Home namma chikmagalur chikamagalur ತೀವ್ರ ಚರ್ಚೆಗೆ ಗ್ರಾಸವಾದ ವಿಕಾಸ್ ಪುತ್ತೂರ್ ನೋಟೀಸ್
chikamagalurCrime NewsLatest Newsnamma chikmagalurTarikere

ತೀವ್ರ ಚರ್ಚೆಗೆ ಗ್ರಾಸವಾದ ವಿಕಾಸ್ ಪುತ್ತೂರ್ ನೋಟೀಸ್

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ನೋಟೀಸ್ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕ್ರಮದ ಆಯೋಜಕರು ಮತ್ತು ಭಾಷಣಕಾರರಿಗೆ, ವಿಶೇಷವಾಗಿ ದಿಕ್ಕೂಚಿ ಭಾಷಣಕಾರ ವಿಕಾಸ್ ಪುತ್ತೂರ್ ಅವರಿಗೆ ಈ ನೋಟೀಸ್ ಜಾರಿಗೊಳಿಸಲಾಗಿದೆ.

ದ್ವೇಷ ಭಾಷಣದ ಕುರಿತು ಕಟ್ಟುನಿಟ್ಟಿನ ಸೂಚನೆ: ಪೊಲೀಸರು ನೀಡಿರುವ ನೋಟೀಸ್‌ನಲ್ಲಿ, ಭಾಷಣದ ವೇಳೆ ಪಾಲಿಸಬೇಕಾದ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಪ್ರಮುಖವಾಗಿ, 2025ರ ದ್ವೇಷ ಭಾಷಣ ಕಾಯ್ದೆಯ ನಿಯಮಗಳು ಉಲ್ಲಂಘನೆಯಾಗದಂತೆ ಮತ್ತು ಯಾವುದೇ ಅನ್ಯಕೋಮಿನ ಭಾವನೆಗಳಿಗೆ ಧಕ್ಕೆಯಾಗದಂತೆ ಮಾತನಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

“ನಿಮ್ಮ ಭಾಷಣವು ಯಾವುದೇ ಗುಂಪಿನ ವಿರುದ್ಧ ದ್ವೇಷ ಅಥವಾ ಹಿಂಸೆಗೆ ಪ್ರಚೋದನೆ ನೀಡುವಂತಿರಬಾರದು” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಸಹ ಸೂಚಿಸಲಾಗಿದೆ.

ಎಚ್ಚರಿಕೆ ಹಾಗೂ ಹಿಂದೂ ಪರ ಸಂಘಟನೆಗಳ ಅಸಮಾಧಾನ: ಒಂದು ವೇಳೆ ದ್ವೇಷ ಭಾಷಣ ಮಸೂದೆಯ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ವರ್ತಿಸಿದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತರೀಕೆರೆ ಪೊಲೀಸರು ಈ ನೋಟೀಸ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಈ ನೋಟೀಸ್‌ನ ಪ್ರತಿ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vikas Puttur’s notice sparks heated debate

Share

Leave a comment

Leave a Reply

Your email address will not be published. Required fields are marked *

Don't Miss

ಮತದಾರ ಪಟ್ಟಿಗೆ ಮತದಾರರನ್ನು ಸೇರಿಸುವಲ್ಲಿ ಬಿಎಲ್‌ಒ-೨ ಗಳು ಕಾಳಜಿ ವಹಿಸಲು

ಚಿಕ್ಕಮಗಳೂರು: ಕಾಂಗ್ರೆಸ್ ಸಾಂಪ್ರದಾಯಿಕ ಮತದಾರರನ್ನು ಮತದಾರ ಪಟ್ಟಿಗೆ ಸೇರಿಸುವಲ್ಲಿ ಬಿಎಲ್‌ಒ-೨ ಗಳು ಕಾಳಜಿ ವಹಿಸಿದಲ್ಲಿಮಾತ್ರ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಟ್ಟಿಯಾಗಿ ಎದುರಿಸಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರದ...

ನೂತನ ತಂತ್ರಜ್ಞಾನವನ್ನು ಯುವಜನತೆ ಮಿತಿಯಲ್ಲಿ ಬಳಸಬೇಕು

ಚಿಕ್ಕಮಗಳೂರು: ಎ ಐ ಕೃತಕ ಬುದ್ಧಿಮತ್ತೆ ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ಯುವಜನತೆ ಇತಿ ಮಿತಿಯಲ್ಲಿ ಬಳಸಬೇಕು ಎಂದು ಎ ಐ ಟಿ ಯು ಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಸಲಹೆ ಮಾಡಿದರು....

Related Articles

ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಜೋಳದಾಳು ಗ್ರಾಮದಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ತಾಲೂಕಿನ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮೈಲಿಮನೆ ಗ್ರಾಮ...

ರಕ್ತದಾನದಿಂದ ಜೀವ ಉಳಿಸುವವರು ಜೀವಸಂರಕ್ಷಕರೇ

ಚಿಕ್ಕಮಗಳೂರು: – ರಕ್ತದಾನಕ್ಕೆ ಜಾತಿ ತಾರತಮ್ಯವಿಲ್ಲ. ಜೀವ ಉಳಿಸುವ ಪ್ರತಿಯೊಬ್ಬ ವ್ಯಕ್ತಿಯು ಜೀವಸಂರಕ್ಷಕರೇ. ಶ್ರೀಮಂತಿಕೆ ಎಷ್ಟೇ...

ಯುದ್ಧ ನಿಲ್ಲಿಸಬೇಕಾದವರು ಮೌನವಾಗಿರುವುದು ಮಾನವತೆಯ ಸೋಲು

ಚಿಕ್ಕಮಗಳೂರು: ಯುದ್ಧದ ಬೆಂಕಿ ವಿಶ್ವವನ್ನು ಸುಡುತ್ತಿರುವಾಗ, ಶಾಂತಿಯ ಮಾತುಗಳನ್ನು ಹೇಳಬೇಕಾದ ಸಂಘಟನೆಗಳು ರಾಜಕೀಯ ಲಾಭ-ನ?ದ ಲೆಕ್ಕಾಚಾರದಲ್ಲಿ...

ಸರ್ಕಾರ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು

ಚಿಕ್ಕಮಗಳೂರು: ಚಿನ್ನದ ಬೆಲೆ ಹೆಚ್ಚಳದಿಂದಾಗಿ ಶೇ.೮೦ ರಷ್ಟು ಗೋಲ್ಡ್‌ಸ್ಮಿತ್ ಕೆಲಸಗಾರರು ಕೆಲಸವಿಲ್ಲದೆ ಪೇಚಾಡುವಂತಾಗಿರುವ ಹಿನ್ನೆಲೆಯಲ್ಲಿ ಸರ್ಕಾರ...