Home namma chikmagalur chikamagalur ಖಾಸಗಿ ಕಂಪನಿಗೆ ಜೋನಲ್ ಮ್ಯಾನೇಜರ್ ವಂಚನೆ
chikamagalurCrime NewsHomeLatest Newsnamma chikmagalur

ಖಾಸಗಿ ಕಂಪನಿಗೆ ಜೋನಲ್ ಮ್ಯಾನೇಜರ್ ವಂಚನೆ

Share
Share

ಚಿಕ್ಕಮಗಳೂರು: ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಂಪನಿಯ ನಂಬಿಕೆ ದ್ರೋಹ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ದುರುಪಯೋಗಪಡಿಸಿಕೊಂಡಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಗ್ರೀನ್ ಬಯೋಟೆಕ್ ಕಂಪನಿಯ ಮಾಲೀಕ ಡಾ. ನವೀನ್ ಮಿಸ್ಕಿತ್ ಅವರು ತಮ್ಮ ಕಂಪನಿಯಲ್ಲಿ ಜೋನಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಂಜಾಬ್ ರಾಜ್ಯದ ಸರ್ತಾಜ್ ಖಾನ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.

ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಸರ್ತಾಜ್ ಖಾನ್‌ ಕಂಪನಿಯ ಅಧಿಕೃತ ಕೆಲಸಗಳಿಗಾಗಿ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ಕೆಎ-18/ಎಂಬಿ-5086 ನೋಂದಣಿ ಸಂಖ್ಯೆಯ ಕೀಯಾ ಸಾನೇಟ್ ಕಾರನ್ನು ನೀಡಲಾಗಿತ್ತು.

ದೂರಿನ ಸಾರಾಂಶದ ಪ್ರಕಾರ, ದಿನಾಂಕ 18-10-2025 ರಂದು ರಾತ್ರಿ ಕಂಪನಿ ಕೆಲಸ ಮುಗಿಸಿ ಸಿಬ್ಬಂದಿಯೊಬ್ಬರ ಮನೆಯಲ್ಲಿ ತಂಗಿದ್ದ ಸರ್ತಾಜ್ ಖಾನ್, ಮರುದಿನ ಬೆಳಿಗ್ಗೆ ಅಲ್ಲಿಂದ ಕಾರಿನೊಂದಿಗೆ ಹೊರಟು ಹೋಗಿದ್ದಾರೆ.

ಅಂದಿನಿಂದ ಕಂಪನಿಗೆ ಹಾಜರಾಗದೆ ಹಾಗೂ ಯಾವುದೇ ಮಾಹಿತಿ ನೀಡದೆ ತಲೆಮರೆಸಿಕೊಂಡಿರುವ ಅವರು, ಕಂಪನಿಗೆ ಸೇರಿದ ಬೆಲೆಬಾಳುವ ಕಾರನ್ನು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಕಾರನ್ನು ವಾಪಸ್ ನೀಡುವಂತೆ ಕಂಪನಿ ಮಾಲೀಕರು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸದ ಸರ್ತಾಜ್ ಖಾನ್, ಕಂಪನಿಯ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರಿನ ಪತ್ತೆ ಹಾಗೂ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ.

Zonal manager defrauds private company

Share

Leave a comment

Leave a Reply

Your email address will not be published. Required fields are marked *

Don't Miss

ಆಲಿಕಲ್ಲು ಮಳೆಯಿಂದ ರೈತರು ಕಂಗಾಲು

ಚಿಕ್ಕಮಗಳೂರು:  ಉಗಾದಿ ಹಬ್ಬದ ಹಿಂದೆ_ಮುಂದೆ ಮಳೆ ಬರುತ್ತದೆ. ಆದರೆ ಈ ವರ್ಷ ಆರಂಭವಾದ ಮಳೆಯಲ್ಲಿ ರಾಶಿ,ರಾಶಿ ಆಲಿಕಲ್ಲು ಮಳೆ ಬರುತ್ತಿರುವುದು ನೋಡಿ ರೈತರು ,ಬೆಳೆಗಾರರು ಕಂಗಲಾಗಿದ್ದಾರೆ ಮುಂದೆ ಏನು ಎಂಬ ಚಿಂತೆ...

ಸೈಬರ್ ವಂಚಕರ ಜಾಲದಲ್ಲಿಆಲ್ಲೂರಿನ ಪ್ರದೀಪ್‌ ಗೆ ವಂಚನೆ

ಚಿಕ್ಕಮಗಳೂರು : ಸೈಬರ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ತಾಂತ್ರಿಕತೆಯನ್ನು ಬಳಸಿಕೊಂಡು ಸಾರ್ವಜನಿಕರ ಹಣ ಲೂಟಿ ಮಾಡುವ ಸೈಬರ್ ವಂಚಕರ ಜಾಲಕ್ಕೆ ಹಲವರು ಬಲಿಯಾಗುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ...

Related Articles

ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಎಲೆಕ್ನಿಕಲ್ ಸಾಮಗ್ರಿ ಕಳ್ಳತನ

ಅಜ್ಜಂಪುರ: ಭದ್ರಾ ಚಾನಲ್ ಪಂಪ್ ಹೌಸ್‌ನಲ್ಲಿ ಭಾರಿ ಪ್ರಮಾಣದ ಎಲೆಕ್ನಿಕಲ್ ಸಾಮಗ್ರಿಗಳನ್ನು ಕಳ್ಳತನವಾಗಿರುವ ಘಟನೆ ಬೆಳಕಿಗೆ...

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ

ಬೆಂಗಳೂರು: ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ...

ಜಿಲ್ಲೆಯ ರಾಜಕಾರಣಿಗಳು ಮೀಸಲಾತಿ ಕಂಟಕದಿಂದ ಸದ್ಯಕ್ಕೆ ಬಚಾವ್

ಚಿಕ್ಕಮಗಳೂರು: ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮೀಸಲಾತಿ ತರಲು ಯತ್ನಿಸಿ ಪ್ರಸ್ತುತ...

ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಪ್ರತಿಭಟನೆ

ಚಿಕ್ಕಮಗಳೂರು: ತಾಲೂಕಿನ ಅಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರಿಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮೈಲಿಮನೆ...