ಚಿಕ್ಕಮಗಳೂರು: – ಸವಿತಾ ಸಮಾಜ ಸಂಬಂಧಿತ ನಿಷೇಧ ಪದ ಬಳಸುವವರ ವಿರು ದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಮಂದಿರ ಆರ್ಯ ನಯನಜ ಕ್ಷತ್ರೀಯ ಸಂಘದ ಮುಖಂಡ ರುಗಳು ಮಂಗಳವಾರ ಶಿರಸ್ತೇದಾರ್ ಹೇಮಂತ್ಕುಮಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ನಗರಾಧ್ಯಕ್ಷ ಸಿ.ಎಂ.ಯೋಗೀಶ್ ಮಾತನಾಡಿ ಹಲವು ದಶಕಗಳಿಂದ ಸವಿತಾ ಸ ಮಾಜವು ಜಾತಿ ನಿಂದನೆ, ಅಸ್ಪೃಶ್ಯತೆ ಸೇರಿದಂತೆ ತುಳಿತಕ್ಕೆ ಒಳಗಾಗುತ್ತಿದೆ. ಇದರಿಂದ ಸಮಾಜವು ಮುಖ್ಯ ವಾಹಿನಿಗೆ ಬರಲು ಪ್ರಯತ್ನಗಳು ನಿರಂತರವಾಗಿ ಸಾಗುತ್ತಲೇ ನಡೆಯುತ್ತಿದೆ ಎಂದರು.
ಇದಕ್ಕೆ ಪೂರಕವಾಗಿ ಬೆಂಕಿಗೆ ತುಪ್ಪ ಸುರಿಯುವಂತೆ ವಿವಿಧ ಕಾರಣಗಳಿಂದ ಸಂಬಂಧವಿಲ್ಲದ ವಿಷ ಯಗಳಿಗೆ ಬೇರೊಬ್ಬ ವ್ಯಕ್ತಿಯನ್ನು ನಿಂದಿಸುವ ಭರದಲ್ಲಿ ಸಮಾಜದ ನಿಷೇಧ ಪದವನ್ನು ಸಾರ್ವತ್ರಿಕ ವ್ಯಕ್ತಿ ಗಳು ಮತ್ತು ನಾಗರೀಕ ಸಮಾಜವನ್ನು ಕಟ್ಟುವ ಮುಂದಾಳತ್ವವನ್ನು ವಹಿಸುವ ರಾಜಕೀಯ ನಾಯಕರು, ಪ್ರಭಾವಿ ವ್ಯಕ್ತಿಗಳಿಗೆ ಈ ಪದ ಬಳಸುತ್ತಿದ್ದಾರೆ ಎಂದು ಹೇಳಿದರು.
ನಿಷೇಧ ಪದ ಬಳಕೆಯಿಂದ ಸಮುದಾಯವು ಸ್ವಾಭಿಮಾನದ ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ ಹಾಗೂ ತುಳಿತಕ್ಕೆ ಒಳಗಾಗಿರುವ ಸಮುದಾಯದ ಪರವಾಗಿ ಪ್ರತಿನಿಧಿಸುವ ಹಾಗೂ ನಮ್ಮಂತ ಜನಾಂಗದ ಭರವಸೆಯ ಬೆಳಕಾಗಿರುವ ಅಧಿಕಾರಿಗಳು ಈ ಬಹುದೊಡ್ಡ ಸಮಸ್ಯೆಗೆ ಹಿತಶ್ರೀ ಹಾಡುವಂಥ ಕಠಿಣ ಕಾ ನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಶ್ರೀಧರ್, ನಗರ ಗೌರವಾಧ್ಯಕ್ಷರಾದ ಬಿ.ವೆಂಕಟೇಶ್, ಕೆ.ಟಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ಎನ್.ಸತೀಶ್, ಖಜಾಂಚಿ ಎನ್.ಗಿರೀಶ್, ಯುವವೇದಿಕೆ ಅಧ್ಯಕ್ಷ ಧನರಾಜ್ ಹಾಜರಿದ್ದರು.
Appeal for strict action against users of banned words
Leave a comment