Home Crime News ಎನ್‌ಆರ್‌ ಪುರದಲ್ಲಿ ಗೃಹಿಣಿ ಪೂಜಾ ಅನುಮಾನಾಸ್ಪದ ಸಾವು
Crime NewschikamagalurHomeLatest Newsnamma chikmagalur

ಎನ್‌ಆರ್‌ ಪುರದಲ್ಲಿ ಗೃಹಿಣಿ ಪೂಜಾ ಅನುಮಾನಾಸ್ಪದ ಸಾವು

Share
Share

ಚಿಕ್ಕಮಗಳೂರು:   ಎನ್‌ಆರ್‌ ಪುರದಲ್ಲಿ ಗೃಹಿಣಿ ಪೂಜಾ ಅನುಮಾನಾಸ್ಪದ ಸಾವಿನ ಬಗ್ಗೆ ಪೂಜಾಳ ತಂದೆ ಈಶ್ವರಪ್ಪ ಅತ್ತೆ-ಮಾವನ ಮನೆಯವರನ್ನೇ ದೂರಿದ್ದಾರೆ. ಈಗಾಗಲೇ ಪೊಲೀಸರು ಪೂಜಾಳ ಪತಿ ಶರತ್‌ನನ್ನು ಬಂಧಿಸಿದ್ದಾರೆ. ಆದರೆ, ಇದಕ್ಕೆ ಮೂಲ ಕಾರಣರಾಗಿರುವ ಶರತ್‌ನ ಅಮ್ಮ ಹಾಗೂ ಅಕ್ಕನನ್ನು ಬಂಧಿಸಬೇಕು ಎಂದು ಈಶ್ವರ್‌ ಒತ್ತಾಯಿಸಿದ್ದಾರೆ.

ನನ್ನ ಮಗಳನ್ನು ಪ್ರೀತಿಯಿಂದ ಮುದ್ದಾಗಿ ಸಾಕಿದ್ದೆ. ಮದುವೆಗೆ ಈ ಸಂಬಂಧ ಬಂದಾಗ ಕುಟುಂಬ ಚೆನ್ನಾಗಿದೆ. ಆಸ್ತಿ, ಮನೆ ಒಳ್ಳೆಯದಿದೆ. ಮಗಳು ಸುಖವಾಗಿರುತ್ತಾಳೆ ಎಂದುಕೊಂಡು ಮದುವೆ ಮಾಡಿಕೊಟ್ಟೆವು. ಆದರೆ, ಹೀಗಾಗಿದೆ. ಈ ರೀತಿ ಸಾಯುತ್ತಾಳೆ ಎಂದು ಗೊತ್ತಿದ್ದರೆ ಆಕೆಯನ್ನು ನಾನು ಹೊಳೆಗೆ ಹಾಕುತ್ತಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಉಳಿಸೋಕೆ ಆದ್ರೆ ಖಂಡಿತಾ ಉಳಿಸ್ತೀನಿ. ಇಲ್ಲ ಅಂದ್ರೆ ಏನೂ ಮಾಡೋಕೆ ಆಗಲ್ಲ. ನಾನು ಅಜ್ಜ ಆಗಿರುವ ಕಾರಣಕ್ಕೆ ಮಗುವನ್ನ ಕರೆದುಕೊಂಡು ಹೋಗ್ತೇನೆ.ಆದಷ್ಟು ಕಾಪಾಡುತ್ತೇನೆ. ಜೀವಕ್ಕಿಂತ ಹೆಚ್ಚಾಗಿ ನನ್ನ ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತೇನೆ. ಆದ್ರೆ ಅವನನ್ನು ಕಾಯೋನು ದೇವರು’ ಎಂದು ಮೊಮ್ಮಗನ ಬಗ್ಗೆ ಹೇಳಿದ್ದಾರೆ.

ಆದರೆ ಮೊಮ್ಮಗನ ವಿಚಾರದಲ್ಲೂ ಬಂದು ಆಕೆಯ ಗಂಡನ ಮನೆಯವರು ಮೋಸ ಮಾಡುತ್ತಾರೆ. ಅದಕ್ಕೂ ಹೇಸುವವರಲ್ಲ ಅವರು. ಅದನ್ನು ಆಸ್ಪತ್ರೆಯಲ್ಲೂ ನೋಡಿದ್ದೇವೆ. ಆಸ್ಪತ್ರೆಯಲ್ಲೇ ಇದ್ದೇ ಆಕೆಯ ಸಾವನ್ನ ನಮಗೆ ಮುಚ್ಚಿಟ್ಟಿದ್ದರು. ಅವರ ಇಡೀ ಜೀವನವೇ ಮೋಸ. ಇದೆಲ್ಲವನ್ನೂ ನನ್ನ ಮಗಳು ಸುಧಾರಿಸಿಕೊಂಡು ಹೋಗಿದ್ದಳು. ಸಂಸಾರವನ್ನು ಬಹಳ ಗುಟ್ಟು ಮಾಡಿಕೊಂಡು ಹೋದಳು. ನಾವೂ ಕೂಡ ಆದಷ್ಟು ಸುಧಾರಿಸಿಕೊಂಡು ಹೋಗುವಂತೆ ಹೇಳಿದ್ದೆವು. ಗಂಡ-ಹೆಂಡ್ತಿ ಚೆನ್ನಾಗಿರಬೇಕು ಅನ್ನೋದೇ ನನ್ನ ಉದ್ದೇಶವಾಗಿತ್ತು ಎಂದಿದ್ದಾರೆ.

