ಚಿಕ್ಕಮಗಳೂರು: ೭೦ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಂದೇ ಮಾತರಂ ಟ್ರಸ್ಟ್ ವತಿಯಿಂದ ಪುಟಾಣಿ ಮಕ್ಕಳಿಗೆ ನಾಡಿನ ಹೆಮ್ಮೆಯ ರಾಜಮಹಾರಾಜರು, ನಾಯಕರು, ಪಾಳೆಗಾರರ ಕುರಿತ ಛದ್ಮ ವೇಷ ಸ್ಪರ್ಧೆಯನ್ನು ನಗರದ ಶಂಕರಮಠದ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ನಾಡಿನ ಹಿರಿಮೆಯನ್ನು ಬೆಳೆಸಿ ಅಚ್ಚಳಿಯದೇ ಉಳಿದಿರುವ ನಾಯಕರನ್ನು ಸ್ಮರಿಸುವ ಸಲುವಾಗಿ ಪುಟಾಣಿ ಮಕ್ಕಳಲ್ಲಿ ಛದ್ಮವೇಷ ಏರ್ಪಡಿಸಿ ಇತಿಹಾಸಕಾ ರರ ಮರುಸೃಷಿಸುವ ಕೆಲಸ ಮಾಡಲಾಯಿತು ಎಂದು ತಿಳಿಸಿದರು.
ಪ್ರಸ್ತುತ ನಾಡಿನಲ್ಲಿ ಜನಿಸಿದ ಅನೇಕ ಮಕ್ಕಳಿಗೆ ಇತಿಹಾಸಕಾರರ ಬಗ್ಗೆ ಅರಿವಿಲ್ಲ. ಹಾಗಾಗಿ ಮುಂದಿನ ಪೀಳಿಗೆಗೆ ನಾಡಿಗಾಗಿ ಶ್ರಮಿಸಿದ ರಾಜರು, ನಾಯಕರನ್ನು ತಿಳಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಿ ನಾಯಕರ ಜೀವನಚರಿತ್ರೆಯನ್ನು ಕೊಂಡೊಯ್ಯುವಲ್ಲಿ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಸ್ಪರ್ಧೆಯಲ್ಲಿ ಸುಮಾರು ೩೦ ಮಕ್ಕಳು ಭಾಗವಹಿಸಿ ನಾಡಿನ ಹೆಸರಾಂತ ನಾಯಕರಾದ ಹೊಯ್ಸಳ, ನಾಡಪ್ರಭು ಕೆಂಪೇಗೌಡ, ವೀರ ಮದಕರಿ ನಾಯಕ, ಕಿತ್ತೂರು ರಾಣಿಚೆನ್ನಮ್ಮ, ರಾಣಿ ಅಬ್ಬಕ್ಕ ಹಾಗೂ ಸಂ ಗೊಳ್ಳಿ ರಾಯಣ್ಣ ವೇಷಭೂಷಣ ಧರಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದರು.
ಒಟ್ಟು ಸ್ಪರ್ಧೆಯಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ೩ ರಿಂದ ೫ ವರ್ಷದೊಳಗಿನ ಸ್ಪರ್ಧೆಯಲ್ಲಿ ಲಿಖಿತ್‌ರಾಜ್ ಪ್ರಥಮ, ಭವಿಕಾ ದ್ವೀತಿಯ, ನಿಶ್ವಿನ್ ಸೂರ್ಯ ತೃತೀಯ. ೫-೮ ವರ್ಷದೊಳಗೆ ಕಾವಿ ಜಿ. ರಾವ್ ಪ್ರಥಮ, ಎಂ.ಡಿ.ಜಾಹ್ನವಿ ದ್ವಿತೀಯ, ವಾನಿಶೆಟ್ಟಿ ತೃತೀಯ ಹಾಗೂ ೫ ರಿಂದ ೮ ವರ್ಷದೊಳಗೆ ಎಂ. ಕೆ.ಜಾಹ್ನವಿ ಪ್ರಥಮ, ಹಿಮ ದ್ವೀತೀಯ ಹಾಗೂ ಯಶಸ್ವಿ ತೃತೀಯ ಸ್ಥಾನ ಪಡೆದುಕೊಂಡರು.
ಇದೇ ವೇಳೆ ಟೌನ್ ಮಹಿಳಾ ಸಮಾಜ ನಿವೃತ್ತ ಕನ್ನಡ ಶಿಕ್ಷಕಿ ನಾಗರತ್ನ ಕನ್ನಡಸೇವೆಯನ್ನು ಗುರುತಿಸಿ ಟ್ರಸ್ಟ್ ವತಿಯಿಂದ ಶ್ರೇಷ್ಟ ಕನ್ನಡತಿ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಪದಾ ಧಿಕಾರಿಗಳು, ಪಾಲಕರು ಉಪಸ್ಥಿತರಿದ್ದರು.
Kannada Rajyotsava – Disguise competition for young children
Leave a comment