Home Latest News ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ರಗಳೆ – ರಗಳೆ ಇಲ್ಲದ ಚಿಕ್ಕಮಗಳೂರು ಜಿಲ್ಲೆಯ ಶಾಸಕರುಗಳು !
Latest NewschikamagalurHomenamma chikmagalur

ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ರಗಳೆ – ರಗಳೆ ಇಲ್ಲದ ಚಿಕ್ಕಮಗಳೂರು ಜಿಲ್ಲೆಯ ಶಾಸಕರುಗಳು !

Share
Share

ಚಿಕ್ಕಮಗಳೂರು: ಸರ್ಕಾರ ಅನುದಾನ ನೀಡುತ್ತಿಲ್ಲ ಮತ್ತು ಲಂಚದ ಹಾವಳಿಯ ಬಗ್ಗೆ ತಕರಾರು ತೆಗೆದು ಕಾಂಗ್ರೆಸ್ ಮರ್ಯಾದೆ ಹಾದಿ ಬೀದಿಯಲ್ಲಿ ಹರಾಜು ಹಾಕುತ್ತಿದ್ದಾರೆ.

ಬಿ.ಆರ್.ಪಾಟೀಲ್ , ರಾಜು ಕಾಗೆ, ಬೇಳೂರು ಗೋಪಾಲ ಕೃಷ್ಣ ಬಹಿರಂಗವಾಗಿ ಮಾಧ್ಯಮಗಳ ಮೂಲಕ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ನ ಐದು ಶಾಸಕರಿದ್ದು ಯಾವ ರಗಳೆ ಇಲ್ಲ ಎನ್ನುವಂತೆ ಇದ್ದಾರೆ. ಪತ್ರಿಕೆಗಳಲ್ಲಿ ದಿನವೂ ಕೋಟಿ, ಕೋಟಿ ಅನುದಾನ ಬರುತ್ತಿದೆ ಎನ್ನುವಂತೆ ಪ್ರಚಾರದಲ್ಲಿ ಇದ್ದಾರೆ.

ಟಿ.ಡಿ.ರಾಜೇಗೌಡ,ಶ್ರೀನಿವಾಸ್ ತಮ್ಮಯ್ಯ,ಆನಂದ್,ನಯನ ಮೋಟಮ್ಮ ಸಂತೃಪ್ತಿಯಿಂದ ಓಡಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.ತರೀಕೆರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಂದಿದೆ ಅದು ಬಿಟ್ಟರೆ ಕಡೂರು ಕ್ಷೇತ್ರದಲ್ಲೂ ಸಮಾಧಾನವಿದೆ.ಆದರೆ ಚಿಕ್ಕಮಗಳೂರು ಮತ್ತು ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರದಲ್ಲಿ ಅಷ್ಟಾಗಿ ಅನುದಾನ ಬಂದಿಲ್ಲ ಎನ್ನುವವರು ಇವರ ಗೆಲುವಿಗೆ ಹಗಲಿರುಳು ದುಡಿದವರು ಹಿಡಿ ಶಾಪ ಹಾಕುತ್ತಲೇ ಗುಸು,ಗುಸು,ಬೂಸು,ಬೂಸು ಎನ್ನುತ್ತಿರುವುದು ಏಕೆ ? ಹಳ್ಳಿಗಳಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ದೂರುತ್ತಿರುವುದು ಏಕೆ ?

ಕಾಟಚಾರಕ್ಕೆ ಜಿಲ್ಲೆಗೆ ಬಂದು ಹೋಗುವ ಜಿಲ್ಲಾ ಉಸ್ತುವಾರಿ ಮಂತ್ರಿ ಜಾರ್ಜ್ ಬಗ್ಗೆ  ಜಿಲ್ಲೆಯ ಶಾಸಕರುಗಳು ಇನ್ನೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮತ್ತು ಸರ್ಕಾರದ ವಿರುದ್ದ ಧ್ವನಿ ಎತ್ತಲು ಸಾಧ್ಯವೇ ಇಲ್ಲ.

