ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆ ಅಬ್ಬರ ಮುಂದುವರೆದಿದೆ.ಒಂದೇ ದಿನಕ್ಕೆ ಕೊಟ್ಟಿಗೆಹಾರದಲ್ಲಿ ೧೬೫ ಮಿ.ಮೀ. ಅಂದರೆ ೭ ಇಂಚು ಮಳೆಯಾಗಿದ್ದು, ಅಧಿಕ ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿನ ಗಾಳಿ-ಮಳೆಗೆ ಜನರು ಭಯಭೀತರಾಗಿದ್ದಾರೆ.ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಅಧಿಕ ಮಳೆ ಸುರಿಯತೊಡಗಿದೆ.ಚಾರ್ಮಾಡಿ ಘಾಟಿಯಲ್ಲಿ ಮಂಜುಮುಸುಕಿದ ವಾತಾವರಣ ಉಂಟಾಗಿದ್ದು, ವಾಹನ ಸವಾರರು ಈ ಭಾಗದಲ್ಲಿ ವಾಹನ ಚಾಲನೆಗೆ ಪರದಾಡಬೇಕಾಗಿದೆ.
ಗಾಳಿಯೊಂದಿಗೆ ಒಂದೇ ಸಮನೆ ಮಳೆ ಸುರಿಯತೊಡಗಿದೆ.ಅಳಿದುಳಿದಿರುವ ಕಾಫಿ-ಮೆಣಸು ನೆಲಕಚ್ಚೋ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಕೆಲವು ಕಡೆಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿರುವುದರಿಂದ ನಾಡಿಗರಲ್ಲಿ ಆತಂಕ ಮನೆಮಾಡಿದೆ.
ಚಿಕ್ಕಮಗಳೂರು ನಗರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಇಂದು ಬೆಳಿಗ್ಗೆ ಬಿಸಿಲು ವಾತಾವರಣ ಉಂಟಾಗಿತ್ತಾದರೂ ನಂತರ ಮಳೆ ಸುರಿಯತೊಡಗಿದೆ. ಭಕ್ತದ ಗದ್ದೆಯಲ್ಲಿ ಕಟ್ಟೆರೋಗ ಕಾಣಿಸಿಕೊಂಡಿದ್ದು, ಮಳೆ ಬಿಡುವುದು ನೀಡಿದ್ದರಿಂದ ರೈತರು ರೋಗ ನಿವಾರ ಣೆಗೆ ಔಷಧಿ ಸಿಂಪಡಿಸಲು ಸ್ಪ್ರೇ ಮಿಷನ್ನೊಂದಿಗೆ ಗದ್ದೆಗೆ ತೆರಳುತ್ತಿರುವುದು ಕಂಡು ಬಂತು.
ಹಳ್ಳಕೊಳ್ಳಗಳು, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿಲ್ಲ. ಹಳ್ಳಕೊಳ್ಳಗಳು ತುಂಬಿಹರಿಯುತ್ತಿವೆ. ಕೆರೆಕಟ್ಟೆಗಳು ಭರ್ತಿಯಾಗಿದ್ದು, ಜನಪ್ರತಿನಿಧಿಗಳು ಕೆಲವು ಕೆರೆಗಳಲ್ಲಿ ಕೋಡಿಬಿದ್ದಿರುವುದರಿಂದ ಬಾಗಿಲ ಅರ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಮಳೆ ವಿವರ: ಜಿಲ್ಲೆಯಲ್ಲಿ ಜನವರಿ ೧ರಿಂದ ಆಗಸ್ಟ್ ೧೯ವರೆಗೆ ವಾಡಿಕೆ ಮಳೆ ೧೩೪೬ ಮಿಲಿಮೀಟರ್ ಬೀಳಬೇಕಾಗಿದ್ದು, ೧೪೪೪ ಮಿ.ಮೀ. ಮಳೆ ಸುರಿಯುವ ಮೂಲಕ ಕಾಫಿನಾಡಿನಲ್ಲಿ ಶೇ.೭ರಷ್ಟು ಹೆಚ್ಚಿಗೆ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ವಾಡಿಕೆ ಮಳೆ ೫೧೧ಕ್ಕೆ ಬದಲಾಗಿದೆ ೧೧೭೬.೧ ಮಿಲಿಮೀಟರ್ ಮಳೆಯಾಗಿದ್ದು, ಶೇ. ೧೩೦ರಷ್ಟು ಮಳೆ ಬಿದ್ದಂತಾಗಿದೆ. ಕಡೂರು ತಾಲೂಕಿನಲ್ಲಿ ೩೦೬.೨ ಮಿ.ಮೀ. ಬದಲಾಗಿದೆ. ೩೪೮.೮ ಮಿಲಿಮೀಟರ್ ಮಳೆಯಾಗಿದ್ದು, ಶೇ. ೧೪ರಷ್ಟು ಮಳೆಯಾಗಿದೆ.
