Home Latest News ಮೂಡಿಗೆರೆಯಲ್ಲಿ ಕಾಟಿ ಕೊಂದ ಆರು ಜನರ ಬಂಧನ
Latest NewschikamagalurCrime NewsHomenamma chikmagalur

ಮೂಡಿಗೆರೆಯಲ್ಲಿ ಕಾಟಿ ಕೊಂದ ಆರು ಜನರ ಬಂಧನ

Share
Share

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ಅರಣ್ಯ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ ನಡೆಸಿ ಕಾಟಿ ಕೊಂದ ಆರು ಜನರನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತೀ ಬೈಲ್ ವ್ಯಾಪ್ತಿಯ ಬಾಳೂರು ಗ್ರಾಮದ ಮಂಜಯ್ಯನ ಮನೆಯಲ್ಲಿ ಕಾಡುಪ್ರಾಣಿಯನ್ನು ಕಳ್ಳಬೇಟೆಯಾಡಿ 1 ಕೆ.ಜಿ.ಯಷ್ಟು ಮಾಂಸವನ್ನು ಕದ್ದು, ಶೇಖರಿಸಿರುವುದು‌ ಪತ್ತೆಯಾಗಿದೆ.

ನಿಡುವಾಳೆ ಗ್ರಾಮದ ಸೇಂಟ್ ಮೇರಿಸ್ ಕಲ್ಕನೆ ಎಸ್ಟೇಟ್ ನಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸವನ್ನು ಮಾಡಿರುವುದಾಗಿ ತಿಳಿದು ಬಂದಿದೆ. ಕಲ್ಮನೆ ಎಸ್ಟೇಟ್ ನ ಜೀವನ್ ಡಿ.ಬಿ.ಬಿ.ಎಲ್. ಬಂದೂಕಿನಿಂದ ಗುಂಡಿಕ್ಕಿದ್ದು, ಫೀಲ್ಡ್ ಆಫೀಸರ್ ಬಪ್ಪುಂಜಿಯ ರವೀಶ್ , ರೈಟರ್ ಪ್ರದೀಪ್ , ಮೇಸ್ತ್ರಿ ದೇಜಪ್ಪ ,ಸೀನ ಕೂಲಿ ಕೆಲಸಗಾರ ಬಾಳೂರಿನ ಸುಂದ್ರೇಶ್ , ದಿಲೀಪ್ ಗ್ರಾಮ ಎಲ್ಲರೂ ಸೇರಿ ಕಲ್ಪನೆ ಎಸ್ಟೇಟ್ ಮಾಲೀಕ ಧೀರಜ್ ಎಲ್ಲರೂ ಮಾಂಸ ಹಂಚಿಕೊಂಡಿರುವುದು ಖಚಿತವಾಗಿದೆ

ಮರ್ಕಲ್ ಕೆರೆಯ ಸುತ್ತ ಪರಿಶೀಲಿಸಿದಾಗ ನೀರಿನಲ್ಲಿ ತಲೆಬುರುಡೆ ತೇಲುತ್ತಿರುವುದು ಕಂಡುಬಂದಿದ್ದು ವಶಕ್ಕೆ ಪಡೆಯಲಾಗಿದೆ. ಮಂಜಯ್ಯನ ಮನೆಯಲ್ಲಿ ದೊರೆತ ಅರೆಬೇಯಿಸಿದ ಸುಮಾರು 1 ಕೆ.ಜಿ. ಕಾಡುಕೋಣದ ಮಾಂಸ , ಕಳ್ಳ ಬೇಟೆಗೆ ಉಪಯೋಗಿಸಿದ ಡಿ.ಬಿ.ಬಿ.,ಎಲ್.ಬಂದೂಕನ್ನು ವಶಕ್ಕೆ ಪಡೆದು ವನ್ಯಪ್ರಾಣಿ ಹತ್ಯೆ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ.

ಕಳ್ಳ ಬೇಟೆ ಆರೋಪದಡಿ ರವೀಶ್, ಪ್ರದೀಪ್, ದೇಜಪ್ಪ, ಸೀನ, ಮಂಜಯ್ಯ, ಸುಂದರ, ರವರನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಸುಂದರೇಶ್, ದಿಲೀಪ್, ಜೀವನ್, ಎಸ್ಟೇಟ್ ಮಾಲೀಕ ಧೀರಜ್ ಪ್ರಭು ತಲೆಮರೆಸಿಕೊಂಡಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ ಟಿ ಎಂ ಮಾರ್ಗದರ್ಶನದಲ್ಲಿ ವಲಯ ಅರಣ್ಯಯಾಧಿಕಾರಿ ಜಿ.ಮಂಜುನಾಥ್ ನೇತೃತ್ವದಲ್ಲಿ ನಡೆಸಲಾಗಿದ್ದು, DRFO ಸುಹಾಸ್, ಲಕ್ಷ್ಮಣ್, ಉಮೇಶ್, ಅಶ್ವತ್, ಸುಧೀರ್, ಕೃಷ್ಣ ಮೂರ್ತಿ, ಗಿರೀಶ್ ಮತ್ತು ಇತರರು ಪಾಲ್ಗೊಂಡಿದ್ದರು.

Six people arrested for killing a man in Mudigere

Share

Leave a comment

Leave a Reply

Your email address will not be published. Required fields are marked *

Don't Miss

ದಬ್ಬಾಳಿಕೆಯಿಂದ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಯತ್ನ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಬ್ಬಾಳಿಕೆಯ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

Related Articles

ಬಯಲ ಬಂಗಾರದ”ಈರುಳ್ಳಿ” ಬಲು ದೂರ,ದೂರ

ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ “ಬಯಲ ಬಂಗಾರದ ಬೆಳೆ ಬೆಳೆಯುವ ಕಪ್ಪು ಮಣ್ಣು ಅಜ್ಜಂಪುರ ಮತ್ತು ಕಡೂರು...

ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂ

ಚಿಕ್ಕಮಗಳೂರು:  ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು...

ಆಸ್ತಿ- ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂಪತ್ತು

ಚಿಕ್ಕಮಗಳೂರು:  ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು...

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ...