ಚಿಕ್ಕಮಗಳೂರು: ಚಿಕ್ಕಮಗಳೂರು ಕೆನಲ್ ಕ್ಲಬ್ ವತಿಯಿಂದ ೨ನೇ ವರ್ಷದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನವನ್ನು ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಅನೂಪ್ ತಿಳಿಸಿದರು.
ಅವರು ಬುಧವಾರ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಲಿದ್ದು ಹೊರ ರಾಜ್ಯಗಳಿಂದಲು ಶ್ವಾನಗಳು ಆಗಮಿಸಲಿದೆ. ಪ್ರದರ್ಶನದಲ್ಲಿ ಭಾಗವಹಿಸಿ ವಿಜೇತರಾದ ಶ್ವಾನಗಳಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ಹಾಗೂ ಮೆನ್ ಅಂಡ್ ಉಮೆನ್ ಡಾಗ್ ಹ್ಯಾಂಡಲ್ ಬಹುಮಾನ ಮತ್ತು ವಿಶೇಷ ಶ್ವಾನ ತಳಿಗೆಳಿಗೆ ಬೆಳ್ಳಿ ನಾಣ್ಯವನ್ನು ನೀಡಲಾಗುವುದು ಎಂದು ತಿಳಿಸಿದರು.
ಶ್ವಾನ ಪ್ರಿಯರಿಗಾಗಿ ಒಂದು ವೇದಿಕೆಯನ್ನು ಆಯೋಜಿಸಲಾಗಿದ್ದು. ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವವರು ದೂರವಾಣಿ ಸಂಖ್ಯೆ: ದೀಪಕ್ ೯೦೦೮೦೮೫೪೫೪, ಅಖಿಲೇಶ್ ೯೭೪೩೨೭೨೬೮೪, ರಮೇಶ್ ೭೨೫೯೬೧೫೧೦೪, ಗೌತಮ್ ೮೬೬೦೫೩೬೮೩೪, ಚಂದನ್ ೯೬೩೨೮೨೯೬೩೩, ಉದಯ್ಕುಮಾರ್ ೯೮೮೦೦೨೧೩೩೧ ಕರೆ ಮಾಡಿ ನೊಂದಾಯಿಸುಕೊಳ್ಳಬೇಕಾಗಿ ಈ ಮೂಲಕ ತಿಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಕೆನಲ್ ಕ್ಲಬ್ ಪ್ರ.ಕಾರ್ಯದರ್ಶಿ ಉದಯ್ ಕುಮಾರ್, ಖಜಾಂಚಿ ಚಂದನ್ಅರಸ್, ದೀಪಕ್ ಉಪಸ್ಥಿತರಿದ್ದರು.
State-level city dog show on December 28th
Leave a comment