Home namma chikmagalur chikamagalur ಸಕಲ ಜೀವರಾಶಿಗೆ ಒಳಿತನ್ನು ಬಯಸುವುದು ಹಿಂದೂ ಧರ್ಮ
chikamagalurHomeLatest Newsnamma chikmagalur

ಸಕಲ ಜೀವರಾಶಿಗೆ ಒಳಿತನ್ನು ಬಯಸುವುದು ಹಿಂದೂ ಧರ್ಮ

Share
Share

ಚಿಕ್ಕಮಗಳೂರು: ಜಗತ್ತಿನ ಸಕಲ ಜೀವರಾಶಿಗೆ ಸರ್ವೇ ಜನೋ ಸುಖಿನೋ ಭವಂತು ಎಂಬ ಒಳಿತನ್ನೇ ಬಯಸುವ ಹಿಂದೂ ಧರ್ಮ ವೈಶಿಷ್ಟತೆಯಿಂದ ಕೂಡಿದೆ. ಪರಸ್ಪರ ಪ್ರೀತಿ, ಸ್ನೇಹತ್ವ ಹಾ ಗೂ ಬದುಕಿನ ಮೌಲ್ಯಗಳನ್ನು ತುಂಬುವ ಶಕ್ತಿ ಹಿಂದುತ್ವದಲ್ಲಿ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭಂಜನ್ ಸೂರ್ಯ ತಿಳಿಸಿದರು.

ನಗರದ ಗಾಯತ್ರಿದೇವಿ ಸಮುದಾಯ ಭವನದಲ್ಲಿ ಭಾನುವಾರ ಕೆಂಪನಹಳ್ಳಿ ವಸತಿ ಹಿಂದೂ ಸಮಾ ಜೋತ್ಸವ ಆಯೋಜನಾ ಸಮಿತಿ ಆಯೋಜಿಸಿದ್ಧ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊ ಂಡು ಅವರು ಮಾತನಾಡಿದರು.

ಸನಾತನ ಹಿಂದೂ ರಾಷ್ಟ್ರದ ಮೇಲೆ ಅನೇಕ ವಿದೇಶಿಗರು ಭೂತಕಾಲದಲ್ಲಿ ಆಕ್ರಮಣ ಮತ್ತು ಆಘಾತ ನಡೆಸಿ ಕೋಟ್ಯಾಂತರ ಮೌಲ್ಯದ ಸಂಪತ್ತು ಲೂಟಿ ಮಾಡಿದರೂ ಸೋಲದೇ, ಭವ್ಯಭಾರತ ಶ್ರೀಮಂತಿಕೆ ಉ ಳಿಸಿಕೊಂಡಿದೆ. ಪೂರ್ವಿಕರ ಬಲಿಷ್ಟ ಆತ್ಮಶಕ್ತಿ, ಸಂಘರ್ಷ ಮತ್ತು ಒಗ್ಗಟ್ಟಿನ ಸಾಮರ್ಥ್ಯದಿಂದ ರಾಷ್ಟ್ರ ಜೀವಂ ತಿಕೆ ಕಾಪಾಡಿಕೊಂಡಿದೆ ಎಂದರು.

ವಿಶ್ವದ ಎದುರು ಹಿಂದೂ ಸಮಾಜವನ್ನು ಕುಗ್ಗಿಸುವ ಸಲುವಾಗಿ ಕೆಲವು ಕುತಂತ್ರಿಗಳು ಜಾತಿ, ಧರ್ಮ ದ ನಡುವೆ ಅಸ್ಪಸ್ಥಶ್ಯತೆ ಎಂಬ ಬೀಜ ಭಿತ್ತಿ ಒಡೆದಾಳಿಸುತ್ತಿದೆ. ಭಾರತದ ಹಿಂದೂ ಸಂಸ್ಕೃತಿ, ಸಂಪ್ರದಾಯ, ಪದ್ಧತಿ ಬುಡಮೇಲು ಮಾಡಿ ಹಿಂದುತ್ವದ ಅಳಿವಿಗೆ ಕೆಲಸ ಮಾಡುತ್ತಿದೆ. ಈ ಬಗ್ಗೆ ಹಿಂದೂ ಸಮಾಜವು ಎ ಚ್ಚೆತ್ತುಕೊಂಡು ಹಿಂದುತ್ವದ ಉಳಿವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ರಾಮಾಯಣ ನಿರ್ಮಾತೃ ವಾಲ್ಮೀಕಿಯವರು ಪರಿಶಿಷ್ಟ ಪಂಗಡದ ಸಮುದಾಯದ ಶ್ರೇಷ್ಟ ವ್ಯಕ್ತಿ. ಹೀ ಗಾಗಿ ಹಿಂದುತ್ವದಲ್ಲಿ ಜಾತಿ ತಾರತಮ್ಯವಿಲ್ಲ, ಎಲ್ಲರೂ ನಮ್ಮವರೆಂದು ಭಾವಿಸಿಕೊಂಡು ಮುನ್ನೆಡೆಯಬೇಕು ಆಗ ಭಾರತ ಹಿಂದುತ್ವದ ನೆಲೆಯಲ್ಲಿ ಜೀವಿಸಲು ಸಾಧ್ಯ. ಆ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘ ನಿ ರಂತರವಾಗಿ ಪರಂಪರೆ ಉಳಿಸಲು ಕಾರ್ಯಪ್ರವೃತ್ತವಾಗಿದೆ ಎಂದರು.

