ಮೂಡಿಗೆರೆ: ತಾಲ್ಲೂಕಿನ ಸುಂಕಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲಿಗೆ ಗ್ರಾಮದಲ್ಲಿ ಭಾರಿ ಮಳೆಗೆ ಧರೆ ಕುಸಿದಿದ್ದು, ಅಲ್ಲಿನ 5 ಕುಟುಂಬಗಳನ್ನು ತಾಲ್ಲೂಕು ಆಡಳಿತ ಸ್ಥಳಾಂತರ ಮಾಡಿದೆ.
ಮನೆಯ ಹಿಂಭಾಗದ ಗುಡ್ಡದಿಂದ ಮಣ್ಣು ಜರಿದಿದ್ದು, ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇರುವುದರಿಂದ ಕೆಳಭಾಗದಲ್ಲಿರುವ ಕುಟುಂಬಗಳನ್ನು ಸ್ಥಳಾಂತರ ಮಾಡಿದೆ.
ಬಲಿಗೆ ಗ್ರಾಮದಲ್ಲಿನ ಶಾಲೆ, ಅಂಗನ ವಾಡಿ, ಸಮುದಾಯದ ಭವನದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ವಸ್ತು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
Landslide in Balige village – 5 families displaced
Leave a comment