ಬೀರೂರು: ಧರ್ಮ-ಅಧರ್ಮ ಸಂಕಟವಾಯಿತು, ವಿಶ್ವಕ್ಕೆ ಶಾಂತಿ ಭಂಗ ಆಯಿತು, ಧರೆಗೆ ವರುಣನ ಆಗಮನವಾಯಿತು, ಸರ್ವರೂ ಎಚ್ಚರದಿಂದಿರಬೇಕಲೇ ಪರಾಕ್’.
ಇದು ಬೀರೂರು ಪಟ್ಟಣದ ಶ್ರೀಮೈಲಾರಲಿಂಗ ಸ್ವಾಮಿ ಅವರು ನುಡಿದ ಕಾರಣಿಕ.
ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ಮಹೋತ್ಸವ ಮಹಾನವಮಿ ಅಂಗವಾಗಿ ಬೀರೂರಿನ ಬಯಲಿನಲ್ಲಿ ಶುಕ್ರವಾರ ನೆರವೇರಿತು.
‘ಧರ್ಮ- ಅಧರ್ಮ ಸಂಕಟವಾಯಿತು ಎಂದರೆ ಜನರಲ್ಲಿ ಪಾಪಪ್ರಜ್ಞೆ ಕಡಿಮೆಯಾಗುತ್ತಿದೆ. ಧರ್ಮಾಚರಣೆಯಲ್ಲಿ ಆಡಂಬರಕ್ಕೆ ಒತ್ತು ನೀಡಲಾಗುತ್ತಿದ್ದು, ಶ್ರದ್ಧೆಗೆ ನಂತರದ ಸ್ಥಾನ ನೀಡಲಾಗುತ್ತಿದೆ.
ಯಾವುದು ಒಳ್ಳೆಯದು, ಕೆಟ್ಟದು ಎನ್ನುವುದರ ನಡುವಿನ ವಿಶ್ಲೇಷಣೆಯ ಗೆರೆ ತೆಳುವಾಗಿರುವುದು. ವಿಶ್ವಕ್ಕೆ ಶಾಂತಿಯ ಭಂಗವಾಯಿತು ಎಂದರೆ, ಅಸ್ಥಿತ್ವಕ್ಕಾಗಿ ಹೋರಾಟ ನಡೆಸುತ್ತಿರುವ ದೇಶಗಳ ವಿರುದ್ಧ ಬಲಾಢ್ಯ ದೇಶಗಳು ಬಲ ಪ್ರಯೋಗಿಸುವುದು.
ಧರೆಗೆ ವರುಣನ ಆಗಮನವಾಯಿತು ಎಂದರೆ ಈವರೆಗೆ ಮುಂಗಾರಿನ ಅಬ್ಬರ ನಿರಂತರವಾಗಿದ್ದು, ಸಾಕಷ್ಟು ಹಾನಿಯೂ ಸಂಭವಿಸಿದೆ. ಹಿಂಗಾರು ಮಳೆ ಕೂಡಾ ಉತ್ತಮವಾಗಿ ಸುರಿಯಲಿದೆ ಎನ್ನುವುದು ಕಾರಣಿಕ ನುಡಿಯ ಅರ್ಥ’ ಎಂದು ಭಕ್ತರು ವಿಶ್ಲೇಷಿಸಿದ್ದಾರೆ.
Everyone should be careful Parak.
Leave a comment