ನನ್ನ ಮಗಳನ್ನ ಅವರು ಕೊಂದಿದ್ದಾರೆ. ಇದಕ್ಕೆ ನನಗೆ ನ್ಯಾಯ ಬೇಕು. ಆಕೆ ಎಂಎಸ್‌ಡಬ್ಲ್ಯುವರೆಗೆ ಓದಿದ್ದಾಳೆ. ಇವರಿಗೆ ನನ್ನ ಮಗಳನ್ನು ಕೊಡೋ ಬದಲು ಆಕೆಯನ್ನು ಹೊಳೆಗೆ ಹಾಕಬಹುದಿತ್ತು. ತಪ್ಪು ನಮ್ದೂ ಇದೆ. ಆದ್ರೆ ಯೋಗ. ಅವರು ಬಂದು ಕೇಳಿದರು. ಅನುಕೂಲವಂಥವರು ಆಗಿದ್ದರು. ಆಸ್ತಿ, ಮನೆ ಎಲ್ಲಾ ಇತ್ತು. ಸರಿ ಅಂದ್ಕೊಂಡು ಮದುವೆ ಮಾಡಿ ಕೊಟ್ಟೆವು. ನಾವು ಮದುವೆ ಮಾಡಿಕೊಟ್ಟಿದ್ದು ತಪ್ಪು ಅನ್ನೋದು ಮೂರು ವರ್ಷದೊಳಗೆ ಆತ ತಿಳಿಸಿದ ಎಂದು ತಿಳಿಸಿದ್ದಾರೆ.

ನಾನು ಕೇಳಿಕೊಳ್ಳೋದು ಇಷ್ಟೇ. ಆತನಿಗೆ ತನ್ನ ಮಗ ಅನ್ನೋ ಪ್ರೀತಿಯೇ ಇಲ್ಲ. ಮಗುವಿಗಾದರೂ ಒಂದು ಜೀವನ ಮಾಡಿಕೊಡಿ. ಅವನ ಆರೋಗ್ಯ ಸರಿ ಇಲ್ಲ. ನಿಮಗೆ ಸಾಧ್ಯವಾದರೆ ಅವನಿಗೆ ಏನಾದರೂ ಮಾಡಿ. ಮೊಮ್ಮಗನ ಆರೈಕೆಯನ್ನು ನಾನೇ ಮಾಡುತ್ತಿದ್ದೇನೆ. ಅವನನ್ನು ಅವರು ಕೊಂದು ಬಿಡುತ್ತಾರೆ. ನಿಮ್ಮ ಆಸ್ತಿ-ಪಾಸ್ತಿಯಲ್ಲಿ ಹುಡುಗನಿಗೆ ಏನಾದರೂ ಮಾಡಿ. ನೀವು ಚೆನ್ನಾಗಿರಿ, ನನ್ನ ಮೊಮ್ಮಗನನ್ನು ನೋಡಿಕೊಳ್ಳಿ. ಅವರಿಗೆ ಬೇಕಾಗಿರೋದು ಹಣ ಮಾತ್ರ ಎಂದು ಹೇಳಿದ್ದಾರೆ.

ಶಿವಮೊಗ್ಗ ಮೂಲದ ಪೂಜಾರನ್ನು ಮೂರು ವರ್ಷದ ಹಿಂದೆ ಎನ್.ಆ‌ರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬಾತನೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಆದರೆ, ವಿವಾಹವಾದ ದಿನದಿಂದಲೂ ಆಕೆಗೆ ನಿರಂತರ ಚಿತ್ರಹಿಂಹೆ ನೀಡಿದ್ದರಿಂದ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗಂಡ ಶರತ್ ಮತ್ತು ಆತನ ತಂದೆ, ತಾಯಿ ಹಾಗೂ ಸಹೋದರಿ ಸೇರಿಕೊಂಡು ಮದುವೆಯಾಗಿ ಗಂಡನ ಮನೆ ಸೇರಿದ ದಿನಂದಿಂದಲೆ ಪೂಜಾಳಿಗೆ ದಿನನಿತ್ಯ ಕಿರುಕುಳ ನೀಡಲು ಆರಂಭಿಸಿದ್ದರು.

Housewife Pooja dies suspiciously in NR Pura

Share

Leave a comment

Leave a Reply

Your email address will not be published. Required fields are marked *

Don't Miss

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

ವಿವಾಹಿತ ಮಹಿಳೆಗಾಗಿ ನಡೆದ ಜಗಳದಲ್ಲಿ ಕೈ ಕಟ್

ಎನ್.ಆ‌ರ್.ಪುರ: ವಿವಾಹಿತ ಮಹಿಳೆಯೊಬ್ಬರಿಗಾಗಿ ಇಬ್ಬರು ವ್ಯಕ್ತಿಗಳು ಲಾಂಗು ಮಚ್ಚಿನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆ‌ರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗಂಡನಿಂದ ದೂರವಿದ್ದ ಮಹಿಳೆಯೊಬ್ಬರ ವಿಚಾರವಾಗಿ ಶೇಷಗಿರಿ...

Related Articles

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...

ಗೃಹಜ್ಯೋತಿ ಯೋಜನೆ ಅರ್ಹ ಗುರುತಿಸುವ ಉದ್ದೇಶದಿಂದ ಪರಿಷ್ಕರಣೆ

ಚಿಕ್ಕಮಗಳೂರು: ಸರ್ಕಾರ ಗೃಹಜ್ಯೋತಿ ಯೋಜನೆಯನ್ನು ಸಾರಾಸಗಟಾಗಿ ಪರಿಷ್ಕರಿಸುವ ಅಥವಾ ಕಡಿತಗೊಳಿಸುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು...