ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ದಿನವೂ ರಣ,ರಣ ಸುದ್ದಿ ಮಾಡುತ್ತಿದೆ. ಸಿದ್ದರಾಮಯ್ಯ ನಂತಹ ಮಾಸ್ ಲೀಡರ್ ಸಿಡಿ ಗುಂಡಿಗೆ ಬಿದ್ದು ಅಧಿಕಾರ ತ್ಯಾಗ ಮಾಡ ಬೇಕಾಯಿತು.
ಸಿದ್ದರಾಮಯ್ಯ ಈ ಬಗ್ಗೆ ಸ್ಟೇ ತೆಗೆದುಕೊಂಡು ಈ ವಿಷಯದ ಬಗ್ಗೆ ಮೌನವಾಗಿರುವುದು ನೋಡಿದರೆ ಡಿ.ಕೆ.ಸಿಡಿ ಮುಖ್ಯಮಂತ್ರಿ ಎನ್ನಲೇ ಬೇಕು.ಎಂಟು ವರ್ಷ ಸಿ,ಎಂ ಎಂದು ಅಬ್ಬರಿಸಿ,ಬೊಬ್ಬಿರಿದ ಸಿದ್ದರಾಮಯ್ಯ ಇದುವರೆವಿಗೂ ಯಾವುದಕ್ಕೂ ಅಂಜದೆ ಆಳಕದೆ ಎಲ್ಲವನ್ನೂ ಎದುರಿಸಿದ್ದವರು ಈಗ ” ಮೌನ” ವಹಿಸಿರುವುದು ನೋಡಿದರೆ ಸಿದ್ದರಾಮಯ್ಯ ಎಲ್ಲೋ ದಾರಿ ತಪ್ಪಿದ್ದಾರೆ ಎಂಬ ಚರ್ಚೆ ನಡೆಯುತ್ತಿವೆ.
ಜಾ,ದಳ ತೀವ್ರ. ಹೋರಾಟ, ಪತ್ರಿಕಾಗೋಷ್ಠಿ ನಡೆಸುತ್ತದೆ. ಅದರೆ ಬಿಜೆಪಿಯವರು ಕಾಟಚಾರದ ಹೇಳಿಕೆ ನೀಡುತ್ತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡಂತೆ ಡಿ.ಕೆ.ಬೆಂಬಲಿಗರು ಸಿದ್ದರಾಮಯ್ಯ ಪರ ಹೇಳಿಕೆ ನೀಡುತ್ತಿದ್ದಾರೆ.ಅದರೆ ಸಿದ್ದರಾಮಯ್ಯ ನವರ ಕಡೆಯವರ ಹೇಳಿಕೆ ಬೇಕಾಬಿಟ್ಟಿ ಆಗಿದೆ.
ಇದರ ಫಲಿತಾಂಶ ಕಾಂಗ್ರೆಸ್ ಮೇಲೆ ಆಗುತ್ತದೆ, ಆದರೆ ಅದಕ್ಕಿಂತ ಹೆಚ್ಚು ಡಿ.ಕೆ.ಮತ್ತು ಅವರ ಬೆಂಬಲಿಗರು ಅನುಭವಿ ಸಲೇ ಬೇಕು.ಅಹಿಂದದ ಹಿರಿಯಣ್ಣ ಕುರುಬ ಜನಾಂಗ ಕೊತ,ಕೊತ ಕುದಿಯುತ್ತಿದೆ.ಇದರ ಪರಿಣಾಮ ಕಾಂಗ್ರೆಸ್ ಮೇಲೆ ಆಗಲಿದೆ ಎಂಬ ಚರ್ಚೆಗಳುನಡೆಯುತ್ತಿವೆ.
