Home Latest News ರಾಜಕೀಯ ಚುನಾವಣೆಗಿಂತ ಜಿದ್ದಾಜಿದ್ದಿನ ಪೈಪೋಟಿ ಪಡೆದ ಸರ್ಕಾರಿ ನೌಕರರ ಸಂಘದ ಚುನಾವಣೆ
Latest News

ರಾಜಕೀಯ ಚುನಾವಣೆಗಿಂತ ಜಿದ್ದಾಜಿದ್ದಿನ ಪೈಪೋಟಿ ಪಡೆದ ಸರ್ಕಾರಿ ನೌಕರರ ಸಂಘದ ಚುನಾವಣೆ

Share
Share

ಚಿಕ್ಕಮಗಳೂರು :  ರಾಜ್ಯ ಸರ್ಕಾರಿ ನೌಕರರ ಸಂಘ ಗಳಿಗೆ ತಾಲ್ಲೂಕು ಮಟ್ಟದ ನಿರ್ದೇಶಕರ ಅಯ್ಕೆ ನಡೆದಿದ್ದು ಪದಾಧಿಕಾರಿಗಳ ಅಯ್ಕೆ ನಡೆಯಬೇಕಾಗಿದೆ. ಪ್ರಸ್ತುತ ಜಿಲ್ಲಾ ಮಟ್ಟದ ನಿರ್ದೇಶಕರ ಅಯ್ಕೆಗೆ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಜಿದ್ದಾಜಿದ್ದಿ ಹಣಾಹಣಿ ನಡೆದಿದೆ.

ನೌಕರರ ತಾಲ್ಲೂಕು ಮಟ್ಟದ ಚುನಾವಣೆಯಲ್ಲಿ ಸ್ಥಳೀಯ ಶಾಸಕರುಗಳು ಪ್ರಭಾವ ಬೀರಿ ಅಯ್ಕೆ ಮಾಡಿದ್ದಾರೆ. ತರೀಕೆರೆ, ಕಡೂರು, ಅಜ್ಜಂಪುರ, ಶೃಂಗೇರಿ, ಕೊಪ್ಪ, ಎನ್.ಅರ್.ಪುರದಲ್ಲಿ ಶೇಕಡ ಎಪ್ಪತ್ತರಷ್ಟು ಅವಿರೋಧವಾಗಿ ಅಯ್ಕೆಯಾಗಿರುವುದು ನೋಡಿದರೆ ರಾಜಕೀಯ ಪ್ರವೇಶ ಅಗಿದೆ.ಶೃಂಗೇರಿ ಕ್ಷೇತ್ರದಲ್ಲಿ ಶಾಸಕರ ಆಪ್ತ ಸಹಾಯಕ ಒತ್ತಡ ತಂದರು ಎಂದು ಪೊಲೀಸ್ ಠಾಣೆ ತನಕ ಹೋಗಿದ್ದೆ ಸಾಕ್ಷಿ.
ಜಿಲ್ಲಾ ಮಟ್ಟದ ಚುನಾವಣೆ ಪ್ರಾರಂಭವಾಗಿದ್ದು ಹಾಲಿ ಅಧ್ಯಕ್ಷ ದೇವೇಂದ್ರರ ಅಣಿಯಲು ರಣ ವ್ಯೂಹ ರಚನೆಯಾಗಿದ್ದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಜಿಲ್ಲಾ ಮಟ್ಟದಲ್ಲಿ 66 ನಿರ್ದೇಶಕರ ಅಯ್ಕೆ ಆಗಬೇಕಾಗಿದ್ದು ಎಂಟು ತಾಲ್ಲೂಕಿನ ಅಧ್ಯಕ್ಷರ ಅಯ್ಕೆ ನಡದರೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಅಯ್ಕೆಗೆ ಪ್ರಕ್ರಿಯೆ ಆರಂಭವಾಗಲಿದೆ.
ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗ ವಾಗಿ ಸೂಚನೆ ನೀಡಿರುವುದು ಗುಟ್ಟಾಗಿ ಉಳಿದಿಲ್ಲ. ಹಾಲಿ ಅಧ್ಯಕ್ಷ ಷಡಕ್ಷರಿ ಬಿಜೆಪಿ ಬೆಂಬಲಿಗ ಎಂಬ ಹಿನ್ನೆಲೆಯಲ್ಲಿ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನವರು ನೌಕರರ ಚುನಾವಣೆಗೆ ಎಂಟ್ರಿ ಕೊಟ್ಟಿದೆ.ಇದು ಹೊಸದೇನಲ್ಲ.ಕದ್ದು ಮುಚ್ಚಿ ರಾಜಕಾರಣಿಗಳು ನಡೆಸುತ್ತಿದ್ದ ಚಟುವಟಿಕೆಗಳನ್ನು ಕಾಂಗ್ರೆಸ್ ಬಹಿರಂಗವಾಗಿ ನಡೆಸುತ್ತಿದೆ.ಕೆಲ ಜೈ ಹೂಜೂರ್ ನೌಕರರು ಶಾಸಕರ ಹಿಂದೆ ಮುಂದೆ ತಿರುಗುವುದು ಗುಟ್ಟೇನಲ್ಲಾ ಒಟ್ಟಾರೆ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ನೌಕರರ ಸಂಘ ದ ಚುನಾವಣೆಗೆ ರಾಜಕೀಯ ರಂಗೇರಿರುವುದು ಮಾತ್ರ ಸತ್ಯ.

