Home namma chikmagalur chikamagalur ಭೀಕರ ಬೈಕ್ ಅಪಘಾತ-ಯುವಕನ ಸಾವು
chikamagalurCrime NewsHomeLatest Newsnamma chikmagalur

ಭೀಕರ ಬೈಕ್ ಅಪಘಾತ-ಯುವಕನ ಸಾವು

Share
Share

ಚಿಕ್ಕಮಗಳೂರು :  ಭೀಕರ ಬೈಕ್ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಹೊರವಲಯದ ಎಐಟಿ ವೃತ್ತದಲ್ಲಿ ನಡೆದಿದೆ.

ತಾಲೂಕಿನ ಹಲಸುಬಾಳು ಗ್ರಾಮದ 22 ವರ್ಷದ ದೀಪಕ್ ಮೃತಪಟ್ಟ ದುರ್ದೈವಿ, ಅತಿ ವೇಗವಾಗಿ ಬಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಪರಿಣಾಮ ದೀಪಕ್ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ನಗರ ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಧನಂಜಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆಂಬುಲೆನ್ಸ್‌ ಚಾಲಕರ ನೆರವಿನೊಂದಿಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸದ್ಯ ಈ ಅಪಘಾತಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

Terrible bike accident – young man dies

Share

Leave a comment

Leave a Reply

Your email address will not be published. Required fields are marked *

Don't Miss

ಹಿರಿಯ ನಾಗರಿಕರಿಗೆ 3.12 ಲಕ್ಷ ರೂ ವಂಚನೆ

ಚಿಕ್ಕಮಗಳೂರು: ಸೈಬರ್ ಕ್ರಿಮಿನಲ್‌ಗಳ ಜಾಲಕ್ಕೆ ಸಿಲುಕಿ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 3.12 ಲಕ್ಷ ಕಳೆದುಕೊಂಡಿದ್ದಾರೆ. ನಗರದಲ್ಲಿ ವಾಸವಾಗಿರುವ 62 ವರ್ಷದ ವೆಂಕಟೇಶ್ ಇತ್ತೀಚೆಗೆ ಅವರ ಮೊಬೈಲ್‌ಗೆ ಬಂದಿದ್ದ ಒಂದು ಅಪರಿಚಿತ ಎಪಿಕೆ...

ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಶಿಫಾರಸ್ ಪತ್ರ

ಚಿಕ್ಕಮಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಜರಂಗದಳದ ಮುಖಂಡ ಶ್ಯಾಮ್ ವಿ ಗೌಡ, ಮುಸ್ಲಿಂ ಸಮುದಾಯದ 10 ಮಂದಿ ಸೇರಿ ಜಿಲ್ಲೆಯ ಒಟ್ಟು 15 ಮಂದಿಯ ಗಡಿಪಾರಿಗೆ ಜಿಲ್ಲಾ...

Related Articles

ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿ ಎಸ್.ಬಿದರೆಯ ಬೆಂಕಿ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವವು ಮಂಗಳವಾರ ಶ್ರದ್ಧಾ...

ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿದ್ದ ಇಂದಿರಾ ಕ್ಯಾಂಟೀನ್ ಸ್ಥಳಾಂತರ

ಚಿಕ್ಕಮಗಳೂರು : ನಗರದ ಐ.ಜಿ. ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರ...

ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳು ಮನೆ ಬಾಗಿಲಿಗೆ

ಚಿಕ್ಕಮಗಳೂರು: ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ದೃಢಪಡಿಸಿ ಎಂದಿನಂತೆ ಎಲ್‌ಪಿಜಿ...

ಶಾಸಕ ಜಿ.ಹೆಚ್. ಶ್ರೀನಿವಾಸ್ ವಿರುದ್ಧ ಪ್ರತಿಭಟನೆ

ಅಜ್ಜಂಪುರ : ಶಾಸಕ ಜಿ.ಹೆಚ್. ಶ್ರೀನಿವಾಸ್ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು...