ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಮತ ಹಾಕುವ ನಿರ್ದೇಶಕರುಗಳನ್ನು ಮನೆಗೆ ಕರೆಸಿ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ದೇವೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ದೇವೇಂದ್ರ, ನಿರ್ದೇಶಕರುಗಳಿಗೆ ಹಣ,ಬೆಳ್ಳಿ ಬಟ್ಟಲು ಆಮಿಷ ಓಡುತ್ತಿದ್ದು, ರೆಸಾರ್ಟ್ ಗೆ ಬಂದು ವಾಸ್ತವ್ಯ ಹೂಡುವಂತೆ ಒತ್ತಡ ಏರುತ್ತಿದ್ದಾರೆ. ಇಂತಹ ನೀಚ ಕೃತ್ಯವನ್ನು ಬೋಜೇಗೌಡರು ಮಾಡಬಾರದು ಎಂದಿರುವ ದೇವೇಂದ್ರ, ನೌಕರರ ಸಂಘದ ಚುನಾವಣೆಯ ವಿಷಯವನ್ನು ಮತ್ತೋರ್ವ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೇಮಂತ್ ಕುಮಾರ್ ಸಾರ್ವಜನಿಕ ಗೊಳಿಸುತ್ತಿರುವುದು ದುರಂತ ಇದು ಸಂಘಕ್ಕೆ ವಿನಾಶಕಾರಿ, ಕಂದಾಯ ನೌಕರರ ಸಂಘವನ್ನು ವರ್ಷಾನುಗಟ್ಟಲೆ ಸಭೆ ನಡೆಸದೆ, ಯಾವುದೇ ಚಟುವಟಿಕೆಗಳನ್ನು ನಡೆಸದೆ ಶಾಶ್ವತವಾಗಿ ಮುಚ್ಚಿರುವ ಇವರ ಅಹಂಕಾರದಿಂದಲೇ ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ಕೈ ಬಿಡಲಾಗಿತ್ತು.
ನೌಕರರ ಕ್ಯಾಂಟೀನ್ ನಿರ್ಮಾಣದಲ್ಲಿ 30 ಲಕ್ಷ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿರುವ ಕಿರಣ್ ಕುಮಾರ್ ಮೇಲೆ ಮಾನ ನಷ್ಟ ದಾವೆ ಹೂಡುವುದಾಗಿ ದೇವೇಂದ್ರ ಇದೆ ವೇಳೆ ಹೇಳಿದ್ದಾರೆ. ಕಿರಣ್ ಕುಮಾರ್ ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಮೂವರು ಶಿಕ್ಷಕರಿಗೆ ಮೆಡಿಕಲ್ ನಕಲಿ ಬಿಲ್ ಸೃಷ್ಟಿಸಿ 15 ಲಕ್ಷ ಭ್ರಷ್ಟಾಚಾರ ನಡೆಸಿ ಬಿ.ಇ.ಓ ತಲದಂಡ ಆಗುತ್ತದೆ ಎಂಬುದು ಗೊತ್ತಾಗಿ ಮತ್ತೆ ಸರ್ಕಾರಕ್ಕೆ 15 ಲಕ್ಷ ವಾಪಸ್ ಕಟ್ಟಿದ್ದು ಏಕೆ ಸ್ಪಷ್ಟಪಡಿಸಲಿ ಎಂದರು.
ಇದೆ ವೇಳೆ ಮಾತನಾಡಿದ ಅವರು ಬಸ್ ಮಂಜರನ್ನು ಸಂಘ ವಿರೋಧಿ ಚಟುವಟಿಕೆಯಲ್ಲಿ ಅಮಾನತ್ತುಗೊಳಿಸಿರುವುದು ನಾವಲ್ಲ ಹೊರತಾಗಿ ರಾಜ್ಯ ಸಂಘ. ಸಂಘದ ಬೈಲಾನೆ ಗೊತ್ತಿಲ್ಲದ ಮಂಜುನಾಥ್ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಅಮಾನತ್ತುಗೊಂಡಿದ್ದರು. ನಾನು ಬೋಜೇಗೌಡರ, ಬೆದರಿಕೆಗೆ ಹೆದರುವುದಿಲ್ಲ., ನಮಗೆ ಯಾವುದೇ ಭಯವೂ ಇಲ್ಲ, ಬುಧವಾರ ನಡೆಯಲಿರುವ ಚುನಾವಣೆ ನಿಸ್ಪಕ್ಷಪಾತವಾಗಿ, ಸುಸೂತ್ರವಾಗಿ, ಪಾರದರ್ಶಕವಾಗಿ ನಡೆಯಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ದೇವೇಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದೇ ವೇಳೆ ಸರ್ಕಾರಿ ನೌಕರರ ಸಂಘದ ಪರಿಷತ್ ಸ್ಥಾನಕ್ಕೆ ಸ್ಥಾನದ ಅಭ್ಯರ್ಥಿ ಪೂರ್ಣೇಶ್ , ಖಜಾಂಚಿ ಸ್ಥಾನದ ಅಭ್ಯರ್ಥಿ ಚೇತನ್ ಉಪಸ್ಥಿತರಿದ್ದರು.
Leave a comment