ಕಡೂರು: ಯೂಟ್ಯೂಬರ್ ಸಮೀರ್ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಮಂಜು ಜೈನ್ ಎಂಬುವರು ದೂರು ದಾಖಲಿಸಿದ್ದಾರೆ.
ಕಡೂರು ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರುನಲ್ಲಿ, ಸಮೀರ್ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಿ, ಸಮಾಜದ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಮಂಜು ಜೈನ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ BNS ಕಾಯ್ದೆಯಡಿ ಏಳು ಸೆಕ್ಷನ್ಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಮಂಜು ಜೈನ್, ರಾಜ್ಯದಾದ್ಯಂತ ಸಮೀರ್ ವಿರುದ್ಧ ಈಗಾಗಲೇ ಸುಮೋಟೊ ಪ್ರಕರಣ ದಾಖಲಾಗಿದೆ. ಆದರೆ, ನೇರವಾಗಿ ವ್ಯಕ್ತಿಯಿಂದ ದಾಖಲಾಗಿರುವ ದೂರು ಇದುವರೆಗೂ ಇರಲಿಲ್ಲ.
ನಾನು ನೀಡಿರುವ ಈ ದೂರು ರಾಜ್ಯದಲ್ಲಿ ಮೊದಲ ಅಧಿಕೃತ ದೂರು ಎಂಬುದಾಗಿ ಪರಿಗಣಿಸಬಹುದು ಎಂದು ಹೇಳಿದ್ದಾರೆ.
ಇದರೊಂದಿಗೆ ಸಮೀರ್ ವಿರುದ್ಧದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸಮೀರ್ ವಿರುದ್ಧ ರಾಜ್ಯದ ಹಲವು ಕಡೆಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ ವ್ಯಕ್ತವಾಗುತ್ತಿದ್ದರೆ, ಮಂಜು ಜೈನ್ ಅವರ ಈ ಕ್ರಮದಿಂದ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ದೂರು ಸ್ವೀಕರಿಸಿರುವ ಕಡೂರು ಪೊಲೀಸರು, ಇನ್ನೂ FIR ದಾಖಲು ಆಗಿಲ್ಲ. ಸುಮೋಟೊ ಪ್ರಕರಣ ದಾಖಲಾಗಿರುವ ಠಾಣೆಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.
Complaint filed against YouTuber Sameer in Kadur
Leave a comment