Home namma chikmagalur chikamagalur ನೀಲಿಯಲ್ಲಿ ಮಿಂದೆದ್ದ ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ 
chikamagalurHomeLatest Newsnamma chikmagalur

ನೀಲಿಯಲ್ಲಿ ಮಿಂದೆದ್ದ ಕೋರೆಗಾಂವ್ ವಿಜಯೋತ್ಸವ ಮೆರವಣಿಗೆ 

Share
Share

ಚಿಕ್ಕಮಗಳೂರು: 12ನೇ ಶತಮಾನದಲ್ಲಿ ಬಸವಣ್ಣನವರನ್ನು ವಿರೋಧಿಸಿದವರು ಇಂದು ಅವರನ್ನು ತಮ್ಮ ಕಬ್ಬಕ್ಕೆ ತೆಗೆದುಕೊಳ್ಳುವ ಯತ್ನ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಶಾದ ವ್ಯಕ್ತಪಡಿಸಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿ ಯಿಂದ ಬುಧವಾರ ಆಯೋಜಿಸಿದ್ದ 208ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಕಾರ್ಯಕ್ರಮದ ವಹಿಸಿ ಮಾತನಾಡಿದರು.

ಸಾನ್ನಿಧ್ಯ 12 ಮತ್ತು 21ನೇ ಶತಮಾನಕ್ಕೆ ಹೆಚ್ಚು ಬದಲಾವಣೆ ಇಲ್ಲ. 12ನೇ ಶತಮಾನದಲ್ಲಿದ್ದ ಸಮಸ್ಯೆಗಳು ಇನ್ನಷ್ಟು ಉಜ್ವಲಿಸುತ್ತಿವೆ. ಜಾತಿಯ ಭೂತ ಇವತ್ತಿಗೂ ಇದೆ. ಮನುಷ್ಯನನ್ನು ಮನುಷ್ಯನಾಗಿ ಕಾಣುವ ಮಾನವೀಯ ಅಂತಃಕರಣವನ್ನು ಬಹಳಷ್ಟು ಜನರು ಕಳೆದುಕೊಂಡಿದ್ದಾರೆ ಎಂದರು.

ಈ ವಿಜಯೋತ್ಸವನ್ನು ವಿಜಯೋತ್ಸವ ಎಂದುಕೊಳ್ಳದೆ ಜಾಗೃತಿಯ ಸಮಾವೇಶವನ್ನಾಗಿ ರೂಪಿಸಬೇಕಿದೆ. ಶಿಕ್ಷಣ, ಸಂಘಟನೆ, ಹೋರಾಟ ಮನೋಭಾವನೆ ಬಹಳ ಮುಖ್ಯ. ಇವತ್ತು ಶಿಕ್ಷಣ ಪಡೆದವರು ಹೋರಾಟ ಮಾಡುತ್ತಿಲ್ಲ. ಹೋರಾಟ ಮಾಡುತ್ತಿರುವವರು ಸಂಘಟನೆಯನ್ನು ಸರಿಯಾಗಿ ಮುನ್ನಡೆಸದ ಕಾರಣ ಬೇರೆಯವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಹೋರಾಟದ ಮನೋಭಾವ ಬೆಳೆಸಬೇಕು. ಸಂಘಟನೆ ಕುಸಿಯದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಎರಡು ಸಂಘಟನೆಗಳಾಗಿರುವುದು ಗಮನಕ್ಕೆ ಬಂದಿದೆ. ಸಂಘಟನೆಗಳು ಒಡೆದು ಚೂರಾಗುವುದಲ್ಲ. ಅದೇ ಒಡೆದ ಚೂರುಗಳಿಂದ ಗಟ್ಟಿಯಾದ ಮಡಕೆ ನಿರ್ಮಾಣ ಮಾಡಬೇಕಿದೆ. ಸಂಘಟನೆ ನಮ್ಮ ಜತೆಗೆ ಇದ್ದಾಗ ಶಕ್ತಿ ಬರುತ್ತದೆ ಎಂಬುದನ್ನು ಗಮನಿಸಬೇಕು. ಮುಂದಿನ ವರ್ಷ ಎರಡೂ ಸಂಘಟನೆಗಳು ಒಟ್ಟಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಬೇಕು ಎಂದು ಕಿವಿಮಾತು ಹೇಳಿದರು.

‘ಈ ರೀತಿಯ ಕಾರ್ಯಕ್ರಮದಲ್ಲಿ ಡಿಜೆಗಿಂತ ಜನಪದ ಕಲೆಗಳಿಗೆ ಆದ್ಯತೆ ನೀಡುವ, ಜನಪದ ಕಲೆಗಳನ್ನು ಬೆಳೆಸುವ ದೃಷ್ಟಿಯಲ್ಲಿ ಯೋಚಿಸಿ ಎಂದರು. ‘ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜೈ ಭೀಮ್ ಚಿಕ್ಕಮಗಳೂರಿನ ಪ್ರಮುಖ ಬೀದಿಯಲ್ಲಿ ಕೋರೆಗಾಂವ್ ವಿಜಯೋತ್ವದ ವಿಜೃಂಭಣೆ ಮೆರವಣಿಗೆ ನಡೆಸಲಾಯಿತು.

