Home Latest News ಕಾಡಾನೆ ವಿರುದ್ಧ ಸಿಡಿದೆದ್ದ ರೈತ ಸಂಘ : ಡಿಎಫ್ಓ ಕಚೇರಿಗೆ ಮುತ್ತಿಗೆ
Latest News

ಕಾಡಾನೆ ವಿರುದ್ಧ ಸಿಡಿದೆದ್ದ ರೈತ ಸಂಘ : ಡಿಎಫ್ಓ ಕಚೇರಿಗೆ ಮುತ್ತಿಗೆ

Share
Share

ಚಿಕ್ಕಮಗಳೂರು : ಕಾಡಾನೆ ಬೀಟಮ್ಮ ಗ್ಯಾಂಗ್ ಸ್ಥಳಾಂತರಕ್ಕೆ ಒತ್ತಾಯಿಸಿ ಅರಣ್ಯ ಇಲಾಖೆಯ ಡಿಎಫ್ ಓ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ರೈತ ಸಂಘ ಇಂದು ಪ್ರತಿಭಟನೆ ನಡೆಸಿತು. ಇದಕ್ಕೂ ಮೊದಲು ನಗರದ ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತೆಡೆ ನಡೆಸಿದರು.

ನಿರಂತರ ಆನೆ ಹಾವಳಿಗೆ ಕಂಗೆಟ್ಟ ಮಲೆನಾಡಿಗರ ಆಕ್ರೋಶ ಇಂದು ಕಟ್ಟೆ ಹೊಡೆದಿತ್ತು, ಕರ್ನಾಟಕ ರೈತ ಸಂಘ ಇಂದು ಬೀದಿಗಿಳಿದು ಚಳುವಳಿ ನಡೆಸಿದ್ದು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಅರಣ್ಯ ಇಲಾಖೆ ವಿರುದ್ಧ ಸಿಡಿದೆದ್ದಿದ್ದರು ನಂತರ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಮುಂದಾದ ರೈತರು ಡಿಎಫ್ಓ ಕಚೇರಿಗೆ ತೆರಳಿದರು.
ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದ ರೈತರಿಗೆ ಕಳೆದ ತಿಂಗಳಿನಿಂದ ಕಂಗಾಲಾಗಿದ್ದಾರೆ

26 ಆನೆಗಳ ಹಾವಳಿಯಿಂದ ಹೈರಾಣಾಗಿರೋ ಮಲೆನಾಡಿಗರಿಗೆ ಅಡಿಕೆ, ಕಾಫಿ-ಮೆಣಸು, ಬಾಳೆ-ಭತ್ತ ಯಾವ ಬೆಳೆಯನ್ನೂ ಬಿಡದೆ ಆನೆಗಳ ಹಿಂಡು ನಾಶಪಡಿಸುತ್ತಿವೆ
20 ದಿನದಲ್ಲಿ 30 ಲಕ್ಷಕ್ಕೂ ಅಧಿಕ ನಾನಾ ಬೆಳೆಗಳನ್ನು ನಾಶಪಡಿಸಿ ಇನ್ನೂ ಅಲ್ಲಿಯೇ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ ಕಾಫಿ ಗಿಡಗಳನ್ನ ಬುಡಸಮೇತ ಕಿತ್ತು ಹಾಕುತ್ತಿವೆ.
ಚಿಕ್ಕಮಗಳೂರು ನಗರದ ಸುತ್ತಳತೆಯಲ್ಲಿರೋ ಕಾಡಾನೆಗಳ ಹಿಂಡು ಇನ್ನೂ ಇದ್ದು ಕೂಡಲೇ ಆನೆ ಹಾವಳಿಗೆ ಬ್ರೇಕ್ ಹಾಕಬೇಕೆಂದು ರೈತರು ಆಗ್ರಹಿಸಿದ್ದಾರೆ. ಪ್ರತಿಭಟನೆ ನಂತರ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸರ್ಕಾರ ಬೆಳೆಹಾನಿಗೆ ದಯಾಪರಿಹಾರ ಕೊಡ್ತೀವಿ ಅನ್ನುತ್ತೆ, 1 ಲಕ್ಷ ನಷ್ಟವಾಗಿದ್ರೆ ಕೇವಲ 5 ಸಾವಿರ ಕೊಟ್ರೆ ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುತ್ತೆ. ವೈಜ್ಞಾನಿಕ ಪರಿಹಾರ ನೀಡಬೇಕು. ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದರು.

Share

Leave a comment

Leave a Reply

Your email address will not be published. Required fields are marked *

Don't Miss

ದಾಸರಹಳ್ಳಿ ಕೆರೆ ಸೆ.೧೦ ರಂದು ಲೋಕಾರ್ಪಣೆ

ಚಿಕ್ಕಮಗಳೂರು: ಸುಮಾರು ೨ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ದಾಸರಹಳ್ಳಿ ಕೆರೆಯನ್ನು ಸೆಪ್ಟಂಬರ್ ೧೦ ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದರು. ಸೋಮವಾರ ಕೆರೆಯ...

ಸಾಮಾಜಿಕ ಹೋರಾಟಗಾರನ ಹತ್ಯೆಯ ಆರೋಪಿಗಳ ಕಠಿಣ ಶಿಕ್ಷೆಗೆ ಮನವಿ

ಚಿಕ್ಕಮಗಳೂರು:  ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಭೂಮಾನ ಂದ ಹತ್ಯೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಕುಟುಂಬಕ್ಕೆ ಸರ್ಕಾರಿ ಹುದ್ದೆ ಕಲ್ಪಿಸಿಕೊಡಬೇ ಕು ಎಂದು ಆಗ್ರಹಿಸಿ ದಸಂಸ ಮುಖಂಡರುಗಳು...

Related Articles

ನಗರದಲ್ಲಿ ಅವಿಧಿ ಮುಗಿದ ಚಾಕೊಲೇಟ್ ಸಾಸ್ ಬಳಸಿ ಕೇಕ್ ….?

ಚಿಕ್ಕಮಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೋಟೆಲ್‌ ಹಾಗೂ ಬೇಕರಿಗಳ ಮೇಲೆ ಕ್ಷಿಪ್ರ ಕಾರ್ಯಾಚರಣೆ...

ಬಿಜೆಪಿ-ಸಂಘಪರಿವಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ಉತ್ತರಾಖಾಂಡ ರಾಜ್ಯದ ಹಾಲದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಮೈದಾನವನ್ನು...

ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ...

ರಾಷ್ಟ್ರಧ್ವಜ ಅವಮಾನ ಆರೋಪ: ಕಾನೂನು ಕ್ರಮಕ್ಕೆ ರೈತ ಸಂಘ ಆಗ್ರಹ

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ ರಾಷ್ಟ್ರಧ್ವಜಾರೋಹಣ ಮಾಡಿ, ಮಧ್ಯಾಹ್ನದ ವೇಳೆಗೆ ಧ್ವಜವನ್ನು ಅವರೋಹಣ ಮಾಡಿರುವ ಘಟನೆಗೆ...