ಸಖರಾಯಪಟ್ಟಣ: ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಸಂಕ್ರಾಂತಿ ಹಬ್ಬದಂದು ಮೊಲ ಬಿಡುವ ಸೇವೆಯಿಂದ ಆರಂಭವಾದ ಧಾರ್ಮಿಕ ಕೈಂಕರ್ಯಗಳಲ್ಲಿ ದಿನವೂ ವಿಶೇಷ ಅಭಿಷೇಕ ಮತ್ತು ಹಣ್ಣು ತುಪ್ಪ ಸೇವೆಗಳು ನಡೆದವು.
ರಾಜ್ಯದ ವಿವಿದೆಡೆಯಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಮಧ್ಯಾಹ್ನ ರಂಗನಾಥಸ್ವಾಮಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಬಿಡದಿಮನೆಗೆ ಕರೆತಂದು ಪ್ರತಿಷ್ಠಾಪಿಸಲಾಯಿತು.ದೇವಾಲಯದಿಂದ ಶ್ರೀದೇವಿ ಮತ್ತು ಭೂದೇವಿಯ ಉತ್ಸವ ಮೂರ್ತಿಗಳನ್ನು ಬಿಡದಿಮನೆ ಸಮೀಪದ ಅರಳೀಕಟ್ಟೆಗೆ ಮೆರವಣಿಗೆಯಲ್ಲಿ ಕರೆತಂದು ರಂಗನಾಥಸ್ವಾಮಿಯೊಂದಿಗೆ ಕಲ್ಯಾಣೋತ್ಸವ ನೆರವೇರಿಸಲಾಯಿತು.
ನಂತರ ಮೂರು ದೇವರುಗಳನ್ನು ಬಿಡದಿಮನೆಗೆ ಕರೆತಂದು ಪೂಜೆ ಸಲ್ಲಿಸಲಾಯಿತು. ಅಲಂಕಾರಗೊಂಡ ಮಹಾರಥದಲ್ಲಿ ರಂಗನಾಥಸ್ವಾಮಿ ಮತ್ತು ದೇವಿಯವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಗ್ರಾಪಂ. ಅಧ್ಯಕ್ಷೆ ರಾಜಮ್ಮ ಮತ್ತು ಸದಸ್ಯರು, ಶಾಸಕ ತಮ್ಮಯ್ಯ, ಸಿ ಟಿ ರವಿ, ಎಸ್ ಎಲ್ ಬೋಜೇಗೌಡ,ಹಾಸನ ಹಾಲು ಒಕ್ಕೂಟ ನಿರ್ದೇಶಕ ಎಸ್ ಡಿ ಸೋನಾಲ್‌ಗೌಡ, ಉಪವಿಭಾಗಧಿಕಾರಿ ಎನ್ ವಿ ನಟೇಶ್, ತಹಶಿಲ್ದಾರ್ ಪೂರ್ಣೀಮ, ದೇವಾಲಯ ಸಮಿತಿಯ ಲೋಕೇಶ್ , ಸಚ್ಚಿದಾನಂದ, ದೇವರಾಜು,ಪೊಲೀಸ್ ಇಲಾಖೆಯ ಡಿವೈಎಸ್ಪಿ ಪರಶುರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಸೇರಿದಂತೆ ಕಂದಾಯಾಧಿಕಾರಿಗಳು, ಗ್ರಾಮಸ್ಥರು ರಥಕ್ಕೆ ಪೂಜೆ ಸಲ್ಲಿಸಿದರು.
ನಂತರ ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತರು ತೇರು ಎಳೆದರು. ನೆರೆದಿದ್ದವರು ರಥಕ್ಕೆ ಬಾಳೇಹಣ್ಣು ಎಸೆದು ಇಷ್ಠಾರ್ಥಗಳ ಸಿದ್ಧಿಗೆ ಪ್ರಾರ್ಥನೆ ಸಲ್ಲಿಸಿದರು. ರಥೋತ್ಸವದ ಬಳಿಕ ಭಕ್ತರು ಕೆಂಚರಾಯಸ್ವಾಮಿ ಸನ್ನಿಧಿಗೆ ತೆರಳಲು ಅಣಿಯಾಗುತ್ತಿದ್ದುದು ಕಂಡು ಬಂತು.
The festive Ranganatha Swamy Chariot Festival
Leave a comment