ಚಿಕ್ಕಮಗಳೂರು: ಗೂಗಲ್ನಲ್ಲಿ ಸಿಗುವ ಅಪರಿಚಿತ ವೆಬ್ಸೈಟ್ಗಳು ಮತ್ತು ಫೋನ್ ನಂಬರ್ಗಳನ್ನು ಕುರುಡಾಗಿ ನಂಬಿದರೆ ಎಂತಹ ಅಪಾಯ ಕಾಯುತ್ತಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಉಜ್ಜಯಿನಿ ಮಹಾಕಾಳಿ ದರ್ಶನಕ್ಕೆ ತೆರಳಲು ಆನ್ನೈನ್ ನಲ್ಲಿ ರೂಮ್ ಬುಕ್ ಮಾಡಲು ಅಪರಿಚಿತ ಲಿಂಕ್ ಕ್ಲಿಕ್ಕಿಸಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಸಂದೀಪ್ ಎಂಬುವರು ಬರೋಬ್ಬರಿ 3,09,855 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಸಂದೀಪ್ ಅವರು ಗೂಗಲ್ನಲ್ಲಿ ‘Mahakal Bhakta Niwas Ujjain’ ಎಂಬ ವೆಬ್ಸೈಟ್ ಹುಡುಕಿ ಅದರಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಮೊದಲು ಒಂದು ರೂಮ್ ಬುಕ್ ಮಾಡಲು 4,095 ರೂ.ಗಳನ್ನು ವರ್ಗಾಯಿಸಿದ್ದಾರೆ.
ಆದರೆ, ಹಣ ತಲುಪಿಲ್ಲ ಅಥವಾ ‘ಹೋಲ್ಡ್’ ಆಗಿದೆ ಎಂದು ನಂಬಿಸಿದ ವಂಚಕರು, ಹಣ ವಾಪಸ್ ಪಡೆಯಬೇಕಾದರೆ ಮತ್ತೆ ಹಣ ಹಾಕಬೇಕು ಎಂದು ಪದೇ ಪದೇ ಹೇಳಿದ್ದಾರೆ. ಅವರ ಮಾತನ್ನು ನಂಬಿದ ಸಂದೀಪ್. ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು 3 ಲಕ್ಷಕ್ಕೂ ಅಧಿಕ ಹಣವನ್ನು ವರ್ಗಾಯಿಸಿದ್ದಾರೆ.
ಕೊನೆಗೆ ರೂಮ್ ಕೂಡ ಬುಕ್ ಆಗದೆ ಮತ್ತು ಹಣವೂ ವಾಪಸ್ ಬರದೇ ಇದ್ದಾಗ ತಮಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರವಾಸಕ್ಕೆ ಹೋಗುವ ಮುನ್ನ ಅಧಿಕೃತ ವೆಬ್ಸೈಟ್ಗಳನ್ನು ಮಾತ್ರ ಬಳಸಿ ಮತ್ತು ಇಂತಹ ಆನ್ಲೈನ್ ವಂಚನೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Rs 3 lakh fraud for clicking on an unknown link
Leave a comment