Home Crime News ಡ್ರೋನ್ ಅವಿ ಸಾವು : ಸಿ.ಟಿ ರವಿಗೆ ಯಡವಟ್ಟುಗಳ ಸೂಚನೆ ನಾ ?
Crime News

ಡ್ರೋನ್ ಅವಿ ಸಾವು : ಸಿ.ಟಿ ರವಿಗೆ ಯಡವಟ್ಟುಗಳ ಸೂಚನೆ ನಾ ?

Share
Share

ಚಿಕ್ಕಮಗಳೂರು : ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಬಳಕೆ ನಂತರ ಸಿ.ಟಿ ರವಿ ಗ್ರಹಚಾರ ಯಡವಟ್ಟುಗಳ ಸರಮಾಲೆಯಾಗಿ ಪರಿಣಮಿಸಿದಂತೆ ಗೋಚರಿಸುತ್ತಿದೆ. ಪೊಲೀಸರ ಬಂಧನದ ನಂತರ ತಲೆಗೆ ಬಿದ್ದ ಪೆಟ್ಟು, ತವರಿಗೆ ವಾಪಸ್ ಆದ ದಿನ ಆಂಬುಲೆನ್ಸ್ ದುರ್ಬಳಕೆ,, ಭದ್ರತೆಗಾಗಿ ಎಸ್ಕಾರ್ಟ್ ಪಡೆದಿದ್ದ ವಿಷಯಗಳ ಜೊತೆಗೆ ಇದೀಗ ಕಾರ್ಯಕರ್ತರ ಅದ್ದೂರಿ ಸ್ವಾಗತದ ವೇಳೆ ಸಿ.ಟಿ ರವಿ ಮನೆ ಎದುರು ಕುಸಿದು ಬಿದ್ದ ಡ್ರೋನ್ ಛಾಯಾಗ್ರಾಹಕನ ಸಾವು ಹೊಸ ಸೇರ್ಪಡೆಯಾಗಿದೆ.

ಸಿ.ಟಿ ರವಿ ಕಳೆದ ಶನಿವಾರ ನಗರಕ್ಕೆ ಆಗಮಿಸಿದ ವೇಳೆ ರಾತ್ರಿಯಿಡೀ ಮೆರವಣಿಗೆ ನಡೆದಿತ್ತು ಈ ವೇಳೆ ಖಾಸಗಿ ವಾಹಿನಿಯ ಐ.ಬಿ ವಾಹನದ ಮೇಲಿಂದ ಬಿದ್ದಿದ್ದ ಡ್ರೋನ್ ಛಾಯಾಗ್ರಾಹಕ ಅವಿನಾಶ್ ಇಂದು ಸಾವನ್ನಪ್ಪಿದ್ದಾನೆ.
ಕಳೆದೊಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವಿನಾಶ್ ಇಂದು ಕೊನೆಯುಸಿರೆಳೆದಿದ್ದಾನೆ.

ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಸ್ವಾಗತ ಕೋರುವ ದಿನ ಲೈವ್ ವಾಹನದ ಮೇಲಿಂದ ಬಿದ್ದಿದ್ದ
ಅವಿನಾಶ್ (26) ಇಂದು ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಬೆಳಗಾವಿಯಲ್ಲಿ ಬಂಧನದ ಬಳಿಕ ಬಿಡುಗಡೆಯಾಗಿ ಕಳೆದ ಶನಿವಾರ ಚಿಕ್ಕಮಗಳೂರಿಗೆ ಬಂದಿದ್ದ ಸಿ.ಟಿ.ರವಿ ಸುದ್ದಿ ಪ್ರಸಾರಕ್ಕೆ ಅಂದು ಖಾಸಗಿ ಚಾನಲ್ ವಾಹನದ ಮೇಲೆ ನಿಂತು ಡ್ರೋನ್ ಹಾರಿಸುತ್ತಿದ್ದ ಅವಿನಾಶ್ ಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿತ್ತು, ಬಸವನಹಳ್ಳಿ ಮುಖ್ಯ ರಸ್ತೆಯ ಸಿ.ಟಿ ರವಿ ಮನೆ ಎದುರು ನಿಲ್ಲಿಸಿದ್ದ ವಾಹನದ ಮೇಲಿಂದ ಬಿದ್ದಿದ್ದ ಅವಿನಾಶ್ ನನ್ನು ಕೂಡಲೇ ಕೆ.ಆರ್.ಎಸ್. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಸಿ.ಟಿ ರವಿ ಕೂಡ ಆಸ್ಪತ್ರೆಗೆ ಹೋಗಿ ಅವಿನಾಶ್ ಆರೋಗ್ಯ ವಿಚಾರಿಸಿದ್ರು
ಚಿಕಿತ್ಸೆಗಾಗಿ ಶಿವಮೊಗ್ಗ, ಮೈಸೂರು, ಬೆಂಗಳೂರಿಗೆ ಆತನನ್ನು ರವಾನೆ ಮಾಡಲಾಗಿತ್ತು, ಆದರೆ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗಿದೆ ಅವಿನಾಶ್ ಸಾವನ್ನಪ್ಪಿದ್ದಾನೆ.

