ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮಗನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಈ ದಾರುಣ ಘಟನೆಯಲ್ಲಿ ಪ್ರದೀಪ್ ಆಚಾರ್ (29) ಎಂಬ ಯುವಕ ಮೃತಪಟ್ಟಿದ್ದಾನೆ.
ಮೃತ ಪ್ರದೀಪ್ನ ತಂದೆ ರಮೇಶ್ ಆಚಾರ್ ಕ್ಷುಲ್ಲಕ ಕಾರಣಗಳಿಗೂ ಆಗಾಗ್ಗೆ ಮನೆಯಲ್ಲೇ ಗಲಾಟೆ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ಅಪ್ಪ-ಮಗನ ನಡುವೆ ಮದ್ಯದ ವಿಚಾರವಾಗಿ ನಿರಂತರ ಜಗಳಗಳು ನಡೆಯುತ್ತಿದ್ದು, ಅವರ ಕಾಟ ತಾಳಲಾರದೆ ಪ್ರದೀಪ್ನ ತಾಯಿ ಕೆಲ ಸಮಯದ ಹಿಂದೆಯೇ ಮನೆ ಬಿಟ್ಟು ಹೋಗಿದ್ದರು.
ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅಪ್ಪ ಮತ್ತು ಮಗ ಇಬ್ಬರೇ ವಾಸವಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ಮದ್ಯಪಾನ ಮಾಡಿದ ರಮೇಶ್ ಆಚಾರ್ ಮಗನೊಂದಿಗೆ ಜಗಳವಾಡಿ ಆಕ್ರೋಶದ ಮಿತಿಮೀರಿ ಮಚ್ಚಿನಿಂದ ಪ್ರದೀಪ್ ಮೇಲೆ ಹಲ್ಲೆ ನಡೆಸಿದ್ದಾನೆ.
ತೀವ್ರವಾಗಿ ಗಾಯಗೊಂಡ ಪ್ರದೀಪ್ ರಕ್ತದ ಮಡುವಿನಲ್ಲಿ ಬಿದ್ದಿದು ಆರೋಪಿಯು ಯಾವುದೇ ಸಹಾಯ ಮಾಡದೇ ಮಲಗಿದ್ದಾನೆ ಎನ್ನಲಾಗಿದೆ.
ಇಡೀ ರಾತ್ರಿ ರಕ್ತಸ್ರಾವದಿಂದ ಬಳಲಿದ ಪ್ರದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಿಗ್ಗೆ ಎದ್ದು ನೋಡಿದ ರಮೇಶ್ ಆಚಾರ್, ಮಗನ ಮೃತದೇಹವನ್ನು ಮನೆಯ ಹಾಲ್ನಿಂದ ಹೊರಾಂಗಣಕ್ಕೆ ಎಳೆದು ತಂದಿರುವುದು ಅಕ್ಕಪಕ್ಕದವರ ಗಮನಕ್ಕೆ ಬಂದಿದೆ.
ಅನುಮಾನಗೊಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
Drunk father hacks son to death
Leave a comment