Home namma chikmagalur ಕೌಟುಂಬಿಕ ಕಲಹಕ್ಕೆ ಪತಿಯಿಂದ ಪತ್ನಿಯ ಕೊಲೆ
namma chikmagalurchikamagalurHomeLatest News

ಕೌಟುಂಬಿಕ ಕಲಹಕ್ಕೆ ಪತಿಯಿಂದ ಪತ್ನಿಯ ಕೊಲೆ

Share
Share

ಚಿಕ್ಕಮಗಳೂರು: ಕೌಟುಂಬಿಕ ಕಲಹ ಒಂದು ಜೀವವನ್ನು ಬಲಿ ಪಡೆದ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ಗಂಡನ ಮನೆ ಬಿಟ್ಟು ತವರು ಸೇರಿದ್ದ ಪತ್ನಿಗೆ ಆಕೆಯ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸಾವನ್ನಪ್ಪಿದ ದುರ್ದೈವಿ ಮಹಿಳೆಯನ್ನು 32 ವರ್ಷದ ನೇತ್ರಾ ಎಂದು ಗುರುತಿಸಲಾಗಿದೆ.

ನೇತ್ರಾ ಅವರು ಐದು ತಿಂಗಳ ಹಿಂದಷ್ಟೇ ಸಕಲೇಶಪುರದ ನಿವಾಸಿ ನವೀನ್ ಎಂಬುವವರೊಂದಿಗೆ ವಿವಾಹವಾಗಿದ್ದರು. ಆದರೆ, ವಿವಾಹವಾದ ಕೆಲವೇ ದಿನಗಳಲ್ಲಿ ದಂಪತಿಗಳ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು.

ಕಲಹವು ತೀವ್ರ ಸ್ವರೂಪ ಪಡೆದ ಕಾರಣ, ನೇತ್ರಾ ಅವರು ಸುಮಾರು ಮೂರು ತಿಂಗಳ ಹಿಂದೆ ಪತಿಯ ಮನೆಯನ್ನು ಬಿಟ್ಟು, ಹೊಸಳ್ಳಿ ಗ್ರಾಮದಲ್ಲಿರುವ ತಮ್ಮ ತವರು ಮನೆಗೆ ಮರಳಿದ್ದರು.

ಪತ್ನಿ ತವರು ಸೇರಿದ್ದರಿಂದ ಕೋಪಗೊಂಡಿದ್ದ ಪತಿ ನವೀನ್, ಹೇಗಾದರೂ ಮಾಡಿ ಅವಳನ್ನು ಹಿಂತಿರುಗಿಸುವ ಅಥವಾ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಭಾನುವಾರ ರಾತ್ರಿ ಹೊಸಳ್ಳಿ ಗ್ರಾಮದಲ್ಲಿರುವ ನೇತ್ರಾಳ ಮನೆಗೆ ಬಂದಿದ್ದಾನೆ.

ರಾತ್ರಿ ಊಟ ಮುಗಿಸಿ ಮನೆಯ ಹೊರಗೆ ನಿಂತಿದ್ದ ನೇತ್ರಾಳನ್ನು ನವೀನ್ ಏಕಾಏಕಿ ತಡೆದು ಚಾಕುವಿನಿಂದ ಇರಿದು ತಕ್ಷಣವೇ ಸ್ಥಳದಿಂದ ಎಸ್ಕೆಪ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇತ್ರಾ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಆಲ್ಲೂರು ಪೊಲೀಸ್ ಠಾಣೆಯ ಸಿಬ್ಬಂದಿ, ಹೆಚ್ಚಿನ ಸಮಯ ವ್ಯರ್ಥ ಮಾಡದೆ ತಮ್ಮದೇ ವಾಹನದಲ್ಲಿ ನೇತ್ರಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನೇತ್ರಾ ದಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Husband kills wife over family dispute

Share

Leave a comment

Leave a Reply

Your email address will not be published. Required fields are marked *

Don't Miss

ಡಾ.ಮಂಜುನಾಥ್ ಚಿಕ್ಕ‌ಮಗಳೂರು ಡಿಎಚ್ಒ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕ‌ಮಗಳೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಕೆ.ಮಂಜುನಾಥ್ ನೇಮಕಗೊಂಡಿದ್ದಾರೆ. ಈ ಹಿಂದೆ ಡಿಎಚ್ ಒ ಆಗಿದ್ದ ಅಶ್ವಥ್ ಬಾಬು ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾ ಸಂತಾನೋತ್ಪತ್ತಿ...

ಹಸಿರು ಚಾದರ್ ಅರ್ಪಿಸುವುದು ಹೊಸದಾಗಿ ಸೃಷ್ಟಿಸಿದ ಆಚರಣೆಯಲ್ಲ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ದರ್ಗಾದ ಐತಿಹಾಸಿಕ ಸ್ವರೂಪ, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಹಕ್ಕುಗಳ ಕುರಿತು ಸಯ್ಯದ್ ಬುಡನ್ ಶಾ ಖಾದ್ರಿ ವಂಶಸ್ಥರು ಸ್ಪಷ್ಟನೆಯನ್ನು ನೀಡಿದ್ದಾರೆ. ಇತ್ತೀಚೆಗೆ...

Related Articles

ಕಳಸದಲ್ಲಿ ಕಾಡುಕೋಣ ದಾಳಿಗೆ ಮಹಿಳೆ ಬಲಿ

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಬಿಳಗುಳಿ ಗ್ರಾಮದ ಸಮೀಪ ಕಾಡುಕೋಣ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ...

ರೈತ ಸಂಘ-ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ

ಚಿಕ್ಕಮಗಳೂರು: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ...

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್...