Share

Leave a comment

Leave a Reply

Your email address will not be published. Required fields are marked *

Don't Miss

ದನದ ಮಾಂಸ ಮಾರಾಟದಲ್ಲಿ 40 ಕೆ.ಜಿ ಮಾಂಸ, ಕತ್ತಿ–ಚಾಕುಗಳು ಜಪ್ತಿ

ಚಿಕ್ಕಮಗಳೂರು: ನಗರದ ಅಯ್ಯಪ್ಪನಗರದ ಸಮೀಪದ ಶೆಡ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ.9ರಂದು ಮಧ್ಯಾಹ್ನ...

ವಕೀಲ ವಿ.ಕೆ.ರಘು ಸಾಧನೆ ಯೋಗ ಮಾಡುವವರಿಗೆ ಪ್ರೇರಣೆ

ಚಿಕ್ಕಮಗಳೂರು: ಯೊಗ ನಮ್ಮ ಪ್ರಾಚೀನ ಋಷಿಮುನಿಗಳು ಜಗತ್ತಿಗೆ ಕೊಟ್ಟಂತಹ ಕೊಡುಗೆ. ವಕೀಲ ವಿ.ಕೆ.ರಘು ಅವರ ಯೋಗದ ಸಾಧನೆ ಯೋಗ ಮಾಡುವವರಿಗೆ ಒಂದು ಪ್ರೇರಣೆ ಕೊಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ...

Related Articles

₹5 ಲಕ್ಷ ಮೌಲ್ಯದ ಶ್ರೀಗಂಧದ ಮರಗಳ ಕಳವು

ತರೀಕೆರೆ: ಕೃಷಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 15 ಶ್ರೀಗಂಧದ ಮರಗಳನ್ನು ಕಡಿದು ಕಳವು ಮಾಡಿಕೊಂಡು...

ಸ್ಕೂಟರ್‌ ಅಪಘಾತ: ಚಿಕಿತ್ಸೆ ಫಲಿಸದೆ ಸಾವು

ಕಡೂರು: ರಸ್ತೆಯಲ್ಲಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸ್ಕೂಟರ್‌ ನಿಯಂತ್ರಣ ತಪ್ಪಿ ಬಿದ್ದು...

ಮುಳ್ಳಯ್ಯನಗಿರಿ ಕ್ರಾಸ್ ಬಳಿ ಟಿಟಿ ವಾಹನ ಮರಕ್ಕೆ ಡಿಕ್ಕಿ

ಚಿಕ್ಕಮಗಳೂರು: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ಕ್ರಾಸ್ ಬಳಿ ಶುಕ್ರವಾರ ಇನೋವಾ ಕಾರು ನಿಯಂತ್ರಣ...

ಹಾಸ್ಟೆಲ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಸಮಗ್ರ ಗಿರಿಜನ ಕಲ್ಯಾಣ ಇಲಾಖೆ (ಐಟಿಡಿಪಿ) ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ...