Home namma chikmagalur chikamagalur ಜಿಪಂ, ತಾಪಂ ಮೀಸಲಾತಿ ಬದಲಾವಣೆಗೆ ಶಾಸಕರ ಕಸರತ್ತು
chikamagalurHomeLatest Newsnamma chikmagalurPolitical News

ಜಿಪಂ, ತಾಪಂ ಮೀಸಲಾತಿ ಬದಲಾವಣೆಗೆ ಶಾಸಕರ ಕಸರತ್ತು

Share
Share

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿ ಹದಿನೈದು ದಿನಗಳು ಕಳೆದಿದ್ದು, ಇದೀಗ ಮೀಸಲಾತಿ ಬದಲಾವಣೆಗೆ ಜಿಲ್ಲೆಯ ಇಬ್ಬರು ಶಾಸಕರು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ತರೀಕೆರೆ ಶಾಸಕ ಶ್ರೀನಿವಾಸ್ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರು ಜಂಟಿಯಾಗಿ ಸಂಬಂಧಪಟ್ಟವರಿಗೆ ಪತ್ರ ಸಲ್ಲಿಸಿ, ತರೀಕೆರೆ ತಾಲ್ಲೂಕಿನ ಶಿವನಿ ಕ್ಷೇತ್ರ ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಕ್ಷೇತ್ರಗಳ ಮೀಸಲಾತಿ ಬದಲಾವಣೆಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಪ್ರಕಟಿಸಿರುವ ಮೀಸಲಾತಿ ಪಟ್ಟಿಯಲ್ಲಿ ಶಿವನಿ ಕ್ಷೇತ್ರ, ಕುರವಂಗಿ, ಕಸಬಾ ಹಾಗೂ ತಿರುಕಣೂರು ಸೇರಿದಂತೆ ಕೆಲವು ಕ್ಷೇತ್ರಗಳ ಮೀಸಲಾತಿಯಲ್ಲಿಯೂ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎನ್ನಲಾಗಿದೆ. ಶಿವನಿ ಕ್ಷೇತ್ರವನ್ನು ಸಾಮಾನ್ಯ ಅಥವಾ ಹಿಂದುಳಿದ ವರ್ಗ (ಬಿಸಿಎಂ-ಬಿ) ಪ್ರವರ್ಗಕ್ಕೆ ಬದಲಾಯಿಸುವಂತೆ ಬೇಡಿಕೆ ಮುಂದಿಟ್ಟಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಮೀಸಲಾತಿ ಪ್ರಕಟವಾದ ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬದಲಾವಣೆಗಳಾದ ಉದಾಹರಣೆಗಳಿವೆ. ಆದರೆ, ಈವರೆಗೆ ಕೇವಲ ಶಾಸಕರ ಪತ್ರ ಅಥವಾ ಶಿಫಾರಸಿನ ಆಧಾರದ ಮೇಲೆ ಮೀಸಲಾತಿ ಬದಲಾವಣೆಯಾದ ನಿದರ್ಶನಗಳು ವಿರಳ ಎಂದು ಹೇಳಲಾಗುತ್ತಿದೆ.

ತರೀಕೆರೆ ಶಾಸಕ ಶ್ರೀನಿವಾಸ್ ಅವರಿಗೆ ಶಿವನಿ ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಬೇಕೆಂಬ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಪತ್ರ ಸಲ್ಲಿಕೆಯಾಗಿದೆಯೇ ಅಥವಾ ನಿಜವಾಗಿಯೂ ಮೀಸಲಾತಿ ಬದಲಾವಣೆಗೆ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಶಾಸಕರ ಈ ಪ್ರಯತ್ನ ಆಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದರೆ, ಈಗಾಗಲೇ ಪ್ರಕಟವಾಗಿರುವ ಮೀಸಲಾತಿಯನ್ನೇ ನಂಬಿಕೊಂಡಿದ್ದ ಬಿಸಿಎಂ ವರ್ಗದ ಅಭ್ಯರ್ಥಿಗಳಲ್ಲಿ ಗೊಂದಲ ಹಾಗೂ ನಿರಾಸೆ ಮೂಡಿಸಿದೆ.

