ಚಿಕ್ಕಮಗಳೂರು :ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ರಹಮತ್ ತರೀಕೆರೆ ಆಯ್ಕೆಗೊಂಡಿದ್ದಾರೆ.
ಪರಿಚಯ: ಹುಟ್ಟು-ಚಿಕ್ಕಮಗಳೂರು ಜಿಲ್ಲೆಯ ಸಮತಳ (೧೯೫೯): ಕಲಿಕೆ- ಸಮತಳ ತರೀಕೆರೆ ಶಿವಮೊಗ್ಗ ಮೈಸೂರು: ಬಿಎ-ಪ್ರಥಮ ಸ್ಥಾನ, ತೀನಂಶ್ರೀ ಚಿನ್ನದ ಪದಕ: ಎಂ.ಎ. ಪ್ರಥಮಯಾಂಕ್, & ಚಿನ್ನದ ಪದಕ. ಆಧ್ಯಾಪನ- ಶಿವಮೊಗ್ಗದ ಸಹ್ಯಾದ್ರಿ ಹಾಗೂ ಡಿವಿಎಸ್ ಕಾಲೇಜು (೧೯೮೪-೯೨), ಹಂಪಿಯ ಕನ್ನಡ ವಿಶ್ವವಿದ್ಯಾಲಯ (೧೯೯೨-೨೦೨೧): ಸಂದರ್ಶಕ ಪ್ರಾಧ್ಯಾಪಕ-ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ (೨೦೨೩): ಮೈಸೂರು ವಿಶ್ವವಿದ್ಯಾನಿಲಯ (೨೦೨೪-೨೫); ಪ್ರಕಟಣೆ ಪ್ರತಿಸಂಸ್ಕೃತಿ, ಕತ್ತಿಯಂಚಿನ ದಾರಿ, ನೆತ್ತರಸೂತಕ, ಬಾಗಿಲಮಾತು. ಚಿಂತನೆಯ ಪಾಡು (ಸಾಹಿತ್ಯ ವಿಮರ್ಶೆ): ಕರ್ನಾಟಕ ಸೂಫಿಗಳು, ಕರ್ನಾಟಕ ನಾಥಪಂಥ, ಕರ್ನಾಟಕ ಶಾಕ್ತಪಂಥ, ಕರ್ನಾಟಕ ಮೊಹರಂ, ರಾಜಧರ್ಮ, ಕರ್ನಾಟಕ ಗುರುಪಂಥ (ಸಂಶೋಧನೆ): ಸಂಶೋಧನ ಮೀಮಾಂಸೆ, ಸಾಂಸ್ಕೃತಿಕ ಆಧ್ಯಯನ (ಸಂಶೋಧನ ತಾತ್ವಿಕತೆ); ಮರದೊಳಗಣ ಕಿಚ್ಚು, ಧರ್ಮಪರೀಕ್ಷೆ, ಬಹುತ್ವ ಕರ್ನಾಟಕ (ಚಿಂತನೆ): ಅಂಡಮಾನ್ ಕನಸು, ಕದಳಿ ಹೊಕ್ಕು ಬಂದೆ. ಜೆರುಸಲೆಂ (ಪ್ರವಾಸಕಥನ): ನಡೆದಷ್ಟೂ ನಾಡು, ಸಣ್ಣಸಂಗತಿ, ಹಾಸುಹೊಕ್ಕು (ಅಂಶಣ): ಲೋಕವಿರೋಧಿಗಳ ಜತೆಯಲ್ಲಿ, ನ್ಯಾಯನಿಷ್ಟುರಿಗಳ ಜತೆಯಲ್ಲಿ (ಸಂದರ್ಶನ): ಹಿತ್ತಲಜಗತ್ತು (ಲಲಿತಪ್ರಬಂಧ): ಕುಲುಮೆ (ಆತ್ಮಕಥೆ): ಅಮೀರ್ಬಾಯಿ ಕರ್ನಾಟಕ (ಜೀವನಚರಿತ್ರೆ): ವಸಾಹತುಪ್ರಜ್ಞೆ ಮತ್ತು ವಿಮೋಚನೆ (ಗೂಗಿ ತಿಯಾಂಗೊ ಅವರ ‘ಡಿಕಲೊನೈಜಿಂಗ್ ದ ಮೈಂಡ್’ ಅನುವಾದ): ಪ್ರಶಸ್ತಿ- ಕರ್ನಾಟಕ ಸಾಹಿತ್ಯ ಆಕಾಡೆಮಿ ೧೯೯೩ ೧೯೯೪ ೨೦೦೦; ಕೇಂದ್ರ ಸಾಹಿತ್ಯ ಆಕಾಡೆಮಿ ೨೦೧೦; ಜಿಎಸ್ ಶಿವರುದ್ರಪ್ಪ, ಹಾಮಾ ನಾಯಕ, ಪಿ.ಲಂಕೇಶ್, ವಸುದೇವ ಭೂಪಾಳಂ, ಸುನೀತಿಶೆಟ್ಟಿ, ವೀಚಿಕ್ಕವೀರಯ್ಯ, ಎಸ್.ಜಿ.ಸಣ್ಣಗುಡ್ಡಯ್ಯ, ಕುಕ್ಕೆಸುಬ್ರಹ್ಮಣ್ಯಶಾಸ್ತ್ರಿ, ಪ್ರದೀಪ್, ಸಂದೇಶ, ಪಾಟೀಲಪುಟ್ಟಪ್ಪ, ಪ್ರೊ. ಕರೀಮುದ್ದೀನ್ ಸ್ಮಾರಕ ಪ್ರಶಸ್ತಿಗಳು: ಪ್ರವಾಸ- ಪ್ಯಾಲೆಸ್ಟೈನ್ ಟರ್ಕಿ ಜೋರ್ಡಾನ್ ಇಸ್ರೇಲ್ ಈಜಿಪ್ಟ್ ಜರ್ಮನಿ ಕ್ರೋತಿಯಾ ಸೊವೇನಿಯಾ ನೆದರ್ಲ್ಯಾಂಡ್ಸ್ ಇಟಲಿ ಭೂತಾನ ನೇಪಾಳ ಆಮೆರಿಕಾ ಇರಾಕ್ ಇರಾನ್ ಸೌರಿಕರೇಜಿಯಾ
Leave a comment