ಕೊಪ್ಪದಲ್ಲಿ ವಾಡಿಕೆ ಮಳೆ ೨೨೯೧.೯ ಕ್ಕೆ ಬದಲಾಗಿದೆ ೨೭೬೭೧.೬ರಷ್ಟು ಮಳೆಬೀಳುವ ಮೂಲಕ ಶೇ.೨೧ರಷ್ಟು ಮಳೆಯಾಗಿದ್ದರೆ, ಮೂಡಿಗೆರೆ ತಾಲೂಕಿನಲ್ಲಿ ೧೭೧೨.೩ ಮಿ.ಮೀ. ವಾಡಿಕೆ ಮಳೆಗೆ ಬದಲು ೨೨೦೧.೨ ಮಿ.ಮೀ. ಮಳೆಯಾಗಿದ್ದು, ಶೇ. ೨೯ರಷ್ಟು ಮಳೆಬಿದ್ದಿದೆ. ನರಸಿಂಹರಾಜಪುರದಲ್ಲಿ ೧೨೦೪.೮ಕ್ಕೆ ಬದಲಾಗಿ ೧೫೮೧.೫ ಮಿ.ಮೀ.ಮಳೆಸುರಿಯುವ ಮೂಲಕ ಶೇ.೩೧ರಷ್ಟು ಮಳೆಬಿದ್ದಿದ್ದರೆ,
ಶೃಂಗೇರಿ ತಾಲೂಕಿನಲ್ಲಿ ೩೦೬೯.೬ ವಾಡಿಕೆ ಮಳೆಗೆ ಬದಲಾಗಿ ೩೫೬೧.೮ ಮಿ.ಮೀ.ಮಳೆಯಾಗಿದ್ದು, ಶೇ.೧೬ರಷ್ಟು ಮಳೆಸುರಿದಿದೆ. ತರೀಕೆರೆಯಲ್ಲಿ ೫೬೦.೧ಕ್ಕೆ ೬೭೪.೭ ಮಿ.ಮೀ. ಮಳೆಬಿದ್ದಿದ್ದು, ಶೇ.೨೦ ರಷ್ಟು ಮಳೆಯಾಗಿದೆ. ಅಜ್ಜಂಪುರ ತಾಲೂಕಿನಲ್ಲಿ ೩೮೬.೨ ಮಿ.ಮೀ. ವಾಡಿಕೆ ಮಳೆ ಬೀಳಬೇಕಾದ ಜಾಗದಲ್ಲಿ ೩೯೧.೯ ಮಿಲಿಮೀಟರ್ ಮಳೆಯಾಗಿದ್ದು, ಶೇ.೧ರಷ್ಟು ಹೆಚ್ಚಿಗೆಮಳೆಯಾಗಿದೆ. ಕಳಸ ತಾಲೂಕಿನಲ್ಲಿ ೨೭೯೪.೨ ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ ೩೧೪೭.೫ ರಷ್ಟು ಸರಾಸರಿಯಾಗಿದ್ದು, ಶೇ.೧೩ರಷ್ಟು ಮಳೆಬಿದ್ದಂತಾಗಿದೆ.
Record 7 inches of rain in Kottegahar in Coffee Nadu
Leave a comment