ಜನರಿಗೆ ಏನಾದರೂ ಏನು ನಮ್ಮ ಶಾಸಕರುಗಳಿಗೆ ಅನುಕೂಲ ಆಗುತ್ತಿದೆ ಬರುವುದೇಲ್ಲಾ ಬರುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಕೆಡಮಂಡಲರಾಗಿ ಉಗಿಯುತ್ತಿದ್ದಾರೆ.ಯಾರು ಏನು ಹೇಳಿದರು ನಮಗೆ ಸಂಬಂಧ ಇಲ್ಲ ಎಂದು ಕೆಲವರು ಲಿಕ್ಕರ್ ಶಾಪ್ ತೆರೆಯಲು ಪೈಪೋಟಿ ನಡೆಸಿದರೆ ಕ್ವಾರಿ ಪ್ರಾರಂಭ ಮಾಡಲು ಲಿಕ್ಕರ್ ಶಾಪ್ ಗಳಿಂದ ಮತ್ತು ಕಛೇರಿಗಳಿಂದ ಮಾಮುಲಿ ಪಡೆದರೆ ರಿಯಲ್‌ ಎಸ್ಟೇಟ್‌ ಧಂದೆ ನಡೆಸುವವರು ಹಾಗೂ ಅಧಿಕಾರ ಎಂದರೆ ಶೋಕಿ ಎನ್ನುವವರು ಸಮಾಧಾನವಾಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ.

MLAs of Chikkamagaluru district

Share

Leave a comment

Leave a Reply

Your email address will not be published. Required fields are marked *

Don't Miss

ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ಯವಕ ಸಾವು

ಚಿಕ್ಕಮಗಳೂರು: ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ತಲೆ ಬಂಡೆಗೆ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ...

ಮನ್ ಕಿ ಬಾತ್‌ನಲ್ಲಿ ಚಿಕ್ಕಮಗಳೂರು ರೈತರ ಕೃಷಿ ವೈವಿಧ್ಯತೆಗೆ ಪ್ರಧಾನಿ ಮೋದಿ ಮೆಚ್ಚುಗೆ

ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 137ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನ ರೈತರ ಕೃಷಿ ವೈವಿಧ್ಯತೆ ಹಾಗೂ ನಾವೀನ್ಯತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿಕ್ಕಮಗಳೂರಿನ ಕಾಫಿ ಬೆಳೆಗಾರರು ಸಾಂಪ್ರದಾಯಿಕ ಕಾಫಿ...

Related Articles

ನೂತನ ಪಶ್ಚಿಮ ವಲಯ ಡಿಐಜಿ ಆರ್. ಚೇತನ್ ಭೇಟಿ

ಚಿಕ್ಕಮಗಳೂರು: ನೂತನ ಪಶ್ಚಿಮ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕರಾಗಿ (ಡಿಐಜಿ) ಅಧಿಕಾರ ವಹಿಸಿಕೊಂಡಿರುವ ಆರ್....

ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತ

ಚಿಕ್ಕಮಗಳೂರು: ಹಾಫ್ ಹೆಲ್ಮೆಟ್ ಹಾಕುವವರೇ ಎಚ್ಚರ.. ಎಚ್ಚರ.. ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ...

ಕರ್ವಾಲೊ ಚಿತ್ರಕಲಾ ಸ್ಪರ್ಧೆಯಲ್ಲಿ ಹರ್ಷ ಕಾವೇರಿಪುರ ಪ್ರಥಮ

ಕೊಟ್ಟಿಗೆಹಾರ: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ತೇಜಸ್ವಿ ಅವರ ೮೮ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕರ್ವಾಲೊ ಕೃತಿ...

₹1,281.80 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗದ ರೈತರ ಬಹುದಿನಗಳ ನಿರೀಕ್ಷೆಯಾಗಿರುವ ₹1,281.80 ಕೋಟಿ ಅಂದಾಜು ವೆಚ್ಚದ ಮಹತ್ವಾಕಾಂಕ್ಷಿ...