ಚಿಕ್ಕಮಗಳೂರು : ಇಂದು ನಕ್ಸಲ್ ನಾಯಕ ವಿಕ್ರಂಗೌಡ ಅಂತ್ಯಕ್ರಿಯೆ ನಡೆಯಲಿದೆ. ಮರಣೋತ್ತರ ಪರೀಕ್ಷೆ ಮುಗಿದಿದ್ದು ಕುಟುಂಬಕ್ಕೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕಾರ್ಕಳ ನ್ಯಾಯಾಧೀಶರ ಸಮ್ಮುಖದಲ್ಲಿ ಪೋಸ್ಟ್ಮಾರ್ಟಂ ನಡೆದಿದ್ದು ನಿನ್ನೆಯೇ ಕಳಿಸಲಾಗಿತ್ತು. ಇಂದು ಉಡುಪಿ ಅಥವಾ ಹೆಬ್ರಿಯಲ್ಲಿ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ಹುಟ್ಟೂರು ನಾಲ್ಪಾಡು ಗ್ರಾಮದಲ್ಲಿ ವಿಕ್ರಂಗೌಡ ಅಂತ್ಯಕ್ರಿಯೆ ಸಾಧ್ಯತೆ ಇದ್ದು ಬಿಗಿ ಭದ್ರತೆಯನ್ನು ಪೊಲೀಸರು ಕಲ್ಪಿಸಿದ್ದಾರೆ.
ವಿಕ್ರಂಗೌಡ ಕುಟುಂಬ ವರ್ಗ, ಸಂಬಂಧಿಕರು ಆಪ್ತ ವಲಯದವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗ್ತಾರೆ-
ವಿಕ್ರಮ್ ಗೌಡ ಹಿನ್ನೆಲೆ ಏನು
4ನೇ ಕ್ಲಾಸ್ ಓದಿದ್ದ ವಿಕ್ರಂ ನಕ್ಸಲ್ ನಾಯಕನಾಗಿದ್ದೇಗೆ ಎಂಬುದೇ ರೋಚಕ ಆರಂಭದಲ್ಲಿ ಮುಂಬೈನ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದ ವಿಕ್ರಂ ಕೆಂಪುಸೇನೆ ಅಧಿನಾಯಕ ಆಗಿದ್ದನು. 20ನೇ ವಯಸ್ಸಿನಲ್ಲಿ ಹೋಟೆಲ್ ಬಿಟ್ಟು ಹೋರಾಟಕ್ಕೆ ಎಂಟ್ರಿ ಕೊಟ್ಟು ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ವಿರೋಧಿ ಹೋರಾಟ ಸೇರಿದ್ದ ನಂತರ 2002-03 ರಲ್ಲಿ ನಕ್ಸಲ್ ಸಂಘಟನೆಯನ್ನು ಸೇರಿಕೊಂಡಿದ್ದ
ಹೆಬ್ರಿಯ ಪೀತಾಬೈಲು ನಾಡ್ಪಾಲು ಗ್ರಾಮದ ವಿಕ್ರಂಗೌಡ ಅಂದಿನ ನಕ್ಸಲ್ ನಾಯಕ ಸಾಕೇತ್ ರಾಜನ್ ಭೇಟಿಯಾಗಿ ಸಂಘಟನೆ ಸೇರಿದ್ದ ಇದೀಗ ರಾಜ್ಯದಲ್ಲಿ ಬಲಿಯಾದ 15ನೇ ನಕ್ಸಲ್ ನಾಯಕ ವಿಕ್ರಂಗೌಡ ಆಗಿದ್ದಾನೆ. 12 ವರ್ಷಗಳ ನಂತರ ಕರ್ನಾಟಕದಲ್ಲಿ ಮತ್ತೆ ನಕ್ಸಲ್ ಬಲಿಯಾದಂತಾಗಿದೆ. ಮೋಸ್ಟ್ ವಾಂಟೆಡ್ ಮಾವೋವಾದಿ ವಿಕ್ರಂಗೌಡ ಕೇವಲ 46 ವರ್ಷದವನಾಗಿದ್ದ
ಕರ್ನಾಟಕ ಸೇಫ್ ಅಲ್ಲ ಎಂದು ಕೇರಳದ ಅರಣ್ಯಕ್ಕೆ ತೆರಳಿದ್ದ ವಿಕ್ರಮ್ ಗೌಡ ನಕ್ಸಲ್ ಹೋರಾಟ ಪುನರ್ ಸಂಘಟಿಸಲು ಹೊರಟಿದ್ದ ಎನ್ನಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಶುರು ಮಾಡಿದ್ದ ವಿಕ್ರಂ-ಅರಣ್ಯ ಒತ್ತುವರಿ ವಿಚಾರವಾಗಿ ರಹಸ್ಯ ಸಭೆ ನಡೆಸುತ್ತಿದ್ದ ವಿಕ್ರಂ ಅಲ್ಲದೇ ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ- ಸುಂದರಿ ಪತ್ತೆಗೆ ಸರ್ಕಾರ 5 ಲಕ್ಷ ಬಹುಮಾನ ಘೋಷಣೆ ಮಾಡಿತ್ತು-ಉಡುಪಿಯ ಹೆಬ್ರಿ ಬಳಿ ಸೋಮವಾರ ರಾತ್ರಿ ಎನ್ಕೌಂಟರ್-ಕಾಡಂಚಿನ ಮಲೆಕುಡಿ ಮನೆಯಿಂದ ರೇಷನ್ ಒಯ್ಯಲು ಬಂದಿದ್ದು ಪೊಲೀಸರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಸಾವು ಕಂಡಿದ್ದಾನೆ. ಮತ್ತಿಬ್ಬರಿಗೆ ಗಾಯ ಆಗಿದ್ದು ಎಸ್ಕೇಪ್ ಆಗಿರುವ ನಕ್ಸಲರಿಗಾಗಿ ಕೂಂಬಿಂಗ್ ಮುಂದುವರೆದಿದೆ.
Leave a comment