Home namma chikmagalur ಪೌತಿಖಾತೆ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಚಾಲನೆ
namma chikmagalurchikamagalurHomeLatest News

ಪೌತಿಖಾತೆ ಆಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಚಾಲನೆ

Share
Share
ಚಿಕ್ಕಮಗಳೂರು:  ನಗರದ ತಾಲ್ಲೂಕು ಕಚೇರಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಫಲಾನುಭವಿಯೊಬ್ಬರಿಗೆ ದಾಖಲಾತಿ ನೀಡುವ ಮೂಲಕ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಪೌತಿ ಖಾತೆ ಆಂದೋಲನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ೯,೧೧,೦೦೦ ಜಮೀನು ಹೊಂದಿದವರಿದ್ದು, ಸುಮಾರು ೫.೫೦ ಲಕ್ಷ ಪಹಣಿ ಪತ್ರಗಳಿವೆ. ಅವುಗಳಿಗೆ ಆಧಾರ್ ಜೋಡಿಸುವ ಸಂದರ್ಭದಲ್ಲಿ ೯೭,೦೦೦ ಮಾಲೀಕರು ಪೌತಿಯಾಗಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಒಂದು ಖಾತೆಗೆ ಒಬ್ಬರು ಮಾಲೀಕರು ಇದ್ದು, ಅವರಿಗೆ ಅಗತ್ಯ ಸೌಲಭ್ಯಗಳು ಸಿಗುವಂತಾಗಬೇಕು. ಆದರೆ ಅನೇಕ ಸೌಲಭ್ಯಗಳನ್ನು ಪೌತಿಯಾಗಿರುವವರ ಹೆಸರಿನಲ್ಲೇ ವಿತರಿಸುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಇದೀಗ ಆಂದೋಲನ ಆರಂಭಿಸಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಕೃಷಿಕರಿಗೆ ನೀಡುವ ಸೌಲಭ್ಯಗಳನ್ನು ಪೌತಿಯಾದವರ ಹೆಸರಿನಲ್ಲಿ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂದು ಸಚಿವರ ಮೂಲಕ ಪೌತಿ ಖಾತೆ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ಜಿಲ್ಲೆಯಲ್ಲಿ ಈ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಕಾರಣಾಂತರದಿಂದ ಪೌತಿ ಖಾತೆಗಳು ಹಲವಾರು ವರ್ಷಗಳಿಂದ ಹಾಗೆಯೇ ಉಳಿದುಹೋಗಿವೆ. ಪೌತಿಯಾದವರ ಖಾತೆಗಳು ಬದಲಾವಣೆ ಆಗಬೇಕಾಗಿರುವುದರಿಂದ ರೈತರು ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ೪೦ ವೃತ್ತಗಳಲ್ಲಿ ಈ ಪೌತಿ ಖಾತೆ ಆಂದೋಲನಗಳನ್ನು ಪ್ರಾರಂಭಿಸಲಾಗುವುದು. ಯಾವುದೇ ಕಾರಣಕ್ಕೂ ರೈತರು ಪೌತಿ ಖಾತೆ ಬದಲಾವಣೆಗೆ ಹಣ ಪಾವತಿಸುವ ಅಗತ್ಯವಿಲ್ಲ. ಗ್ರಾಮಲೆಕ್ಕಿಗರೇ ಈ ಕಾರ್ಯ ಮಾಡಿಕೊಡುತ್ತಾರೆ ಎಂದು ತಿಳಿಸಿದರು.
೪೦ ವೃತ್ತಗಳಲ್ಲಿ ಪೌತಿ ಖಾತೆ ತಯಾರಿಸಿಕೊಡುವುದರ ಜೊತೆಗೆ ದುರಸ್ತಿ, ಪೋಡಿ ಇತ್ಯಾದಿ ದಾಖಲಾತಿಗಳನ್ನು ಕೂಡ ಮಾಡಿಕೊಡಲಾಗುವುದು. ಈಗಾಗಲೇ ೩೦೦ಕ್ಕೂ ಕಂದಾಯ ಗ್ರಾಮಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು, ಈ ಎಲ್ಲಾ ಕಾರ್ಯಗಳಿಗೆ ಪೂರಕವಾಗಿ ಆಯ್ದ ಗ್ರಾಮ ಲೆಕ್ಕಿಗರನ್ನು ಪೌತಿ ಖಾತೆ ಆಂದೋಲನವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗಣಕೀಕರಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ೨೦೨೪ರಲ್ಲಿ ಅತ್ಯುತ್ತಮ ಕಂದಾಯ ಅಧಿಕಾರಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಬೆಳವಾಡಿ ಗ್ರಾಮ ಆಡಳಿತಾಧಿಕಾರಿ (ವಿಎಒ) ಈರಮ್ಮ ಅವರನ್ನು ಸನ್ಮಾನಿಸಲಾಯಿತು. ಶಾಸಕ ಹೆಚ್.ಡಿ.ತಮ್ಮಯ್ಯ, ಜಿ.ಪಂ. ಸಿಇಒ ಎಚ್.ಎಸ್.ಕೀರ್ತನಾ, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಉಪತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮದಲ್ಲಿದ್ದರು.
ಕಾರ್ಯಕ್ರಮಕ್ಕೆ ಮುನ್ನ ಅಭಿಲೇಖಾಲಯ (ರೆಕಾರ್ಡ್ ರೂಂ) ದ ಗಣಕೀಕರಣ ದಾಖಲಾತಿಗಳ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ, ಐವರು ಫಲಾನುಭವಿಗಳಿಗೆ ದಾಖಲಾತಿಗಳನ್ನು ವಿತರಿಸಿದರು.
District in-charge minister George drive for Poutikhate movement
Share

