Home Crime News ಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ
Crime NewsHomeKadurLatest Newsnamma chikmagalur

ಪರೀಕ್ಷಾ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ

Share
Share

ಕಡೂರು: ಪರೀಕ್ಷಾ ಭಯ ಹಾಗೂ ಅಧಿಕಾರಿಗಳ ಮಾತಿನಿಂದ ನೊಂದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ದುರದೃಷ್ಟಕರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಒಂದರಲ್ಲಿ ನಡೆದಿದೆ.

ಜನವರಿ 28ರಂದು ಮನೆಯಲ್ಲಿದ್ದ ಕೀಲು ನೋವು ಹಾಗೂ ಉಳುಕಿನ ಮಾತ್ರೆಗಳನ್ನು ಅತಿಯಾಗಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿಯನ್ನು ಕೂಡಲೇ ಕಡೂರು ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಕೊನೆಯುಸಿರೆಳೆದಿದ್ದಾಳೆ.

ವಿದ್ಯಾರ್ಥಿನಿಯು 2ನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಲ್ಲಿದ್ದಳು ಎನ್ನಲಾಗಿದ್ದು, ಈ ನಡುವೆ ಬಿ.ಇ.ಓ. (ಕ್ಷೇತ್ರ ಶಿಕ್ಷಣಾಧಿಕಾರಿ) ಅವರು ಬಾಲಕಿಯ ಮನೆಗೆ ಭೇಟಿ ನೀಡಿ, “500ಕ್ಕೆ 93 ಅಂಕ ತೆಗೆದಿದ್ದೀಯಾ, ನೀನು ಪಾಸ್ ಆಡ್ತೀಯಾ?” ಎಂದು ಪ್ರಶ್ನಿಸಿ ಬುದ್ದಿ ಹೇಳಿದ್ದರು ಎನ್ನಲಾಗಿದೆ.

ಅಧಿಕಾರಿಯ ಈ ಮಾತಿನಿಂದ ವಿದ್ಯಾರ್ಥಿನಿ ತೀವ್ರವಾಗಿ ಮಂಕಾಗಿದ್ದಳು ಎಂದು ಹೇಳಲಾಗುತ್ತಿದೆ. ಮಗಳ ಸಾವಿನ ಬಗ್ಗೆ ಪೋಷಕರು ಯಾವುದೇ ದೂರು ನೀಡಲು ಮುಂದಾಗಿಲ್ಲವಾದರೂ, “ಬದುಕಿಗೆ ಅಂಕಗಳೇ ಮುಖ್ಯವಲ್ಲ, ಜೀವಕ್ಕೆ ಬೆಲೆಯಿಲ್ಲವೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Student commits suicide due to exam fear

Share

Leave a comment

Leave a Reply

Your email address will not be published. Required fields are marked *

Don't Miss

ಮತದಾರ ಪಟ್ಟಿಗೆ ಮತದಾರರನ್ನು ಸೇರಿಸುವಲ್ಲಿ ಬಿಎಲ್‌ಒ-೨ ಗಳು ಕಾಳಜಿ ವಹಿಸಲು

ಚಿಕ್ಕಮಗಳೂರು: ಕಾಂಗ್ರೆಸ್ ಸಾಂಪ್ರದಾಯಿಕ ಮತದಾರರನ್ನು ಮತದಾರ ಪಟ್ಟಿಗೆ ಸೇರಿಸುವಲ್ಲಿ ಬಿಎಲ್‌ಒ-೨ ಗಳು ಕಾಳಜಿ ವಹಿಸಿದಲ್ಲಿಮಾತ್ರ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗಟ್ಟಿಯಾಗಿ ಎದುರಿಸಲು ಸಾಧ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರದ...

ನೂತನ ತಂತ್ರಜ್ಞಾನವನ್ನು ಯುವಜನತೆ ಮಿತಿಯಲ್ಲಿ ಬಳಸಬೇಕು

ಚಿಕ್ಕಮಗಳೂರು: ಎ ಐ ಕೃತಕ ಬುದ್ಧಿಮತ್ತೆ ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ಯುವಜನತೆ ಇತಿ ಮಿತಿಯಲ್ಲಿ ಬಳಸಬೇಕು ಎಂದು ಎ ಐ ಟಿ ಯು ಸಿ ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಸಲಹೆ ಮಾಡಿದರು....

Related Articles

ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಜೋಳದಾಳು ಗ್ರಾಮದಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ತಾಲೂಕಿನ ಜೋಳದಾಳು ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಮೈಲಿಮನೆ ಗ್ರಾಮ...

ರಕ್ತದಾನದಿಂದ ಜೀವ ಉಳಿಸುವವರು ಜೀವಸಂರಕ್ಷಕರೇ

ಚಿಕ್ಕಮಗಳೂರು: – ರಕ್ತದಾನಕ್ಕೆ ಜಾತಿ ತಾರತಮ್ಯವಿಲ್ಲ. ಜೀವ ಉಳಿಸುವ ಪ್ರತಿಯೊಬ್ಬ ವ್ಯಕ್ತಿಯು ಜೀವಸಂರಕ್ಷಕರೇ. ಶ್ರೀಮಂತಿಕೆ ಎಷ್ಟೇ...

ಯುದ್ಧ ನಿಲ್ಲಿಸಬೇಕಾದವರು ಮೌನವಾಗಿರುವುದು ಮಾನವತೆಯ ಸೋಲು

ಚಿಕ್ಕಮಗಳೂರು: ಯುದ್ಧದ ಬೆಂಕಿ ವಿಶ್ವವನ್ನು ಸುಡುತ್ತಿರುವಾಗ, ಶಾಂತಿಯ ಮಾತುಗಳನ್ನು ಹೇಳಬೇಕಾದ ಸಂಘಟನೆಗಳು ರಾಜಕೀಯ ಲಾಭ-ನ?ದ ಲೆಕ್ಕಾಚಾರದಲ್ಲಿ...

ಸರ್ಕಾರ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಿ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು

ಚಿಕ್ಕಮಗಳೂರು: ಚಿನ್ನದ ಬೆಲೆ ಹೆಚ್ಚಳದಿಂದಾಗಿ ಶೇ.೮೦ ರಷ್ಟು ಗೋಲ್ಡ್‌ಸ್ಮಿತ್ ಕೆಲಸಗಾರರು ಕೆಲಸವಿಲ್ಲದೆ ಪೇಚಾಡುವಂತಾಗಿರುವ ಹಿನ್ನೆಲೆಯಲ್ಲಿ ಸರ್ಕಾರ...