ನಗರಸಭೆ ಅಧ್ಯಕ್ಷರ ಚುನಾವಣೆ ನಾಳೆ ನಡೆಯಲಿದ್ದು ಜನತಾದಳದ ಶೀಲಾ ದಿನೇಶ್ ಆಯ್ಕೆ ಸುಲುಭವಾಗಿ ಅವಿರೋಧವಾಗಿ ನಡೆಯುತ್ತದೆ ಎಂದವರಿಗೆ ಕಾಂಗ್ರೆಸ್ ನ ಅಕ್ಮಲ್ ಅಖಾಡಕ್ಕೆ ಇಳಿದಿದ್ದು ಸ್ವಲ್ಪ ತಲೆನೋವು ತಂದರೆ ಆಶ್ಚರ್ಯ ಪಡುವಂತಿಲ್ಲ.
ಇದರ ಮಧ್ಯೆ ಬಿಜೆಪಿ ಯಿಂದ ಉಚ್ಚಾಟನೆಗೊಂಡಿರುವ ಮಾಜಿ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ ಬಾಂಬ್ ಸಿಡಿಸಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನಿಸುತ್ತದೆ.
ಬಿಜೆಪಿ ಮತ್ತು ದಳದ ಸದಸ್ಯರು ಒಟ್ಟಾಗಿ ಒಂದು ಕಡೆಯಿದ್ದರೆ ಕಾಂಗ್ರೆಸ್ ನವರು ಪ್ರವಾಸಿ ಮಂದಿರದಲ್ಲಿ ನಾಳೆ ನಡೆಯುವ ಚುನಾವಣೆ ಬಗ್ಗೆ ರಣತಂತ್ರ ಹೆಣೆಯುತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಕಣಕ್ಕೆ ಇಳಿದು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದು ಖಚಿತ.
ಜನತಾದಳದವರು ಒಂದು ದಿನ ಮೊದಲು ಫ್ಲೆಕ್ಸ್ ಅಳವಡಿಸಿರುವುದು ನೋಡಿದರೆ ಅವರು ಆತ್ಮವಿಶ್ವಾಸದಲ್ಲಿರುವಂತೆ ಕಾಣುತ್ತದೆ .ಆದರೆ ಇದು ಚುನಾವಣೆ ಯಾವಾಗ ಏನು ಬೇಕಾದರೂ ಆಗಬಹುದು ಒಟ್ಟಾರೆ ಸಪ್ಪೆ ಎನ್ನಿಸಿದ್ದ ನಗರಸಭೆ ಅಧ್ಯಕ್ಷರ ಚುನಾವಣೆ ರಂಗೇರಿದೆ.
Congress candidate in Municipal President election arena
Leave a comment