Home Political News ಶಾಸಕ ತಮ್ಮಯ್ಯ ಪದೇ ಪದೇ ಫಾರಿನ್ ಟೂರ್ : ಕಾರ್ಯಕರ್ತರಿಂದಲೇ ವಿರೋಧ
Political News

ಶಾಸಕ ತಮ್ಮಯ್ಯ ಪದೇ ಪದೇ ಫಾರಿನ್ ಟೂರ್ : ಕಾರ್ಯಕರ್ತರಿಂದಲೇ ವಿರೋಧ

Share
Share

ಚಿಕ್ಕಮಗಳೂರು : ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಫಾರಿನ್, ಫಾರಿನ್ ಫಾರಿನ್ ಎಂದು ಹೆಚ್ಚು ಪ್ರವಾಸ ಮಾಡುತ್ತಿರುವುದರ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರುಗಳು ಬಹಿರಂಗವಾಗಿ ಟೀಕಿಸತೊಡಗಿದ್ದಾರೆ. ಶಾಸಕರಾದ ಮೇಲೆ ಕ್ಷೇತ್ರ ಮತ್ತು ಜನರ ಜೊತೆಗೆ ಹೆಚ್ಚಾಗಿ ಇರಬೇಕು ಆದರೆ ತಮ್ಮಯ್ಯಗೆ ಫಾರಿನ್ ಆಸೆ ಹುಟ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಮುಖಂಡರು ಜರಿಯುವುದು ನೋಡಿ ನಗು ಬರುತ್ತದೆ.

ತಮ್ಮಯ್ಯ ಒಂದು ಕಡೆ ಇರುವ ಅಭ್ಯಾಸ ಇಟ್ಟುಕೊಂಡಿಲ್ಲ ಅಂದರೆ ಜನತಾದಳ,ಕಾಂಗ್ರೆಸ್, ಬಿಜೆಪಿ ಮತ್ತೆ ಕಾಂಗ್ರೆಸ್ ಗೆ ಬಂದಿರುವ ತಮ್ಮಯ್ಯಗೆ ಜಂಪಿಂಗ್ ಅಭ್ಯಾಸ ಇದನ್ನು ಈಗಾ ಫಾರಿನ್ ತಿರುಗುವ ಕಡೆ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಹೆಚ್ಚು ವಿದೇಶಿ ಟೂರು ಮಾಡಿದ ದಾಖಲೆ ತಮ್ಮಯ್ಯರವರಿಗೆ ಸಲ್ಲುತ್ತದೆ. ಈ ಹಿಂದೆ ಸ್ನೇಹಿತರು ಮತ್ತು ಶಾಸಕರ ಜೊತೆಗೆ ಹೋಗುತ್ತಿದ್ದವರು ಈಗ ಸ್ವ ಕುಟುಂಬ ಸಮೇತರಾಗಿ ಹೋಗಿದ್ದಾರೆ. ಅದು ಜರ್ಮನ್ ದೇಶದಲ್ಲಿ ಹದಿನೈದುದಿನಗಳ ಕಾಲ ಪ್ರವಾಸ ಭಾಗ್ಯ ಸಿದ್ದರಾಮಯ್ಯನವರ ಭಾಗ್ಯದ ಜೊತೆಗೆ ಸೇರಿಸಲು ಎಂ.ಎಲ್.ಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕಾಂಗ್ರೆಸ್ ನವರು ಹಾದಿ,ಬೀದಿಯಲ್ಲಿ ಹೇಳುತ್ತಿರುವುದು ಮಾತ್ರ ಸತ್ಯ. ಗೆದ್ದು ಎರಡು ವರ್ಷ ತುಂಬಿಲ್ಲ ತಮ್ಮಯ್ಯ ಮಾತ್ರ ನಾಲ್ಕು ಐದು ಸಾರಿ ಫಾರಿನ್ ಟ್ರಿಪ್ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಪುನಗು ಬೆಕ್ಕು ಬೇಟೆಯಾಡಿದವನ ಬಂಧನ

ಚಿಕ್ಕಮಗಳೂರು:  ತಾಲೂಕಿನ ಉದ್ದೆಬೋರನಹಳ್ಳಿ ವ್ಯಾಪ್ತಿಯ ಪಾದುಮನೆ ಗ್ರಾಮದಲ್ಲಿ ಪುನುಗು ಬೆಕ್ಕು ಬೇಟೆಯಾಡಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಪುನುಗು ಬೆಕ್ಕು ಬೇಟೆಯಾಡಿ ಅದರ ಚರ್ಮ ಸುಲಿದು ಮಾಂಸ ತೆಗೆಯುವ ವೇಳೆಗೆ...

ಜಿಲ್ಲೆಯಲ್ಲಿ ಮಳೆಯ ಆರ್ಭಟ – ಕಾಫಿಬೆಳೆ ನಾಶ – ರಸ್ತೆ ಹುಡುಕಾಡುವ ಕಾಟ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಮಳೆಯ ಆರ್ಭಟದಿಂದ ಕಾಫಿ ಕೊಳೆಯಲು ಆರಂಭವಾಗಿದೆ ಎಂದು ಕಾಫಿ ಬೆಳೆಗಾರರ...

Related Articles

ಕೇಂದ್ರ ಸರ್ಕಾರದ ಅನುದಾನ ಹಾಗೂ ತೆರಿಗೆ ಪಾಲು ಕುರಿತು ನಮ್ಮ ಸರ್ಕಾರ ‘ಶ್ವೇತಪತ್ರ’ ಪತ್ರ

ವಿಧಾನಸಭೆ:  ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಹಾಗೂ ತೆರಿಗೆ ಪಾಲು...

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎಂಬ ನಾಟಕ…!

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಲು ತುದಿಗಾಲಿನಲ್ಲಿ ನಿಂತಿದ್ದವರಿಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲು...

ಬಿ.ಎಲ್.ಶಂಕರ್ ರಾಜಕೀಯ ಹಿನ್ನಡೆ ಏಕೆ ?

ಚಿಕ್ಕಮಗಳೂರು: ಬಿ.ಎಲ್.ಶಂಕರ್ ರಾಜಕೀಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿದ್ದವರು ಹಿನ್ನಡೆ ಅನುಭವಿಸುತ್ತಿರುವುದು ಏಕೆ ?...

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್...