ಭಾರತವು ಸ್ವಾತಂತ್ರ್ಯ ಪೂರ್ವ ಹಾಗೂ ಮಧ್ಯಕಾಲಘಟ್ಟದಲ್ಲಿ ನಿವಾಸಿಗಳಿಗೆ ವಿದ್ಯುತ್ ಸೌಲಭ್ಯವಿರಲಿ ಲ್ಲ. ಈ ಬಗ್ಗೆ ಸಂಘವು ಮನೆಗಳಿಗೆ ಬೆಳಕನ್ನು ಚೆಲ್ಲುವ, ಕಾಗದ ಪತ್ರ ತಲುಪಿಸುವ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತು. ಅಲ್ಲದೇ ವೈಭವಯುತ ಕಾರ್ಯದಲ್ಲಿ ಸಂಘವು ನಿರತವಾಗಿ ವ್ಯಕ್ತಿ ನಿರ್ಮಾಣ ಜೊತೆಗೆ ಪರಿವರ್ತನೆ ದಾರಿಯಲ್ಲಿ ಸಾಗಿತ್ತು ಎಂದು ಹೇಳಿದರು.

ಭಾರತೀಯರು ಜೀವನದಲ್ಲಿ ರಾಷ್ಟ್ರಾಭಿವೃದ್ದಿಗೆ ಪಂಚ ಪರಿವರ್ತನೆ ಅಂಶಗಳನ್ನು ಅಳವಡಿಸಿಕೊಳ್ಳಬೇ ಕು. ಕುಟುಂಬ ಪ್ರಬೋಧನೆ, ಸಾಮಾಜಿಕ ಸಾಮರಸ್ಯ, ಪರ್ಯಾವರ್ಣ, ನಾಗರೀಕರ ಶಿಷ್ಟಾಚಾರ ಹಾಗೂ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಿಕೊಂಡು ಆತ್ಮನಿರ್ಭಾರವಾಗಬೇಕು. ಇದು ರಾಷ್ಟ್ರದ ಅಭಿವೃದ್ದಿ ಮತ್ತು ಏಕತೆ ಗೆ ಪ್ರತೀಕ ಎಂದು ತಿಳಿಸಿದರು.

ಜೀವನದಲ್ಲಿ ಮಾನವರು ಸಕುಟುಂಬ ಪದ್ಧತಿ, ಸ್ವದೇಶಿ ವಸ್ತು ಉಪಯೋಗ, ಪರಿಸರಕ್ಕೆ ಹಾನಿಯಾ ಗುವ ಕಾರ್ಯಕ್ಕೆ ಕೈಹಾಕದಿರುವುದು, ಫಲವತ್ತತೆ ಭೂಮಿಗೆ ಕೆಮಿಕಲ್‌ನಿಂದ ವಿಷ ಉಣಿಸದಿರುವುದು, ದೇಶ ದ ಅಭಿವೃದ್ದಿ ಕಾನೂನುಪಾಲನೆ, ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿದರೆ ಮಾತ್ರ ಭಾರತ ಜಗತ್ತಿನ ಮು ಂದೆ ಗಟ್ಟಿಯಾಗಿ ನೆಲೆಯೂರಲಿದೆ ಎಂದರು.

ಮಾತೃಶಕ್ತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ರುಕ್ಮಿಣಿ ನಾಗ ರೀಕ ಸಮಾಜದಲ್ಲಿ ಹೆಣ್ಣೆಂಬ ಕೀಳರಿಮೆ ಇರಕೂಡದು. ಹೆತ್ತುಹೊತ್ತ ತಾಯಿಯಿಂದ, ಮಾತು ಕಲಿಸಿದ ಕನ್ನ ಡ ತಾಯಿವರೆಗೂ ಹೆಣ್ಣೆಂಬುದು ಮರೆಯದಿರಿ. ತಾಯಿಯೇ ಮೊದಲು ಗುರು, ಮೊದಲ ಪಾಠಶಾಲೆ ಎಂಬ ಸಾಮಾಜಿಕ ಜ್ಞಾನ ಮೂಡಿಸಿಕೊಳ್ಳಬೇಕು ಎಂದು ಹೇಳಿದರು.

