Home namma chikmagalur chikamagalur ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿ ಪ್ರತಿಭಟನಾ ಧರಣಿ
chikamagalurHomeLatest Newsnamma chikmagalur

ನಿವೇಶನಕ್ಕಾಗಿ ಗುಡಿಸಲು ನಿರ್ಮಿಸಿ ಪ್ರತಿಭಟನಾ ಧರಣಿ

Share
Share

ಮೂಡಿಗೆರೆ: ತಾಲೂಕಿನ ಗೋಣಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆನಂಬರ್ ೧೪೪ ರಲ್ಲಿ ವಸತಿಗಾಗಿ ಹೋರಾಟ ವೇದಿಕೆ ಮತ್ತು ಟಿಯುಸಿಐ ನೇತೃತ್ವದಲ್ಲಿ ನಿವೇಶನ ರಹಿತರು ನಿವೇಶನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಗುಡಿಸಲು ನಿರ್ಮಿಸಿ ಅಲ್ಲೇ ವಾಸ್ತವ್ಯ ಹೂಡಲು ನಿರ್ಧರಿಸಿ ಪ್ರತಿಭಟನಾಧರಣಿ ಆರಂಭಗೊಂಡಿದೆ.

ಕಳೆದ ಹತ್ತು ವರ್ಷದಿಂದ ನಿವೇಶನಕ್ಕೆ ಕಾಯ್ದಿರಿಸಿದ ಭೂಮಿಯನ್ನು ನಿವೇಶನ ಕಲ್ಪಿಸಲು ಒತ್ತಾಯಿಸಿ ಹೋರಾಟ ರೂಪಿಸಲಾಗಿತ್ತು ಆದರೆ ಪಂಚಾಯಿತಿ ಆಡಳಿತ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮವಹಿಸಿದೆ ಇರುವುದರಿಂದ ಇಂದು ನಿವೇಶನ ರಹಿತರು ಗುಡಿಸಲು ನಿರ್ಮಿಸಿಕೊಂಡು ವಾಸಿಸಲು ಮುಂದಾಗಿದ್ದಾರೆ.

ನಿವೇಶನಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ತಾಲೂಕು ಪಂಚಾಯಿತಿ ಎದುರು ಪ್ರತಿಪಟನಾಧರಣಿ ಮಾಡಿ ನಿವೇಶನಕ್ಕೆ ಕಾಯ್ದಿರಿಸುವ ಜಾಗದಲ್ಲಿ ಈಗಾಗಲೇ ಒಬ್ಬ ಪ್ರಭಾವಶಾಲಿಗಳು ಮನೆ ನಿರ್ಮಿಸಿದ್ದು ಇದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಗಿತ್ತು. ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಜರುಗಿಸಿರಲಿಲ್ಲ ಹೀಗಾಗಿ ಅನಿವಾರ್ಯ ಕಾರಣಗಳಿಂದ ಈಗಾಗಲೇ ಕೂಲಿ ಲೈನಿನಲ್ಲಿ ವಾಸಿಸುವ ಬಾಡಿಗೆಮನೆ ವಾಸಿಗಳಿಗೆ ನಿವೇಶನ ಕಲ್ಪಿಸುವಂತೆ ದಾಖಲಾತಿಗಳೊಂದಿಗೆ ಗೋಣಿಬೀಡು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿತ್ತು.

ಆದರೆ ಗ್ರಾಮ ಪಂಚಾಯಿತಿ ಆಡಳಿತ ಪ್ರಭಾವಿಗಳ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಜರುಗಿಸಿಲ್ಲ ಹೀಗಾಗಿ ನಿವೇಶನ ರಹಿತರೆಲ್ಲ ಒಂದಾಗಿ ಗುಡಿಸಲು ನಿರ್ಮಿಸಿ ಹೋರಾಟ ರೂಪಿಸಿದ್ದಾರೆ ಈ ಹೋರಾಟಕ್ಕೆ ಸಿಪಿಐಎಂಎಲ್ ತಾಲೂಕು ಮತ್ತು ಜಿಲ್ಲಾ ಸಮಿತಿ ಸಂಗಾತಿಗಳು ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಕೂಡ ಹೋರಾಟಕ್ಕೆ ಬೆಂಬಲಿಸಿ, ಧರಣಿಯಲ್ಲಿ ಮತ್ತು ಗುಡಿಸಲು ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೆ ಗುಡಿಸಲಿನಲ್ಲಿ ವಾಸ ಮಾಡಲು ನಿರ್ಧರಿಸಲಾಗಿದೆ.

ಮೂಡಿಗೆರೆ ತಾಲೂಕಿನಲ್ಲಿ ಕಂದಾಯ ಭೂಮಿ ಗೋಮಾಳ, ಗೈರಾಣಿ, ಗೋಮಾಳ, ಕೆರೆಯಂಗ, ಹುಲ್ಲು ಬನ, ಊರು ಉಡುಬಿ ಸೇರಿದಂತೆ ಎಲ್ಲ ಭೂಮಿಗಳು ಉಳ್ಳವರ ಪಾಲಾಗಿದ್ದು ನಿವೇಶನಕ್ಕೆ ಜಾಗ ಇಲ್ಲದಂತಾಗಿದೆ ರಾಜಕಾರಣಿಗಳು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಸುಳ್ಳುಗಳನ್ನೇ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಹೀಗಾಗಿ ಜನರು ಅನಿವಾರ್ಯ ಕಾರಣಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸಿಸಲು ಕಾರಣವಾಗಿದೆ.