ರಾಕೇಶ್ ಶೆಟ್ಟಿ ಸ್ಟಿಂಗ್ ಆಪರೇಷನ್ ಮಾಡಿದ್ದು ನಾನು ಎಂದು ಹೇಳಿದರು ದಳ,ಬಿಜೆಪಿ ಯವರು ಇರಲಿ ಅಡಳಿತರೂಢ ಕಾಂಗ್ರೆಸ್ ನವರು ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬ ವರ್ತನೆ ಕಳೆದ ನಲವತ್ತು ವರ್ಷಗಳ ಆಡಳಿತಕ್ಕೆ ಕಪ್ಪು ಚುಕ್ಕೆ.ಸಿಡಿಗೂ ಡಿ.ಕೆ.ಗೂ ಅವಿನಾಭಾವ ಸಂಬಂಧ ಎತ್ತ ಬೆಟ್ಟು ಮಾಡಿದರು
ಡಿ.ಕೆ.ಕಡೆ ಹೋಗುತ್ತದೆ. ಎಲ್ಲದಕ್ಕೂ ತೊಡೆ ತಟ್ಟುತ್ತಿದ್ದ ಸಿದ್ದರಾಮಯ್ಯ ಮುಖ ಇಳಿ ಬಿಟ್ಟಿದ್ದಾರೆ.ಅವರ ಹಿಂಬಾಲಕರು ನಾಪತ್ತೆಯಾಗಿದ್ದಾರೆ..ಈ ಪ್ರಕರಣ ಯಾವ ಕಡೆ ತಿರುಗುತ್ತದೆ ಎಂಬುದು ಮುಂದಿನ ದಿನಗಳು ತಿಳಿಯಲಿದೆ.
ಭೀಕರ ಬರ ಮತ್ತು ರಾಜ್ಯದ ದಿಕ್ಕೆಟ್ಟ ಆಡಳತ ರಾಜ್ಯದ ಹದಿನೈದು ತಾಲ್ಲೂಕು ಹೊರತು ಪಡಿಸಿದರೆ ಭೀಕರ ಬರಗಾಲದಿಂದ ರೈತರು ಮತ್ತು ಜನತೆ ತಲ್ಲಣಿಸಿ ಹೋಗಿದ್ದಾರೆ. ಅಕ್ಟೋಬರ್ ತಿಂಗಳು ಈಗಲೇ ಇಂತಹ ದುಸ್ಥಿತಿ ಉಂಟಾಗಿರುವುದು ನೋಡಿದರೆ ಮುಂದಿನ ದಿನಗಳಲ್ಲಿ ಗುಳೇ ಹೋಗುವುದು ಕಷ್ಟ. ಏಕೆಂದರೆ ಮಲೆನಾಡಿನಲ್ಲಿ ನೀರಿನ ಸಮಸ್ಯೆ ಇನ್ನೂ ದನ ಕರಗಳು ಮೇಯುವುದು ಹೇಗೆ? ಮತ್ತು ಜನರಿಗೆ ತಿನ್ನಲು ಆಹಾರದ ಕೊರತೆ.
ರಾಜ್ಯದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ರೈತರು ಮತ್ತು ಜನತೆ ಹಾಗೂ ಜಾನುವಾರಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ.ಬರ,ಕಾವೇರಿ. ಕಬ್ಬು ಬೆಳೆಗಾರರ ಹೋರಾಟ ಹಾಗೂ ಬಿಡದಿ ರೈತರ ಗಲಾಟೆ ಹೆಚ್ಚುತ್ತಿರುವಾಗ ಸ್ಟಿಂಗ್ ಆಪರೇಷನ್ ಬಗ್ಗೆ ರಾಜ್ಯದಲ್ಲಿ ಸದ್ದು ಹೆಚ್ಚಾಗುತ್ತಿದೆ. ಡಿ.ಕೆ.ಶಿವಕುಮಾರ್ ಡಿಕ್ಕಿ ಹೊಡೆದು ಕೊಂಡು ದರ್ಬಾರ್ ನಡೆಸುತ್ತಿದ್ದಾರೆ.
Public representatives forget the drought in the face of a sting operation
Leave a comment