ಚಿಕ್ಕಮಗಳೂರು : ಜಿಲ್ಲೆಗೆ ವಲಸೆ ಬಂದು ಕಾಫಿ ತೋಟಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವ ಬೀಟಮ್ಮ ಆನೆ ಗ್ಯಾಂಗ್ ನ ಒಂದು ಸಲಗ ಸಾವನ್ನಪಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿದ್ದು ಆಲ್ದೂರು ಸಮೀಪದ ತುಡುಕೂರು ಗ್ರಾಮದ ಕಾಫಿ ತೋಟಗಳ ನಡುವೆ ಮೃತ ಆನೆಯ ದೇಹ ಪತ್ತೆಯಾಗಿದೆ.
ಕಾಫಿನಾಡಲ್ಲಿ 17 ಕಾಡಾನೆಗಳ ಹಿಂಡಿನ ಬೀಟಮ್ಮ ಗ್ಯಾಂಗಿನ ಹಾವಳಿ ವಿಪರೀತಗೊಂಡಿತ್ತು. ಈ ನಡುವೆ ಇಂದು ಬೀಟಮ್ಮ ಗ್ಯಾಂಗ್ ನ ಒಂದು ಸಲಗ ಸಾವನ್ನಪಿದೆ ವಿದ್ಯುತ್ ಸ್ಪರ್ಶಿಸಿ ಒಂದು ಸಲಗ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.ಚಿಕ್ಕಮಗಳೂರು ತಾಲೂಕಿನ ತುಡುಕೂರು ಗ್ರಾಮದ ಕಾಫಿ ತೋಟಗಳ ಬಳಿ ಘಟನೆ ನಡೆದಿದ್ದು ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಒಂಟಿ ಸಲಗ ಸ್ಥಳದಲ್ಲೇ ಅಸುನೀಗಿದೆ.
ಕಳೆದ 3 ದಿನಗಳಿಂದ 17 ಕಾಡಾನೆ ಗಳ ಹಿಂಡು ಬೀಟಮ್ಮ ಗ್ಯಾಂಗ್ ತುಡುಕೂರು ಸುತ್ತಮುತ್ತ ಸಾಕಷ್ಟು ಬೆಳೆ ನಾಶ ಹಾಗೂ ಜನರಿಗೆ ಭೀತಿ ಹುಟ್ಟಿಸಿತ್ತು. 3ದಿನಗಳಿಂದ ಬೀಟಮ್ಮ ಗ್ಯಾಂಗ್ ಆಲ್ದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಟ್ ಮಾಡುತ್ತಿದ್ದವು . ಒಟ್ಟು ಇದ್ದ 17 ಕಾಡಾನೆಗಳಲ್ಲಿ ಒಂದು ಸಲಗ ವಿದ್ಯುತ್ ಸ್ಪರ್ಶದಿಂದ ಸಾವು ಕಂಡಿದೆ
ಸದ್ಯ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿಯನ್ನು ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಬೀಟಮ್ಮ ಗ್ಯಾಂಗ್ ಹಾವಳಿ ತೀವ್ರಗೊಂಡಿತ್ತು.
Leave a comment