ಹೆಣ್ಣು ಸಂಸ್ಕಾರ, ಸಂಸ್ಕೃತಿಯ ಕಣ್ಣು. ಮಗು ಮೊದಲು ಜನಿಸಿ ನೋಡುವುದೇ ತಾಯಿಯನ್ನೇ ಹೊರ ತು ಬೇರೆಯವರಲ್ಲ. ಪುಟ್ಟ ಪುಟ್ಟ ಹೆಜ್ಜೆಗಳನ್ನು ಮಕ್ಕಳಿಗೆ ಕಲಿಸುವ ಕರುಣಾಮಯಿ ತಾಯಿ. ಆಕೆಗೆ ಅಗಾಧ ವಾದ ಶಕ್ತಿ, ಸಹನೆ, ಜಾಣ್ಮೆಯಿದೆ. ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವ ಶಕ್ತಿ ತು ಂಬುವ ಸಾಮರ್ಥ್ಯ ತಾಯಿಗಿದೆ ಎಂದರು.

ನಗರ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ಉಪಾಧ್ಯಕ್ಷ ಪಿಂಚಡಿ ಅಧ್ಯಕ್ಷತೆ ವಹಿಸಿದ್ದರು . ಬಳಿಕ ಯುವತಿಯರು ಮತ್ತು ಪುಟಾಣೀ ಮಕ್ಕಳಿಂದ ಭರತನಾಟ್ಯ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಿತು.

ಈ ಸಂದರ್ಭದಲ್ಲಿ ಕಾಫಿ ಬೆಳೆಗಾರ ಗುರುವೇಶಗೌಡ, ರಾಮೇಶ್ವರ ದೇವಸ್ಥಾನ ಅರ್ಚಕ ಕೃಷ್ಣಭಟ್ರು, ನಿವೃತ್ತ ಅಬಕಾರಿ ಇಲಾಖೆ ಅಧಿಕಾರಿ ಓಂಕಾರಪ್ಪ, ಸಮಿತಿ ಉಪಾಧ್ಯಕ್ಷರಾದ ರಮೇಶ್ ಅರದೊಳ್ಳಿ, ರಘು, ನಿವೃತ್ತ ಸೈನಿಕ ಮೋಹನ್‌ಶೆಟ್ಟಿ, ಮುಖಂಡರುಗಳಾದ ಲಕ್ಷ್ಮೀಶಾಮರಾವ್, ಸುಶೀಲಮ್ಮ, ಶಶಿ ಅಶೋಕ್, ರುದ್ರೇಶ್, ಪ್ರೇಮಲತಾ ನಾಗರಾಜ್, ರಾಜು ಮತ್ತಿತರರು ಉಪಸ್ಥಿತರಿದ್ದರು.

Hinduism is about wishing well-being to all living beings.

Share

Leave a comment

Leave a Reply

Your email address will not be published. Required fields are marked *

Don't Miss

ಚಿಕ್ಕಮಗಳೂರು ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೆ ಆಗ್ರಹ

ಚಿಕ್ಕಮಗಳೂರು: ಈ ಬಾರಿಯ ಮುಂಗಾರು ಅವಧಿಯಲ್ಲಿ ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಮಳೆ ಕೊರತೆಯಾಗಿದ್ದು, ಕೃಷಿ, ತೋಟಗಾರಿಕೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು...

ಕಡೂರು ಬಸ್ ನಿಲ್ದಾಣದಲ್ಲಿ 50 ಗ್ರಾಂ ತೂಕದ ಚಿನ್ನದ ಸರ ಕಳ್ಳತನ

ಕಡೂರು: ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್ ಒಂದು, ಬಸ್ ಹತ್ತುವ ವೇಳೆ ಮಹಿಳೆಯ ಗಮನ ಬೇರೆಡೆ ಸೆಳೆದು ಕುತ್ತಿಗೆಯಲ್ಲಿದ್ದ ಬರೋಬ್ಬರಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕ್ಷಣಾರ್ಧದಲ್ಲಿ ಎಗರಿಸಿ...

Related Articles

ಕೋಟ್ಯಂತರ ರೂಪಾಯಿ ವಂಚಿಸಿದ ನಕಲಿ ಲೇಡಿ ಪಿಎಸ್‌ಐ ಬಂಧನ

ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು...

ನಲಪಾಡ್ ಹೇಳಿಕೆ ಖಂಡಿಸಿ ಜೆಡಿಎಸ್ ಅಲ್ಪಸಂಖ್ಯಾತ ಘಟಕ ಆಕ್ರೋಶ

ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ...

ಮಳಲೂರು ಏತ ನೀರಾವರಿ ಯೋಜನೆ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಅನುಷ್ಠಾನ ಮತ್ತು ಅರಸನ ನಾಲೆ ಪುನಶ್ಚೇತನ ಯೋಜನೆಗಳ ಕಾಮಗಾರಿಗಳಿಗೆ ಉಂಟಾಗಿರುವ...

2ಬಿ ಮೀಸಲಾತಿ ಮರುಸ್ಥಾಪನೆಗೆ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ...