Home Crime News ಮತ್ತೆ ನಕ್ಸಲರು ಬಂದಿರೋದು ನಿಜ : ಮನೆಯೊಂದಕ್ಕೆ ಬಂದು ಊಟ ಮಾಡಿ ಹೋದ ಮುಂಡಗಾರು ಲತಾ
Crime News

ಮತ್ತೆ ನಕ್ಸಲರು ಬಂದಿರೋದು ನಿಜ : ಮನೆಯೊಂದಕ್ಕೆ ಬಂದು ಊಟ ಮಾಡಿ ಹೋದ ಮುಂಡಗಾರು ಲತಾ

Share
Share

ಚಿಕ್ಕಮಗಳೂರು :  ಕಳೆದ ಒಂದು ವಾರದಿಂದ ರೂಮರ್ ಗಳೇ ಹರಿದಾಡುತ್ತಿದ್ದ ನಕ್ಸಲರ ಚಟುವಟಿಕೆ ಕೊನೆಗೂ ದೃಢಪಟ್ಟಿದೆ. ಅಲ್ಲಿ ಬಂದರು ಇಲ್ಲಿ ಹೋದರು ಎಂಬೆಲ್ಲಾ ಊಹಾಪೋಹ. ಗಳಿಗೆ ಕಡೆಗೂ ಖಾತ್ರಿ ದೊರೆತಿದೆ. ಮುಂಡಗಾರು ಲತಾ ಟೀಮ್ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಗ್ರಾಮವೊಂದರ ಮನೆಗೆ ಬಂದು ಗನ್ ತೋರಿಸಿ ಊಟ ಮಾಡಿ ಹೋಗಿರುವುದು ಖಚಿತಗೊಂಡಿದೆ.

ಮಲೆನಾಡಲ್ಲಿ ಮತ್ತೆ ನಕ್ಸಲರ ಚಟುವಟಿಕೆ ಆರಂಭವಾಗಿದೆ ಶೃಂಗೇರಿ ಸುತ್ತಮುತ್ತಲಿನ ಹಳ್ಳಿಗಳಿಗೆ ಬಂದು ಜನರನ್ನ ಹೆಸರಿಸಲು ನಕ್ಸಲರು ಮುಂದಾಗಿದ್ದಾರೆ. ಹಾರ್ಡ್ ಕೋರ್ ನಕ್ಸಲ್ ಮುಂಡಗಾರು ಲತಾ ವಿರುದ್ಧ ಸದ್ಯ ಪ್ರಕರಣ ಒಂದು ದಾಖಲಾಗಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಯುಎ.ಪಿಎ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ ಎ.ಎನ್.ಎಫ್.  ಡಿವೈಎಸ್ಪಿ ದೂರಿನ ಹಿನ್ನೆಲೆ ಎಫ್ಐಆರ್ ಆಗಿದ್ದು ಮುಂಡಗಾರು ಲತಾ, ಜಯಣ್ಣ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ, ಮನೆಗೆ ಬಂದು ಗನ್‌ ತೋರಿಸಿ ಊಟ ಮಾಡಿ ಹೋದ ಮುಂಡಗಾರು ಲತಾ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗುತ್ತಿದ್ದಂತೆ ಸ್ಥಳದಿಂದ ನಕ್ಸಲರು ನಾಪತ್ತೆಯಾಗಿದ್ದಾರೆ ಈ ವೇಳೆ ಸ್ಥಳದಲ್ಲಿ 3 ಗನ್ ಹಾಗೂ ಗುಂಡುಗಳು ಪತ್ತೆಯಾಗಿದ್ದು ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸದ್ಯ ತಲೆಮರೆಸಿಕೊಂಡ ನಕ್ಸಲರಿಗಾಗಿ ಸ್ಥಳಿಯ ಪೊಲೀಸರ ಜೊತೆ ಎ.ಎನ್.ಎಫ್. ಸಿಬ್ಬಂದಿ ತೀವ್ರ ಶೋಧ ನಡೆಸಿದ್ದಾರೆ. ಡಾಗ್ ಸ್ಕ್ವಾಡ್ ಜೊತೆ ಕೂಂಬಿಂಗ್ ಸಹಾ ಚುರುಕು ಗೊಳಿಸಿದ ಪೊಲೀಸರು ಅಲರ್ಟ್ ಆಗಿದ್ದಾರೆ ಇದರೊಂದಿಗೆ ದಶಕಗಳ ಬಳಿಕ ಮಲೆನಾಡಲ್ಲಿ ಮತ್ತೆ ನಕ್ಸಲರ ಹೆಜ್ಜೆ ಗುರುತುಗಳು ಕಂಡು ಬಂದಿವೆ. ಚಿಕ್ಮ್ಕಗಳೂರು  ಜಿಲ್ಲೆ ಮಲೆನಾಡು ಭಾಗ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ವೈದ್ಯರ ಬೇಜವಾಬ್ದಾರಿತನಕ್ಕೆ ಮೂರು ತಿಂಗಳ ಹಸುಗೂಸು ಸಾವು

ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ...

ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಆಚರಣೆ

ಚಿಕ್ಕಮಗಳೂರು: ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಮುಸ್ಲಿಮರು ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ದಾಭಕ್ತಿಯಿಂದ ಆಚರಿಸಿದರು. ಕಳೆದ ಎರಡು ದಿನಗಳಿಂದ ಉಪವಾಸವಿದ್ದ ಭಕ್ತರು ನಗರದ ಬಡಾವಣೆಗಳ ವಿವಿಧ ಮಸೀದಿಗಳಿಗೆ ಬೆಳಿಗ್ಗೆಯೇ ತೆರಳಿ...

Related Articles

ಕುಂದೂರು ಫಾರೆಸ್ಟ್‌ನ ಹೆಬ್ಬಾಳ ಗದ್ದೆಯಲ್ಲಿ ಗಂಡು ಕಾಡಾನೆ ಸಾವು

​ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಒಂಟಿ ಗಂಡು ಕಾಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ...

ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ

ಶೃಂಗೇರಿ: ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಶೃಂಗೇರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶುಕ್ರವಾರ  ಹಾಜರುಪಡಿಸಿದರು....

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ

ಚಿಕ್ಕಮಗಳೂರು:  ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ...