ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷರಾದ ಸುಜಾತ ಮಾತುಕತೆಯಂತೆ ಕಳೆದ ಹತ್ತು ದಿನಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ವಾಪಸ್ ಪಡೆದಿದ್ದರಿಂದ ಬಿಜೆಪಿ ಶಿಸ್ತಿನ ಪಕ್ಷ ಎನ್ನುವವರೆಗೆ ಮುಖ ಭಂಗವಾಗಿದೆ.
ವಿಧಾನ ಪರಿಷತ್ ಸದಸ್ಯರು ಪಕ್ಷದ ಉನ್ನತ ಮುಖಂಡರಾದ ಸಿ.ಟಿ.ರವಿಯವರಿಗೆ ಮಾತ್ರ ಮತ್ತೆ, ಮತ್ತೆ ಹಿನ್ನಡೆಯಾಗುತ್ತಿದೆ.ಈ ಹಿಂದೆ ವರಸಿದ್ದಿ ವೇಣುಗೋಪಾಲ ನೀಡಿದ ರಾಜಕೀಯ ಹೊಡೆತ ಸಹಿಸಿಕೊಳ್ಳುವ ಮುನ್ನವೇ ಸುಜಾತ ಕೊಡುತ್ತಿರುವ ಕಾಟ ರಾಜಕೀಯ ಹಿನ್ನಡೆ ಎಂದು ಭಾವಿಸಲಾಗಿದೆ.
ಜೂನ್ 10 ರ ಸಂಜೆ ವಕೀಲರೊಬ್ಬರ ಜೊತೆಗೆ ಹೋಗಿ ಸುಜಾತರವರು ರಾಜೀನಾಮೆ ವಾಪಸ್ ಪಡೆದು ಯಾರ ಕೈಗೂ ಸಿಗದೆ ಸತಾಯಿಸಿರುವುದು ಬಿಜೆಪಿಯವರಿಗೆ ತಲೆನೋವು ತಂದಿದೆ. ರಾಜೀನಾಮೆ ವಾಪಸ್ ಪಡೆದ ಸುಜಾತ ಬಿಜೆಪಿ ಮುಖಂಡರ ಮನೆಯಲ್ಲಿದ್ದು ಬೆಳಗ್ಗೆ ಕಡೂರು ರೈಲು ನಿಲ್ದಾಣ ದಲ್ಲಿದ್ದರು ಎನ್ನಲಾಗಿದೆ.ಅದು ಪೊಲೀಸರು ಜಿಪಿಎಸ್ ನೆರವಿನಿಂದ ಗೊತ್ತಾಗಿರುವುದು.
ನಿನ್ನೆ ರಾತ್ರಿ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ದೇವರಾಜ್ ಶೆಟ್ಟಿ ಹಾಗೂ ನಗರಸಭಾ ಸದಸ್ಯರು ಮುಖಂಡರು ಮನವೊಲಿಸಲು ಭಾರಿ ಕಸರತ್ತು ನಡೆಸಿದ್ದಾರೆ.ಕೇವಲ ಒಂಬತ್ತು ತಿಂಗಳ ಅವಧಿಯಲ್ಲಿ ನಾನು ಖರ್ಚು ಮಾಡಿದ ಹಣ ಕೂಡ ಬಂದಿಲ್ಲ ಎಂದು ರಾಗ ತೆಗೆದಿರುವ ಸುಜಾತರನ್ನು ಸಮಾಧಾನ ಮಾಡಲು ಸುಸ್ತಾಗಿ ಅಂತೂ ಇಂದು ಮತ್ತೆ ರಾಜೀನಾಮೆ ನೀಡಲು ಒಪ್ಪಿಸಿದ್ದಾರೆ.ಆದರೆ ಇನ್ನೂ ಹತ್ತು ದಿನದಲ್ಲಿ ಮತ್ತೆ ಏನು ರಾಜಕೀಯ ನಡೆಯುತ್ತದೆ ಎಂಬ ಅನುಮಾನ ಇದೆ.
ಬಿಜೆಪಿ ಮತ್ತು ದಳದವರ ಒಪ್ಪಂದದ ಪ್ರಕಾರ ದಳದ ಶೀಲಾ ದಿನೇಶ್ ಅಧ್ಯಕ್ಷರಾಗ ಬೇಕು.ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರಿಗೆ ಪ್ರತಿಷ್ಠೆಯಾಗಿದ್ದು ಕಾಂಗ್ರೆಸ್ ನವರು ನಮಗೆ ಏಕೆ ಬೇಕು ಎನ್ನುತ್ತಿದ್ದಾರೆ.
Leave a comment