ಚಿಕ್ಕಮಗಳೂರು: ಕಾರ್ಮಿಕರ ಸ್ವಾಭಾವಿಕ ಮರಣ ಮತ್ತು ಮದುವೆ ಧನಸಹಾಯ ವಿತ ರಣೆಯಲ್ಲಿ ಆಗುತ್ತಿರುವ ವಿಳಂಭ ನೀತಿಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಕಟ್ಟಡ ಕಾರ್ಮಿ ಕರ ಸಂಘದ ಮುಖಂಡರುಗಳು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ವಸಂತ್‌ಕುಮಾರ್ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಫಲಾನುಭವಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ವಾಭಾವಿಕ ಮರಣ, ಮದುವೆ ಧನಸಹಾಯ, ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವಲ್ಲಿ ಕಲ್ಯಾಣ ಮಂಡಳಿ ವಿಳಂಭ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಸಂಕಷ್ಟದಿಂದ ಜೀವನ ನಡೆಸುತ್ತಿರುವ ಕಾರ್ಮಿಕ ಫಲಾನುಭವಿಗಳಿಗೆ ಮದುವೆ ಸೇರಿದಂತೆ ಹಲವಾರು ಸೌಲಭ್ಯದ ಧನಸಹಾಯದ ಹಣವು ಖಾತೆಗೆ ಜಮಾಯಾಗಿಲ್ಲ. ಕಾರ್ಮಿಕರಲ್ಲದವರನ್ನು ನೋಂ ದಾಯಿಸಿಕೊಂಡ ಕಾರಣ, ನೈಜ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಇದನ್ನು ತಡೆಗಟ್ಟಿ ಅನಧಿಕೃತರನ್ನು ಕಾನೂನಿನ ವ್ಯಾಪ್ತಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಎಂದರು.
ರಾಜ್ಯಸರ್ಕಾರ ಕಾರ್ಮಿಕರ ದುಡಿಮೆಗೆ ಅನುಕೂಲವಾಗಲು ಕಾರ್ಮಿಕ ಕಿಟ್‌ಗಳನ್ನು ನೀಡಲಾಗುತ್ತಿದೆ. ಆದರೆ ಕಾರ್ಮಿಕರಿಗೆ ಸಾವಿರಾರು ಬೆಲೆಯ ಗುಣಮಟ್ಟದ ಕಿಟ್‌ಗಳನ್ನು ವಿತರಿಸುವ ಬದಲು ಕೆಲಸಕ್ಕೆ ಬಾರದ ಕಳಪೆ ಗುಣಮಟ್ಟದ ಕಿಟ್‌ಗಳನ್ನು ಕಾರ್ಮಿಕ ಮಂಡಳಿ ವಿತರಿಸುವ ಮೂಲಕ ದ್ರೋಹವೆಸಗುತ್ತಿದೆ ಎಂದು ದೂರಿದರು.
ಈಚೆಗೆ ಕಾರ್ಮಿಕ ಕಿಟ್‌ಗಳನ್ನು ರಾಜಧಾನಿಯಲ್ಲಿ ಮಾರಾಟ ಮಾಡಿ ಅಧಿಕಾರಿಗಳು ಸಿಲುಕಿಕೊಂಡಿ ದ್ದಾರೆ. ಕಾರ್ಮಿಕರಿಗೆ ಕಿಟ್ ಪಡೆಯಲು ಆಧಾರ್, ಲೇಬರ್, ರೇಷನ್, ಸಿಆರ್‌ನಂಬರ್ ಸೇರಿದಂತೆ ಅನೇಕ ದಾಖಲೆಗಳನ್ನು ಪಡೆಯುತ್ತಾರೆ. ಈ ನಡುವೆ ಬೆಂಗಳೂರಿನಲ್ಲಿ ನೂರಾರು ಕಿಟ್‌ಗಳು ಅಂಗಡಿಗಳಲ್ಲಿ ಮಾರಾ ಟವಾಗುತ್ತಿರಲು ಅಧಿಕಾರಿಗಳ ಭ್ರಷ್ಟಚಾರವೇ ನೇರ ಕಾರಣವಾಗಿದೆ ಎಂದರು.
ಕಾರ್ಮಿಕರ ನಿವೃತ್ತಿ ನಂತರ ಔಷಧಿ ಹಾಗೂ ಜೀನೋಪಾಯಕ್ಕೆ ಸರಿಯಾಗಿ ಮೂರು ಸಾವಿರ ಪಿಂಚ ಣಿ ವ್ಯವಸ್ಥೆಯನ್ನು ನೀಡುತ್ತಿಲ್ಲ. ಇದರಿಂದ ನಿವೃತ್ತ ಕಾರ್ಮಿಕರು ಬದುಕು ದುಸ್ಥಿತಿಗೆ ತಲುಪಿದೆ. ಮಕ್ಕಳ ಮ ದುವೆಗಾಗಿ ಕಾರ್ಮಿಕರು ಸಾಲ ಮಾಡಿ ಪೂರೈಸಿದರೂ, ಸಮಯಕ್ಕೆ ಸರಿಯಾಗಿ ಮಂಡಳಿ ಧನಸಹಾಯದ ಹಣವನ್ನು ನೀಡದೇ ಸತಾಯಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನ ವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಿ.ಸಿ.ಮಂಜೇಗೌಡ, ಸದಸ್ಯರಾದ ಜಾನಕಿ, ಜಯ ಕುಮಾರ್, ಮಂಜುನಾಥ್, ಗೌರಮ್ಮ, ದಯಾಕ್ಷಿ, ಶ್ರೀಧರ್ ಮತ್ತಿತರರು ಹಾಜರಿದ್ದರು.
Protest against board’s delay in distributing benefits to workers
Leave a comment