ಎಚ್.ಡಿ.ತಮ್ಮಯ್ಯ, ಬುದ್ಧ, ಬಸವ, ಅಂಬೇಡ್ಕರ್ ಅವರಂತಹ ಈ ಮಹಾನ್ ನಾಯಕರು ವ್ಯವಸ್ಥೆಯನ್ನು ಹೋಗಲಾಡಿಸಲು ಹಲವು ಪ್ರಯತ್ನ ನಡೆಸಿದರೂ ಇನ್ನೂ ಜೀವಂತವಾಗಿರುವ ಅದನ್ನು ತೊಡೆದು ಹಾಕಬೇಕು ಎಂದರು.

ಬಸವಣ್ಣ, ಅಂಬೇಡ್ಕರ್ ಅವರನ್ನು ವಿರೋಧಿ ಸಿದವರು ಇಂದು ಅವರ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇಂತಹವರ ಬಗ್ಗೆ ಇಡೀ ಜಗತ್ತಿಗೆ ತಿಳಿಸುವ ಅನಿವಾರ್ಯತೆ ಇಂತಹ ಹೋರಾಟಗಳ ಮೂಲಕ ಯುವ ಪೀಳಿಗೆ ಮಾಡಬೇಕಿದೆ ಎಂದರು.

ಕುಣಿದು ಸಂಭ್ರಮಿಸಿದ ಯುವಜನತೆ: ವಿವಿಧ ದಲಿತ, ಪ್ರಗತಿಪರ ಸಂಘಟನೆಗಳಿಂದ ಭೀಮಾ ಕೋರೆಗಾಂವ್ ವಿಜಯೋತ್ಸವದ ಮೆರವಣಿಗೆ ನಗರದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು. ನಗರದ ಪ್ರಮುಖ ರಸ್ತೆಗಳು ನೀಲಿ ಬಾವುಟದಿಂದ ರಾರಾಜಿಸಿದವು. ನೀಲಿ ಶಾಲು, ನೀಲಿ ಬಾವುಟ ಹಿಡಿದಿದ್ದ ಸಹಸ್ರಾರು ಕಾರ್ಯಕರ್ತರು ಪ್ರಮುಖ ರಸ್ತೆಯಲ್ಲಿ ಹೆಜ್ಜೆಹಾಕುತ್ತಿದ್ದರೆ ರಸ್ತೆಯೇ ನೀಲಿಮಯವಾಗಿ ಕಂಗೊಳಿಸಿತು.

ನಗರದ ಕೆಇಬಿ ವೃತ್ತದಿಂದ ಆರಂಭವಾದ ಮೆರವಣಿಗೆ ಬಸವನಹಳ್ಳಿ ಮುಖ್ಯರಸ್ತೆ ಮೂಲಕ ಸಾಗಿಬಂತು. ದಲಿತಪರ ಸಂಘಟನೆಗಳ ನೂರಾರು ಕಾರ್ಯಕರ್ತರು, ಮುಖಂಡರು ನೀಲಿ ಶಾಲು, ನೀಲಿ ಬಾವುಟದೊಂದಿಗೆ ಸಂಭ್ರಮಿಸಿದರು. ಕೋರೆಗಾಂವ್  ಭೀಮಾ ಮುಗಿಲು ವಿಜಯೋತ್ಸವ, ಡಾ.ಬಿ.ಆರ್.ಅಂಬೇಡ್ಕರ್ ಪರವಾದ ಘೋಷಣೆಗಳು ಮುಟ್ಟಿದವು. ಹನುಮಂತ್ರವೃತ್ತ, ಎಂಜಿ ರಸ್ತೆಯಲ್ಲಿ ಸಾಗಿಬಂದ ಬೃಹತ್ ಮೆರವಣಿಗೆಗೆ ಸಾಂಪ್ರಾದಾಯಿಕ ಕಲಾತಂಡಗಳು ಮೆರುಗು ನೀಡಿದವು.

ಹಳ್ಳಿವಾದ್ಯ, ಬೆಳ್ತಂಗಡಿ ಬೊಂಬೆ ಕುಣಿತ ದೊಂದಿಗೆ ಕೋರೆಗಾವ್ ವಿಜಯೋತ್ಸವದ ಸ್ಮಾರಕದ ಅಲಂಕೃತ ಪ್ರತಿಕೃತಿಯನ್ನು ತರಲಾಯಿತು. ಡಿಜೆ ಧ್ವನಿವರ್ಧಕಕ್ಕೆ ಯುವಜನರು ಕುಣಿದು ಕುಪ್ಪಳಿಸಿದರು. ಎಂಜಿ ರಸ್ತೆ ಮೂಲಕ ಸಾಗಿದ ಮೆರವಣಿಗೆ ಆಜಾದ್ ಪಾರ್ಕ್‌ನಲ್ಲಿ ಸಮಾಪ್ತಿಯಾಗಿ ಅಲ್ಲಿ ಬಹಿರಂಗ ಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ದಲಿತ ಮುಖಂಡ ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಅಂಗಡಿ ಚಂದ್ರು, ಭೀಮ್ ಆರ್ಮಿ ಮುಖಂಡ ರಾಜ್ ಗೋಪಾಲ್, ಕುರುವಂಗಿ ವೆಂಕಟೇಶ್, ರವೀಶ್ ಕ್ಯಾತನಬೀಡು ಸೇರಿದಂತೆ ಮುಖಂಡರು, ನೂರಾರು ಜನರು ಭಾಗಿಯಾಗದ್ದರು.

Koregaon victory parade in blue

 

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...