ಚಿಕ್ಕಮಗಳೂರು : ಜಿಲ್ಲೆಯಲ್ಲಿ ಪ್ರಾಣಿಗಳ ಹಾವಳಿ ನಿನ್ನೆ,ಮೊನ್ನೆ ಯದಲ್ಲ.ಅದರಲ್ಲೂ ಆನೆಗಳು ಹಿಂಡು,ಹಿಂಡಾಗಿ ಬಂದು ಬೆಳೆ ನಾಶ ಮಾಡುತ್ತಿರುವುದು ಬೆಳೆಗಾರರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದಾರೆ.ಹಲವರು ಪ್ರಾಣ ಕಳೆದು ಕೊಂಡಿದ್ದಾರೆ.
ಇತ್ತೀಚೆಗೆ ತರೀಕೆರೆ ಸುತ್ತಮುತ್ತ ಆನೆ ಹಾವಳಿ ಹೆಚ್ಚಾಗಿದೆ ಎಂದು ರೈತರು ದೂರಿದ್ದಾರೆ.ಮೂರು ಕ್ಕೂ ಹೆಚ್ಚು ಆನೆಗಳು ಕಳೆದ ಒಂದು ವಾರದಿಂದ ಅಮ್ಮಣ್ಣಿ ಕಾವಲ್,ಜೋಡಿ ತಿಮ್ಮಪುರ ಮತ್ತು ಭದ್ರ ಮೇಲ್ದಂಡೆ ಕಾಲುವೆ ಪಕ್ಕ ಹೆಚ್ಚಾಗಿ ಕಾಣಿಸಿಕೊಳ್ಳುವ ಆನೆಗಳನ್ನು ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಓಡಿಸಿದರು ಕೂಡ ಮತ್ತೆ ಮತ್ತೆ ಆನೆಗಳು ದಾಳಿ ಮಾಡಿ ಅಡಿಕೆ, ತೆಂಗು,ರಾಗಿ ಮತ್ತು ತರಕಾರಿ ಬೆಳೆಗಳನ್ನು ನಾಶ ಮಾಡಿವೆ ಎಂದು ರೈತರು ದೂರಿದ್ದಾರೆ.
ಲಿಂಗದಳ್ಳಿ ಹೋಬಳಿಯ ತಣಿಗೆಬಯಲು, ನಂದಿಬಟ್ಟಲು, ಕೃಷ್ಣಾಪುರ ಮತ್ತು ಉಡೆವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಕಾಟ ಹೇಳತೀರದಾಗಿದೆ. ಅರಣ್ಯ ಇಲಾಖೆಯವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ರೈತರು ಜನರು ದೂರಿದಾಗ ಕಾಟಚಾರಕ್ಕೆ ಪಟಾಕಿ ಸಿಡಿಸುವ ಬದಲು ಇನ್ನಾದರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳು ಬೇಕು ಇಲ್ಲದಿದ್ದರೆ ರೋಷಿರುವ ರೈತರು ಮತ್ತು ಬೆಳೆಗಾರರು ಕಾಡನೆಗಳನ್ನು ಅರಣ್ಯ ಇಲಾಖೆ ಕಛೇರಿಗೆ ನುಗ್ಗಿಸಿದರೂ ಆಶ್ಚರ್ಯ ಪಡುವಂತಿಲ್ಲ.
Leave a comment