Home ಮಟ್ಟು ಔಟ್- ಶಿವಕುಮಾರ್ ಇನ್- ಆರತಿ ಸ್ಟ್ರಾಂಗ್- ಜಕ್ಕಣ್ಣ ಒಕೆ
HomeState News

ಮಟ್ಟು ಔಟ್- ಶಿವಕುಮಾರ್ ಇನ್- ಆರತಿ ಸ್ಟ್ರಾಂಗ್- ಜಕ್ಕಣ್ಣ ಒಕೆ

Share
Share

ಬೆಂಗಳೂರು: ವಿಧಾನ ಪರಿಷತ್ ಗೆ ನಾಲ್ವರನ್ನು ನೇಮಕ ಮಾಡಿ ಎರಡು ತಿಂಗಳ ಹಿಂದೆ ರಾಜ್ಯಪಾಲರ ಬಳಿ ಹೋಗಿದ್ದ ಪಟ್ಟಿಯಲ್ಲಿ ಆರತಿ ಕೃಷ್ಣ ಮತ್ತು ರಮೇಶ್‌ ಬಾಬು ಉಳಿದರೆ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮತ್ತು ಡಿ.ಜಿ.ಸಾಗರ್ ಪಟ್ಟಿಯಿಂದ ಔಟ್ ಆಗಿದ್ದಾರೆ. ಇವರ ಬದಲು ಪತ್ರಕರ್ತ ಮೈಸೂರು ಮೂಲದ ಶಿವಕುಮಾರ್ ಮತ್ತು ಹುಬ್ಬಳ್ಳಿ ಧಾರವಾಡ ಮೂಲದ ಜಕ್ಕಣ್ಣನವರ ಹೆಸರು ಅಂತಿಮ ಗೊಳಿಸಲಾಗಿದೆ.

ಆರತಿ ಕೃಷ್ಣಗೆ ಫೈಟ್ ಕೊಟ್ಟವರು ಬಿ.ಎಲ್.ಶಂಕರ್ ಜಿಲ್ಲೆಯ ರಾಜಕಾರಣದಲ್ಲಿ ಶಂಕರ್ ಕೈ ತೂರಿಸದಿದ್ದರೆ ಮುಗಿಯುವುದಿಲ್ಲ ಎಂಬ ಜಾಮಾನ ಮುಗಿದಂತೆ ಕಾಣಿಸುತ್ತಿದೆ. ಆರತಿ ಕೃಷ್ಣ ಆಯ್ಕೆ ಹಿಂದೆ ಶ್ಯಾಮ್ ಪಿತ್ರೋಡರವರ ಕೈ ಕೆಲಸ ಮಾಡಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಏನೂ ಮಾಡಲಾಗಿಲ್ಲ.

ಆರತಿ ಕೃಷ್ಣ ರಾಷ್ಟ್ರ ಮಟ್ಟದಲ್ಲಿ ಬಲಿಷ್ಠ ರಾಗಿರುವುದು ಶಂಕರ್ ಮನೆ ಸೇರಬಹುದು. ಇಲ್ಲ ಎಂದರೆ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿ ಧರ್ಮಸ್ಥಳದವರನ್ನು ಮೆಚ್ಚಿಸಲು ಭಾಷಣ ಮಾಡಬಹುದು. ಇಂತಹ ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಮುಖವಾಡಗಳು ಇನ್ನೂ ಮುಂದೆ ನಿಂತ ನೀರಾಗಿ ಪಾಚಿ ಕಟ್ಟಬಹುದು. ಕೆಪಿಸಿಸಿ ಮಾಧ್ಯಮದ ಅಧ್ಯಕ್ಷರು ತಮ್ಮ ತಾಕತ್ತು ತೋರಿಸುವ ಜೊತೆಗೆ ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಖ್ಯಾತ ಪತ್ರಕರ್ತ ಭಾಷಣಕಾರರಾದ ದಿನೇಶ್ ಅಮೀನ್ ಮಟ್ಟು ಮಟ್ಟಾ ಆಗಿದ್ದು ಹೇಗೆ. ಸಿದ್ದರಾಮಯ್ಯ 2013 ರಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿದ್ದ ಠೇಂಕಾರ ಮನುಷ್ಯನ ಹೆಸರು ಮೊದಲ ಪಟ್ಟಿಯಲ್ಲಿ ಒಕೆ ಈಗಿನ ಪಟ್ಟಿಯಲ್ಲಿ ಫಿಲ್ಟರ್ ಆಗಿದ್ದು ಏಕೆ? ಪತ್ರಕರ್ತರಿಗೆ ಸ್ಪಂದಿಸುವ ಗುಣಗಳಿಲ್ಲದ ಈತ ಜನಸಾಮಾನ್ಯರಿಗೆ ಹೇಗೆ ಸ್ಪಂದಿಸಲು ಸಾಧ್ಯ ಎಂಬ ಯಕ್ಷ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಇವರ ಬದಲಿಗೆ ಮೈಸೂರು ಮೂಲದ ಶಿವಕುಮಾರ್ ಎಂಬ ಪತ್ರಕರ್ತ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.

ಡಿ.ಜಿ.ಸಾಗರ್ ದಲಿತ ಸಂಘಟನೆಯ ಮುಖಂಡ ಖರ್ಗೆ ಕುಟುಂಬಕ್ಕೆ ಕಂಟಕವಾಗಬಾರದು ಎಂಬ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ಹೆಸರು ಸೇರಿತ್ತು ಆದರೆ ಬದಲಾದ ಪರಿಸ್ಥಿತಿಯಲ್ಲಿ ಹುಬ್ಬಳ್ಳಿ ಧಾರವಾಡ ಮೂಲದ ಕಾಂಗ್ರೆಸ್ ಮುಖಂಡ ಜಕ್ಕಣ್ಣ ಎಂಟ್ರಿ ಕೊಟ್ಟಿದ್ದಾರೆ. ಅಂತೂ ಇಂತೂ ಕೊನೆಗೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾಗಲು ಗ್ರೀನ್ ಸಿಗ್ನಲ್ ಕೊಟ್ಟಿದೆ

Mattu out- Shivakumar in- Aarti strong- Jakkanna OK

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...