ಚಿಕ್ಕಮಗಳೂರು : ಅಧಿಕಾರ ವಿಕೇಂದ್ರೀಕರಣ ಎಂದು ಬೊಗಳೆ ಬಿಡುವ ಜನಪ್ರತಿನಿಧಿಗಳು ಎಲ್ಲಾ ಅಧಿಕಾರಕ್ಕೆ ಕೊಡಲಿ ಏಟು ಹಾಕುವುದರಲ್ಲಿ ಎಕ್ಸ್ ಫರ್ಟ್ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿಕೇಂದ್ರೀಕರಣಕ್ಕೆ ಒತ್ತು ಕೊಟ್ಟು ಸ್ಥಳೀಯ ಆಡಳಿತ ಅಂದರೆ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಆಡಳಿತ ಮಂಡಳಿ ರಚನೆ ಮಾಡಿಲಾಗಿದೆ. ಆದರೆ ಐದಾರು ವರ್ಷಗಳ ಕಾಲ ಮಾತ್ರ ಯಶಸ್ವಿ ಆಡಳಿತ ನಡೆದಿದ್ದು ಬಿಟ್ಟರೆ ಸ್ಥಳೀಯ ಆಡಳಿತಕ್ಕೆ ಕತ್ತರಿ ಜೊತೆಗೆ ಕೊಡಲಿ ಪೆಟ್ಟು ಕೊಡುತ್ತಾ ಬಂದವರು ಮುಖ್ಯವಾಗಿ ಶಾಸಕರುಗಳು.
ಸ್ಥಳೀಯ ಆಡಳಿತದ ಒಂದೊಂದು ಇಲಾಖೆಯನ್ನು ತಮ್ಮ ಕೈಗೆ ಪಡೆಯುತ್ತಾ ಬಂದಿದ್ದು ಶಾಸಕರುಗಳನ್ನು ಮೆಚ್ಚಿಸಲು ಅಧಿಕಾರಿಗಳು ಸಹಕರಿಸುತ್ತಾ ಬಂದಿರುವ ಫಲವೇ ಸ್ಥಳೀಯ ಆಡಳಿತ ಕೊನೆಗಾಣಿಸುವ ಕೋಮಾ ವ್ಯವಸ್ಥೆಗೆ ಬಂದು ನಿಂತಿದೆ. ಕಳೆದ ನಾಲ್ಕು ವರ್ಷಗಳಿಂದ ಜಿ,ಪಂ. ತಾ,ಪಂ ಚುನಾವಣೆ ನಡೆಸದೆ ಕಾಲ ಮುಂದೂಡತ್ತಾ ಬಂದಿದ್ದಾರೆ.
ಚಿಕ್ಕಮಗಳೂರು ಸರ್ಕಾರಿ ಜೂನಿಯರ್ ಕಾಲೇಜ್ ನಲ್ಲಿ ಮೊನ್ನೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಬೇಕಾದ್ದು ಎಸ್.ಡಿ.ಎಂ.ಸಿ ಅಧ್ಯಕ್ಷರು ಆದರೆ ಶಾಸಕರನ್ನು ಮೆಚ್ಚಿಸಲು ಕಾಲೇಜು ಸಿಬ್ಬಂದಿ ವರ್ಗ ಶಾಸಕರಾದ ತಮ್ಮಯ್ಯ ರವರಿಂದ ಧ್ವಜಾರೋಹಣ ಮಾಡಿಸಿ ಅಧ್ಯಕ್ಷರನ್ನು ಕಡೆಗಾಣಿಸಿದ್ದು ಅಧಿಕಾರದ ಹಪಹಪಿ ಎಷ್ಟು ಎನ್ನುವುದಕ್ಕಿಂತ ಸ್ಥಳೀಯ ಆಡಳಿತಕ್ಕೆ ಕೊನೆಗಾಣಿಸುತ್ತಿದ್ದಾರೆ. ಆದರೆ ಕಾನೂನು ಬೇರೆ ಹೇಳುವುದೇನೆಂದರೆ ಶಿಕ್ಷಣ ಹಕ್ಕು ಕಾಯ್ದೆ 2009 ರ ಪ್ರತಿಯೊಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವುದು ಹಾಗೂ ಧ್ವಜಾರೋಹಣವನ್ನು ನೆರವೇರಿಸಬೇಕು, ಯಾವುದೇ ಶಾಲೆಗಳಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಿಗೆ ಧ್ವಜಾರೋಹಣ ಮಾಡಲು ಅವಕಾಶ ನೀಡದೆ ಇದ್ದಲ್ಲಿ ಪ್ರತಿಯೊಬ್ಬರು ಸಮನ್ವಯ ಕೇಂದ್ರ ವೇದಿಕೆಗೆ ಮಾಹಿತಿ ನೀಡಿ,
ಅವಕಾಶ ನೀಡದ ಮುಖ್ಯ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ ದವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ದೂರನ್ನು ನೀಡಿ ಕಾನೂನು ಕ್ರಮಕ್ಕೆ ವೇದಿಕೆ ಕ್ರಮ ಕೈಗೊಳ್ಳಲಿದೆ.
Leave a comment