇಲಾಖೆಗಳ ವತಿಯಿಂದ ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ರೇಷ್ಮೆ ಹುಳುವಿನ ಜೀವನ ಚಕ್ರದ ಬಗ್ಗೆ ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗುತ್ತಿದೆ.
ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ಹಾಗೂ ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕಿ ಮಂಗಳ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗಾಗಿ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಮೋಹನ್ ಸೇರಿದಂತೆ ವಿವಿಧ ಇಲಾಖೆಯ ಗಣ್ಯರು ಭಾಗವಹಿಸಿ ತಮ್ಮ ಸಹಕಾರದ ಭರವಸೆ ನೀಡಿದರು.
‘Chaitrotsava Flower Exhibition-2026’
Leave a comment