Leave a comment

Leave a Reply

Your email address will not be published. Required fields are marked *

Don't Miss

ಗುಡುಗು-ಸಿಡಿಲಿನ ಭಾರಿ ಮಳೆಗೆ ಇಡೀ ನಗರ ತಲ್ಲಣ

ಚಿಕ್ಕಮಗಳೂರು: ಶುಕ್ರವಾರ ಮಧ್ಯರಾತ್ರಿ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಭಾರಿ ಮಳೆಗೆ ಇಡೀ ನಗರ ತಲ್ಲಣಗೊಂಡಿದೆ. ಮರಗಳು ವಿದ್ಯುತ್ ಕಂಬಗಳ ಸಹಿತ ರಸ್ತೆಗೆ ಉರಳಿದವು. ಹಲವು ಕಟ್ಟಡಗಳ ಚಾವಣಿ ಹಾರಿ ಹೋಗಿವೆ. ಮಧ್ಯರಾತ್ರಿ...

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನೇಮಕ ನಿಯಮ ಬಾಹಿರ

ಚಿಕ್ಕಮಗಳೂರು: ಇತ್ತೀಚೆಗೆ ಡಿ. ರಾಮೇಗೌಡರವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷನಾಗಿ ನೇಮಕ ಮಾಡಿರುವುದು ನಿಯಮ ಬಾಹಿರವಾಗಿದ್ದು, ಈ ಆಯ್ಕೆ ಅಮಾನ್ಯ ಎಂದು ಜಿಲ್ಲಾಧ್ಯಕ್ಷ ಮಹೇಶ್ ಹೇಳಿದರು....

Related Articles

‘ನಮ್ಮೂರಿಗೆ ರಸ್ತೆ ಅಭಿವೃದ್ಧಿ ಬೇಡ’ ಎಂದು ಗ್ರಾಮಸ್ಥರು….?

ಚಿಕ್ಕಮಗಳೂರು: ಸಾಮಾನ್ಯವಾಗಿ ಗ್ರಾಮಗಳಿಗೆ ರಸ್ತೆ ಬೇಕು, ಕುಡಿಯುವ ನೀರು ಬೇಕು, ವಿದ್ಯುತ್ ಬೇಕು ಎಂದು ಜನ...

ಜಿಲ್ಲೆಯಲ್ಲಿ ಅಧಿಕಗೊಂಡ ನಾಪತ್ತೆ ಪ್ರಕರಣಗಳು

ಚಿಕ್ಕಮಗಳೂರು: ಬೀರೂರು ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು,...

ಮಲೆನಾಡಿನಲ್ಲಿ ಮತ್ತೆ ಅಪಾಯಕಾರಿ ಕಾಲುಸಂಕಗಳನ್ನೇ ಆಶ್ರಯ ಪಡೆದ ಗ್ರಾಮಸ್ಥರು

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಸ್ತಬ್ಧವಾಗುತ್ತಿದ್ದಂತೆ ಸರ್ಕಾರ ಅಲ್ಲಿನ ಕುಗ್ರಾಮಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ...

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್...