Share

Leave a comment

Leave a Reply

Your email address will not be published. Required fields are marked *

Don't Miss

ದಬ್ಬಾಳಿಕೆಯಿಂದ ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಯತ್ನ

ಚಿಕ್ಕಮಗಳೂರು: ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಬ್ಬಾಳಿಕೆಯ ಮೂಲಕ ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿ

ಚಿಕ್ಕಮಗಳೂರು:  ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಿರುವ ಮೂಲ ಉದ್ದೇಶ ಇನ್ನೂ ಸಂಪೂರ್ಣವಾಗಿ ಈಡೇರಿಲ್ಲ. ಬಡ ರೋಗಿಗಳಿಗೆ ಜಿಲ್ಲೆಯಲ್ಲೇ ಉತ್ತಮ ಚಿಕಿತ್ಸೆ ದೊರೆಯುವಂತೆ, ಆಸ್ಪತ್ರೆಯನ್ನು ತಕ್ಷಣ ಪೂರ್ಣ ಪ್ರಮಾಣದಲ್ಲಿ...

Related Articles

ಬಯಲ ಬಂಗಾರದ”ಈರುಳ್ಳಿ” ಬಲು ದೂರ,ದೂರ

ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲೆಯಲ್ಲಿ “ಬಯಲ ಬಂಗಾರದ ಬೆಳೆ ಬೆಳೆಯುವ ಕಪ್ಪು ಮಣ್ಣು ಅಜ್ಜಂಪುರ ಮತ್ತು ಕಡೂರು...

ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂ

ಚಿಕ್ಕಮಗಳೂರು:  ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು...

ಆಸ್ತಿ- ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂಪತ್ತು

ಚಿಕ್ಕಮಗಳೂರು:  ಆಸ್ತಿ ಮತ್ತು ಅಂತಸ್ತಿಗಿಂತ ಆರೋಗ್ಯವು ಮನುಷ್ಯನ ಅತಿದೊಡ್ಡ ಸಂ ಪತ್ತು. ಈ ಆರೋಗ್ಯಯುತ ಬದುಕು...

ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದಿಂದಲೇ 12 ಸಾವಿರ ಕೋಟಿ ರೂ. ವೆಚ್ಚ

ಚಿಕ್ಕಮಗಳೂರು:  ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ೫,೩೦೦ ಕೋಟಿ ರೂ. ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೆ...