Home namma chikmagalur ಪಟ್ಟಣ ಸಹಕಾರ ಬ್ಯಾಂಕಿಗೆ 1.60 ಕೋಟಿ ರೂ ನಿವ್ವಳ ಲಾಭ
namma chikmagalurchikamagalurHomeLatest News

ಪಟ್ಟಣ ಸಹಕಾರ ಬ್ಯಾಂಕಿಗೆ 1.60 ಕೋಟಿ ರೂ ನಿವ್ವಳ ಲಾಭ

Share
Share

ಚಿಕ್ಕಮಗಳೂರು: : ಇಲ್ಲಿನ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ೧.೬೦ ಕೋಟಿ ರೂ ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇ.೧೨ ರಷ್ಟು ಡಿವಿಡೆಂಟ್ ನೀಡಲು ಉದ್ದೇಶಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹೆಚ್.ಎನ್ ನಂಜೇಗೌಡ ತಿಳಿಸಿದರು.
ಅವರು ಇಂದು ಕೆಂಪನಹಳ್ಳಿ ರಸ್ತೆ, ಗಾಯಿತ್ರಿದೇವಿ ಕಲ್ಯಾಣ ಮಂಟಪದಲ್ಲಿ ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ ೨೦೨೪-೨೫ನೇ ಸಾಲಿನ ಆಡಿಟ್ ಆದ ಲೆಕ್ಕಪತ್ರಗಳು ಮತ್ತು ವಾರ್ಷಿಕ ವರದಿ ೨೯ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಡಳಿತ ಮಂಡಳಿಯ ಸಹಕಾರದೊಂದಿಗೆ ಠೇವಣಿ ಸಂಗ್ರಹ, ಸಾಲ ವಿತರಣೆ ಹಾಗೂ ಸಾಲ ವಸೂಲಾತಿಗೆ ಹೆಚ್ಚಿನ ಗಮನ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ ಆರ್‌ಬಿಐ ನಿರ್ದೇಶನಕ್ಕಿಂತ ಎನ್‌ಪಿಎ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು. ಬ್ಯಾಂಕಿನಲ್ಲಿ ೪೨೯೦ ಸದಸ್ಯರಿಂದ ಒಟ್ಟು ಷೇರುಬಂಡವಾಳ ೩೩೬.೯೮ ಲಕ್ಷ ರೂ ಸಂಗ್ರಹಣೆಯಾಗಿದ್ದು, ೩೧-೦೩-೨೦೨೫ ಕ್ಕೆ ೮೪.೭೩ ಕೋಟಿ ರೂ ಠೇವಣಿ ಸಂಗ್ರಹಿಸಲಾಗಿದೆ. ೫೮.೯೮ ಕೋಟಿ ರೂ ಸಾಲ ವಿತರಿಸಲಾಗಿದೆ. ೩೭.೩೬ ಕೋಟಿ ರೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಬಂಡವಾಳ ಹೂಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಳೆದ ವರ್ಷ ಬೈಪಾಸ್ ರಸ್ತೆಯಲ್ಲಿ ಪ್ರಾರಂಭಿಸಿದ ಬ್ಯಾಂಕಿನ ಶಾಖೆ ಉತ್ತಮವಾಗಿ ನಡೆಯುತ್ತಿದ್ದು, ಒಟ್ಟಾರೆಯಾಗಿ ಈ ಬಾರಿ ಬ್ಯಾಂಕಿಗೆ ಎ ಶ್ರೇಣಿ ಪಡೆಯಲಾಗಿದೆ ಎಂದು ತಿಳಿಸಿದರು. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಸೇವೆಗಳು ಆರಂಭವಾಗಿದ್ದು, ಇದನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಬ್ಯಾಂಕಿನ ಪ್ರಗತಿ ಬಗ್ಗೆ ವಿವರವಾಗಿ ಈಗಾಗಲೇ ಪ್ರತೀ ವರ್ಷ ವಾರ್ಷಿಕ ವರದಿಯಲ್ಲಿ ವಿವರಿಸಲಾಗಿದೆ ಎಂದರು.