ಸಿಪಿಐ(ಎಂ.ಎಲ್) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ತಾಲೂಕಿನ ಗೋಣಿಬಿಡು ಗ್ರಾ.ಪಂ. ವ್ಯಾಪ್ತಿಯ ಮಣ್ಣಿಕೆರೆ ಗ್ರಾಮದ ಸರ್ವೇ ನಂಬರ್ ೧೪೪ ರಲ್ಲಿ ೩.೨೦ ಎಕರೆ ಸರ್ಕಾರಿ ಭೂಮಿಯನ್ನು ಕಳೆದ ಹತ್ತು ವರ್ಷದ ಹಿಂದೆ ನಿವೇಶನಕ್ಕೆ ಕಾಯ್ದಿರಿಸಲಾಗಿತ್ತು. ನಿವೇಶನ ಹಂಚಿಕೆ ಮಾಡುವಂತೆ ಅನೇಕ ವರ್ಷ ದಿಂದ ಪ್ರತಿಭಟನೆ ನಡೆಸಲಾಗಿದೆ. ಆದರೆ ತಾಲೂಕು ಆಡಳಿತ ಯಾವುದೇ ಕ್ರಮವಹಿಲ್ಲ. ಹಾಗಾಗಿ ಇಲ್ಲಿಯೇ ಗುಡಿಸಲು ನಿರ್ಮಿಸಿ ವಾಸ್ತವ್ಯ ಹೂಡಲು ನಿರ್ಧರಿಸಲಾಗಿದೆ ಎಂದರು.

ಅಲ್ಲದೇ ಈ ಜಾಗದಲ್ಲಿ ಈಗಾಗಲೇ ಒರ್ವ ವ್ಯಕ್ತಿ ಪ್ರಭಾವ ಬಳಿಸಿ ಮನೆ ನಿರ್ಮಿಸಿದ್ದು, ಇದನ್ನು ಕೂಡ ತೆರವುಗೊಳಿಸಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಜನಪ್ರತಿನಿಧಿಗಳು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದರಿಂದ ತಾಲೂಕಿನಲ್ಲಿ ಕಂದಾಯ ಭೂಮಿ, ಗೋಮಾಳ, ಗೈರಾಣಿ ಗೋಮಾಳ, ಕೆರೆಯಂಗಳ, ಹುಲ್ಲುಬನ, ಸೇರಿದಂತೆ ಎಲ್ಲಾ ಭೂಮಿ ಉಳ್ಳವರ ಪಾಲಾಗಿದ್ದು, ನಿವೇಶನಕ್ಕೆ ಜಾಗಸಿಗದಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಿವೇಶನ ರಹಿತರ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಸಂದೀಪ್, ಗೋಣಿಬೀಡು ಹೋಬಳಿ ವಸತಿಗಾಗಿ ಹೋರಾಟ ವೇದಿಕೆ ಕಾರ್ಯದರ್ಶಿ ರಾಜೇಶ್, ಉಮೇಶ್, ಸುರೇಶ್, ಗೋಪಾಲ್, ಕೃಷ್ಣ, ಜಾನಕಿ, ಯಶೋಧ ಮತ್ತಿತರರಿದ್ದರು.

Protest sit-in by building a hut for the site

Share

Leave a comment

Leave a Reply

Your email address will not be published. Required fields are marked *

Don't Miss

ಬಿಡದಿ ರೈತರ ಹೋರಾಟ ಬೆಂಬಲಿಸಿ ಆ.25ರಂದು ವಿಧಾನಸೌಧ ಚಲೋ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ರೈತರ ಭೂಮಿ ರಕ್ಷಣೆಗೆ ಆಗ್ರಹಿಸಿ ಆ.25ರಂದು ಬೆಂಗಳೂರಿನಲ್ಲಿ ಬೃಹತ್ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು...

ಮುಂಗಾರು ಋತುವಿನಲ್ಲಿ ಜಿಲ್ಲೆಯಲ್ಲಿ ಶೇ.35 ಮಳೆ ಕೊರತೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಋತುವಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಶೇ.೩೫ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ...

Related Articles

ಕುದುರೆಮುಖ ಭಾಗದಲ್ಲಿ ವಾಸಿಗರ ವಿಶೇಷ ಗಮನ ಸೆಳೆದ ನೀಲಕುರಿಂಜಿ

ಚಿಕ್ಕಮಗಳೂರು:  ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯಕ್ಕೆ ಮತ್ತೊಂದು ವಿಶೇಷ ಮೆರುಗು ನೀಡುವಂತೆ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ...

‘ರಾಷ್ಟ್ರದ ಸುರಕ್ಷತೆಗಾಗಿ ಎಲ್ಲರೂ ಒಂದಾಗಬೇಕು’

ಚಿಕ್ಕಮಗಳೂರು: ರಾಷ್ಟ್ರದ ಸುರಕ್ಷತೆ ಹಾಗೂ ದೇಶದ ಹಿತಾಸಕ್ತಿಗಾಗಿ ವೈಯಕ್ತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ...

ಆರೋಪಿಯಿಂದ ₹11.30 ಲಕ್ಷ ಮೌಲ್ಯದ 71 ಗ್ರಾಂ ಚಿನ್ನಾಭರಣ ವಶ

ಎನ್.ಆ‌ರ್. ಪುರ: ಮನೆಯ ಹಂಚು ತೆಗೆದು ಒಳನುಗ್ಗಿ, ಮಲಗಿದ್ದ ಮಹಿಳೆಯ ಕೊರಳಿನಿಂದ ಮಾಂಗಲ್ಯ ಸರ ಎಗರಿಸಿದ್ದ...

ಅಜ್ಜಂಪುರ ಸುತ್ತಮುತ್ತ ಕರಡಿ ಹಾವಳಿ

ಅಜ್ಜಂಪುರ: ಅಜ್ಜಂಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಹಗಲು-ರಾತ್ರಿ...