ಚಿಕ್ಕಮಗಳೂರು: ಅರಣ್ಯ ಇಲಾಖೆಯ ಗಾರ್ಡ್ ಶರತ್ ನ ಮೃತದೇಹ ಪತ್ತೆ. ಸಖರಾಯ ಪಟ್ಟಣದ ಸಮೀಪ ಹೊಸದಾಗಿ ನಿರ್ಮಾಣವಾಗುತ್ತಿರುವ ಟೋಲ್ ಗೇಟ್ ಸಮೀಪವಿರುವ ನೀಲಗಿರಿ ಫಾರೆಸ್ಟ್ ಒಳಗಡೆ ಮೃತದೇಹ ಪತ್ತೆಯಾಗಿದೆ.ಶರತ್ ನ ಮೃತದೇಹ ಸಂಪೂರ್ಣ ಕೊಳೆತು ಹೋಗಿದೆ ಎಂದು ತಿಳಿದು ಬಂದಿದೆ.
ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದವನ ಪತ್ತೆಗಾಗಿ ಪೊಲೀಸ್ ರು ಮತ್ತು ಅರಣ್ಯ ಇಲಾಖೆಯವರು ತೀವ್ರ ಪ್ರಯತ್ನ ನಡೆಸಿದ್ದು ದ್ರೋಣ ಕ್ಯಾಮರಾ ಕೂಡ ಬಳಸಿದರೂ ಸುಳಿವು ಸಿಕ್ಕಿರಲಿಲ್ಲ. ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಇಂದು ಹೆಚ್ಚು ಸಿಬ್ಬಂದಿಯೊಂದಿಗೆ ತಪಾಸಣೆ ನಡೆಸುತ್ತಿದ್ದಾಗ ದುರ್ವಾಸನೆ ಬಂದ ಕಡೆ ಹೋಗಿ ತಪಾಸಣೆ ಮಾಡಿದಾಗ ಶರತ್ ನ ಮೃತದೇಹ ಪತ್ತೆಯಾಗಿದೆ.
ಪೊಲೀಸ್ ರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ದೊಡ್ಡ ತಲೆನೋವು ತಂದಿದ್ದ ಈ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕಾಗಿದೆ. ಕೂರ್ಗ್ ಮೂಲದ ಶರತ್ ಕಳೆದ ಆರು ತಿಂಗಳ ಹಿಂದೆ ಕೂರ್ಗ್ ನಿಂದ ಚಿಕ್ಕಮಗಳೂರು ಅರಣ್ಯ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದು ಸದಾ ಕುಡಿತದ ಅಮಲಿನಲ್ಲಿ ಇರುತ್ತಿದ್ದ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
Dead body of missing guard found
Leave a comment