ತಮ್ಮ ಅಧಿಕಾರವಧಿಯಲ್ಲಿ ನಗರದ ಹೃದಯ ಭಾಗದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕ್ ಪ್ರಾರಂಭದಿಂದಲೂ ಲಾಭ ಗಳಿಸುತ್ತಾ ಬರುತ್ತಿರುವುದು ಸಂತಸ ತಂದಿದೆ. ಸರ್ಕಾರದ ನೀತಿ ಬಾರತೀಯ ರಿಸರ್ವ್ ಬ್ಯಾಂಕಿನ ಕಲ್ಪನೆ ಹಾಗೂ ಸಾಮಾಜಿಕ ನ್ಯಾಯದ ಎಲ್ಲಾ ಅಂಶಗಳನ್ನು ಸಮನಾಗಿ ಪಾಲಿಸಲಾಗುತ್ತಿದ್ದು, ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಮನವಿ ಮಾಡಿದರು.

ಸಾಲ ಪಡೆದಿರುವವರು ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದ ಅವರು, ವ್ಯಾಪಾರ ಅಭಿವೃದ್ಧಿ, ಗೃಹ ನಿರ್ಮಾಣ, ವಾಹನ ಖರೀದಿಗೆ, ಚಿನ್ನದ ಮೇಲಿನ ಸಾಲಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು. ಇದೆ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಭಗವತಿ ಹರೀಶ್, ನಿರ್ದೇಶಕರುಗಳಾದ ಎಂ.ವಿ. ಷಡಾಕ್ಷರಿ, ಬಿ.ಹೆಚ್ ಶ್ರೀಕಾಂತ್ ಪೈ, ಜಿ. ರಘು, ಎಂ.ಎಸ್ ಉಮೇಶ್, ಕೆ.ಎಸ್ ಧರ್ಮರಾಜ್, ಶಶಿಪ್ರಸಾದ್, ಶೈಲಜಾ ಮಂಜುನಾಥ್, ಸಿ.ಆರ್ ಮಂಜು, ಹೆಚ್.ಎಂ ಚಂದ್ರಶೇಖರ್, ಕೆ.ಡಿ. ಪುಟ್ಟಣ್ಣ, ಸಿ.ವಿ. ಹರ್ಷ, ಸಿಬ್ಬಂದಿಗಳಾದ ಬಿ.ವಿ ರಾಘವೇಂದ್ರ, ಬಿ.ಎನ್ ಅಶೋಕ್, ಸಿ.ಆರ್.ಶೈಲಜ, ಕೆ.ಟಿ.ಪ್ರಕಾಶ್, ಎ.ಶ್ರೀನಾಥ್, ಮದನ್ ಮಹೇಂದ್ರ.ಎಸ್.ಎಲ್, ಹೆಚ್.ಬಿ.ಮಾದಯ್ಯ, ಲಕ್ಷ್ಮಣ ಮತ್ತಿತರರು ಭಾಗವಹಿಸಿದ್ದರು. ಮೊದಲಿಗೆ ನಿರ್ದೇಶಕ ಪಿ. ಮಂಜುನಾಥ್ ಜೋಶಿ, ಸ್ವಾಗತಿಸಿದರು.

Town Cooperative Bank posts net profit of Rs 1.60 crore

Share

Leave a comment

Leave a Reply

Your email address will not be published. Required fields are marked *

Don't Miss

ಅಂದರ್-ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ – ಐವರ ಬಂಧನ

ಚಿಕ್ಕಮಗಳೂರು: ಹೊರವಲಯದ ಹುಕ್ಕುಂದ ಗ್ರಾಮದ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದ ಹೈಟೆಕ್ ಅಡ್ಡೆಯ ಮೇಲೆ ಗ್ರಾಮಾಂತರ ಠಾಣೆಯ ಪಿಎಸ್‌ಐ...

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

Related Articles

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...