ಶಿವನಿ ಕ್ಷೇತ್ರದ ಮೀಸಲಾತಿ ಬದಲಾವಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಮನವಿ ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಸದ್ಯದ ಕುತೂಹಲ. ರಾಜ್ಯಾದ್ಯಂತ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆಗಳಾದರೆ ಮಾತ್ರ ಇಲ್ಲಿನ ಕ್ಷೇತ್ರಗಳಲ್ಲಿಯೂ ಬದಲಾವಣೆಗೆ ಅವಕಾಶ ಸಿಗಬಹುದು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಒಟ್ಟಾರೆ, ಮೀಸಲಾತಿ ಬದಲಾವಣೆಗೆ ಶಾಸಕರು ನಡೆಸುತ್ತಿರುವ ಪ್ರಯತ್ನ ಯಶಸ್ವಿಯಾಗುವುದೇ ಅಥವಾ ಪ್ರಕಟಿತ ಮೀಸಲಾತಿಯೇ ಅಂತಿಮವಾಗಲಿದೆಯೇ ಎಂಬುದಕ್ಕೆ ನವೆಂಬರ್ 5ರೊಳಗೆ ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ.

MLAs’ efforts to change ZP and TP reservations

Share

Leave a comment

Leave a Reply

Your email address will not be published. Required fields are marked *

Don't Miss

ಮಕ್ಕಳ ಲೈಂಗಿಕ ಶೋಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ – ಪ್ರಕರಣ ದಾಖಲು

ಚಿಕ್ಕಮಗಳೂರು: ಅಪ್ರಾಪ್ತ ವಯಸ್ಸಿನ ಮಗು ಮತ್ತು ವಯಸ್ಕರು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿ, ವೀಕ್ಷಿಸಿ ಹಾಗೂ ಹಂಚಿಕೊಂಡ ಆರೋಪದ ಮೇರೆಗೆ ಚಿಕ್ಕಮಗಳೂರು ಸೈಬರ್ ಕ್ರೈಂ...

ಹಿಟ್‌ ಆ್ಯಂಡ್‌ ರನ್‌-ಸವಾರ ಸಾವು

ಕಡೂರು: ಹಿಂಬದಿಯಿಂದ ಬಂದ ಅಪರಿಚಿತ ಗೂಡ್ಸ್ ವಾಹನದ ಚಾಲಕನೊಬ್ಬ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ, ಬೈಕ್ ಸವಾರ ಮೃತಪಟ್ಟಿರುವ ಘಟನೆ ಕಡೂರು ತಾಲ್ಲೂಕಿನ...

Related Articles

ದೇವಿರಮ್ಮನವರ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಚಿಕ್ಕಮಗಳೂರು: ಪ್ರಸಿದ್ಧ ದೇವಿರಮ್ಮನವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತಾದಿಗಳ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕೆ ಜಿಲ್ಲಾಡಳಿತದಿಂದ...

ಬಿಳೇಕಲ್ಲು ಅಪಘಾತ ಪ್ರಕರಣದಲ್ಲಿ 25 ಲಕ್ಷ ಪರಿಹಾರ

ಚಿಕ್ಕಮಗಳೂರು: ಕಳೆದ ಏಪ್ರಿಲ್ ೧೪ ರಂದು ಇಲ್ಲಿಗೆ ಸಮೀಪದ ಬಿಳೇಕಲ್ಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್...

ರಾಕೇಶ್‌ಶೆಟ್ಟಿ ವಿರುದ್ಧ ಜಿಲ್ಲಾ ಯುವ ಒಕ್ಕಲಿಗರ ಸಂಘ ಪ್ರತಿಭಟನೆ

ಚಿಕ್ಕಮಗಳೂರು: ನಾಡಿನ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬಸ್ಥರ ಬಗ್ಗೆ ಖಾ ಸಗೀ ವಾಹಿನಿಯ ಸಂಪಾದಕ ರಾಕೇಶ್‌ಶೆಟ್ಟಿ...

ಮೊಬೈಲ್‌ಗೆ 300 ಸಂದೇಶ-ಖಾತೆಯಿಂದ ₹1.49 ಲಕ್ಷ ವಂಚನೆ

ಚಿಕ್ಕಮಗಳೂರು: ಮೊಬೈಲ್‌ಗೆ ಏಕಾಏಕಿ 300 ಸಂದೇಶಗಳು ಬಂದ ಬೆನ್ನಲ್ಲೇ ವ್ಯಕ್ತಿಯೊಬ್ಬರ ಕೆನರಾ ಬ್ಯಾಂಕ್ ಖಾತೆಯಿಂದ ₹1.49...