ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ ರಾಜಕೀಯ ಬುಗುರಿ ಆಡಿಸುವುದರಲ್ಲಿ ನೀಸ್ಸಿಮರು ಒಮ್ಮೆ ಬುಗುರಿ ಆದರೆ ಮತ್ತೊಂದು ಬಾರಿ ಚಾಟಿ ರೀತಿ ಹೇಗೆ ಬೇಕೋ ಹಾಗೆ ಬೀಸುತ್ತಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಬೀಸಿದವರು ಸ್ಥಳೀಯ ಸಂಸ್ಥೆಯ ಚುನಾವಣೆ ಗೆ ಬಿಜೆಪಿಯವರು ಇವರ ಪರ ಚಾಟಿ ಬಿಸುವಂತೆ ಮಾಡಿಕೊಂಡರು ಇದೇ ರಾಜಕೀಯವಲ್ಲವೇ ?
ಜಿಲ್ಲೆಯಲ್ಲಿ ನಡೆದ ನಗರಸಭೆ ಮತ್ತು ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಚಾಟಿ ಬೀಸಿದರೆ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ದಳದ ಜಿಲ್ಲಾ ಅಧ್ಯಕ್ಷ ಅಜಿತ್ ರಂಜನ್ ಪತ್ನಿ ಮಂಜುಳಾ ಕಾಂಗ್ರೆಸ್ ಸೇರಿ ಅಧ್ಯಕ್ಷರಾದರು ಆದರೆ ರಂಜನ್ ಅಜಿತ್ ಕೂಡ ಜಾತ್ಯಾತೀತ ಜನತಾ ದಳದ ಜಿಲ್ಲಾ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಇದನ್ನು ನೋಡಿದರೆ ಗೌಡರ ಚಾಟಿಯ ಮಸಲತ್ತು ಹೇಗಿದೆ ಎಂಬುದು ಮೂಡರಿಗೂ ತಿಳಿಯುತ್ತದೆ.
ದಳದ ಸಂಪೂರ್ಣ ಹಿಡಿತ ಭೋಜೇಗೌಡರ ಬಳಿಯಿದೆ ಎಂಬುದು ಎಲ್ಲರಿಗೂ ಗೊತ್ತು ದಳದ ಮುಖಂಡರು ಉಗಿಯುವಂತೆ ಇಲ್ಲ ನುಂಗುವಂತೆ ಇಲ್ಲ ಎಂಬ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ.
ಕಾಂಗ್ರೆಸ್ ನವರಿಗೆ ಒಂದು ಬಣ್ಣದ ಬುಗುರಿ ಬಿಟ್ಟರೆ ಬಿಜೆಪಿಯವರಿಗೆ ಮತ್ತೊಂದು ಬಣ್ಣದ ಬುಗುರಿ ಬಿಟ್ಟು ಎರಡು ಪಕ್ಷದವರು ಗಿರಿ,ಗಿರಿ ತಿರುಗುವಂತೆ ಮಾಡಿದ್ದಾರೆ ಎಂದುಮೂರು ಪಕ್ಷದವರು ಮಾತನಾಡುತ್ತಿದ್ದಾರೆ. ಜಿಲ್ಲಾ ರಾಜಕಾರಣದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷದವರಿಗೆ ವಿಧಾನ ಪರಿಷತ್ ಸದಸ್ಯ ಭೋಜೇಗೌಡರೇ ಎಲ್ಲಾ ತೀರ್ಮಾನ ತೆಗೆದುಕೊಳ್ಳುವ ನಾಯಕರಾಗಿದ್ದಾರೆ. ಅಧಿಕಾರ ಮುಖ್ಯ ಎಂದು ಎಲ್ಲರೂ ಹೊಂದಾಣಿಕೆಯ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ.
Leave a comment