ಕಡೂರು ಶಾಸಕ ಆನಂದ್ ತರೀಕೆರೆ ಶಾಸಕ ಶ್ರೀನಿವಾಸ್ ಕುಟುಂಬದ ಮೇಲೆ ತೀವ್ರ ಆಕ್ರೋಶಗೊಂಡು ವಸೂಲಿ ಬಗ್ಗೆ ಎಳೆ,ಎಳೆಯಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಇಲಿಗೆ ಪ್ರಾಣ ಸಂಕಟ ,ಬೆಕ್ಕಿಗೆ ಚಿನ್ನಾಟಾ ಏಕೆಂದರೆ ತರೀಕೆರೆ ಮತ್ತು ಕಡೂರಿನಲ್ಲಿ ತೀವ್ರ ಬರಗಾಲ,ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ ಇಂತಹ ಸಮಯದಲ್ಲಿ ನಾನು ಮೇಲೂ, ನಾನು ಮೇಲೂ ಎಂದು ಬೀದಿಗೆ ಇಳಿದಿರುವ ತರೀಕೆರೆ ಶಾಸಕ ಶ್ರೀನಿವಾಸ್ ಮತ್ತು ಕಡೂರು ಶಾಸಕ ಆನಂದ್ ಕಿತ್ತಾಡಿ ಕೊಳ್ಳುವ ಜೊತೆಗೆ ಶ್ರೀನಿವಾಸ್ ಅಳಿಯ ಚೇತನ್ ಮತ್ತು ಮಗಳ ವಸೂಲಿ ಬಾಜಿ ಮತ್ತು ಕಾನೂನು ಬಾಹಿರ ವ್ಯವಹಾರಗಳ ಬಗ್ಗೆ ಹೇಳಿದ್ದಾರೆ.
ಚೇತನ್ ಕಡೂರಿನಲ್ಲಿ ಜಾ,ದಳದ ಕ್ಷೇತ್ರ ಅಧ್ಯಕ್ಷ ಜೊತೆಗೆ ಎರಡು ಬಾರಿ ನಿಖಿಲ್ ಕುಮಾರಸ್ವಾಮಿಯನ್ನು ಕಡೂರಿಗೆ ಕರೆಯಿಸಿ ಆನಂದ್ ಬಗ್ಗೆ ಆರೋಪಗಳ ಸುರಿ ಮಳೆ ಸುರಿಸಿದ್ದಾರೆ.ಮುಂದಿನ ವಿಧಾನ ಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎನ್ನುವುದು ಆನಂದ್ ಸಹಿಸಲು ಸಾಧ್ಯವಾಗದೇ ತರೀಕೆರೆ ಯಲ್ಲಿ ಶ್ರೀನಿವಾಸ್ ವಿರುದ್ಧ ಗೋಪಿ ಕುಮಾರ್ ಎಂಬ ಅಭ್ಯರ್ಥಿಗೆ ನೀರುಎರೆಯುತ್ತಿದ್ದಾರೆ.
ಶ್ರೀನಿವಾಸ್ ಮತ್ತು ಮಗಳು ಹಾಗು ಅಳಿಯ ನ ಮೇಲೆ ತೀವ್ರ ಆಕ್ರೋಶಗೊಂಡು ಮಾತ ನಾಡಿದ್ದಾರೆ.ಕಡೂರಿನಲ್ಲಿ ಜಾ,ದಳ ತರೀಕೆರೆಯಲ್ಲಿ ಕಾಂಗ್ರೆಸ್ ಎನ್ನುವ ಅಳಿಯ ಡಬಲ್ ಗೇಮ್ ರಾಜಕಾರಣ ಎಷ್ಟರಮಟ್ಟಿಗೆ ಸರಿ. ಆಕ್ರಮ ಗಣಿಗಾರಿಕೆ ಮಗಳ ಹೆಸರಿನಲ್ಲಿ ನಡೆಸುತ್ತಿದ್ದಾರೆ ಜೊತೆಗೆ ಬ್ರಾಂಡಿ ವ್ಯಾಪಾರ ಮತ್ತು ಕ್ಲಬ್ ಕೂಡ ನಡೆಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದನ್ನು ಜಿಲ್ಲಾ ಆಡಳಿತ ಗಂಭೀರವಾಗಿ ತನಿಖೆ ನಡೆಸಬೇಕು ಕಾನೂನು ಎಂಬುದು ಜನಸಾಮಾನ್ಯರಿಗೆ ಒಂದು ಶಾಸಕರ ಕುಟುಂಬಕ್ಕೆ ಒಂದು ಕಾನೂನು ಇದೆಯೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆನಂದ್ ಪ್ರಶ್ನಿಸುತ್ತಿದ್ದಾರೆ.
ತರೀಕೆರೆ ಕ್ಷೇತ್ರದ ಇತಿಹಾಸದಲ್ಲಿ ಇಂತಹ ಕುಲಗೆಟ್ಟ ಮತ್ತು ಕುಟುಂಬ ರಾಜಕಾರಣ ನೋಡಿಲ್ಲ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.ನೊಂದಿದ್ದಾರೆ,ಆಕ್ರೋಶ ಗೊಂಡಿದ್ದಾರೆ.ಕಾಲಕ್ಕೆ ಕಾಯುತ್ತಿದ್ದಾರೆ.ಗೋಪಿ ಕೊಡುವ ಹೊಡೆತ ಮುಟ್ಟಿ ನೋಡಿಕೊಳ್ಳುವ ಸಮಯಕ್ಕಾಗಿ ಕಾಯುತ್ತಿದ್ದಾರೆ.ಒಳಗೊಳಗೇ ಕುದಿಯುತ್ತಿದ್ದ ರಾಜಕೀಯ ಬೆಂಕಿ ಯಾರನ್ನು ಸುಡುತ್ತದೆ ಎಂಬುದನ್ನು ಕಾದು ನೋಡಬೇಕು.
Tarikere MLA-Kadur MLA the collection fell on the street: Anand Akrosha.
Leave a comment