Home namma chikmagalur chikamagalur ಬಾಳೆಹೋನ್ನೂರಿನಲ್ಲಿ ಲಾಠಿ ಚಾರ್ಜ್ ಖಂಡಿಸಿ ಬೃಹತ್‌ ಪ್ರತಿಭಟನೆ
chikamagalurHomeLatest Newsnamma chikmagalur

ಬಾಳೆಹೋನ್ನೂರಿನಲ್ಲಿ ಲಾಠಿ ಚಾರ್ಜ್ ಖಂಡಿಸಿ ಬೃಹತ್‌ ಪ್ರತಿಭಟನೆ

Share
Share

ಬಾಳೆಹೋನ್ನೂರು: ಕಾಡಾನೆ ದಾಳಿಗೆ ಮಹಿಳಾ ಕಾರ್ಮಿಕ ಬಲಿಯಾದ ವಿಚಾರಕ್ಕೆ ಪ್ರತಿಭಟನಾಕಾರರು ರಸ್ತೆಗಿಳಿದು ಭಾರೀ ಪ್ರತಿಭಟನೆ ನಡೆಸಿದಾಗ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಮಲೆನಾಡು ನಾಗರೀಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಸೊಮವಾರ ಕರೆ ನೀಡಿದ್ದ ಬಂದ್ ಯಶಸ್ವಿಯಾಯಿತು.

ಪಟ್ಟಣದ ಪೊಲೀಸ್ ಠಾಣೆ ಸಮೀಪದಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು, ಜೆ.ಸಿ. ಸರ್ಕಲ್‌ನಲ್ಲಿ ಶಾಮಿಯಾನ ಅಳವಡಿಸಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬೇಕಾದ ಶಾಸಕ ಹಾಗೂ ಸಂಪುಟ ದರ್ಜೆಯ ಟಿ.ಡಿ.ರಾಜೇಗೌಡ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿಸಿದ್ದು ಎ? ಸರಿ ಎಂದು ಪ್ರಶ್ನಿಸಿದರು

೫೦ ಲಕ್ಷ ಪರಿಹಾರ ಹಾಗೂ ಅರಣ್ಯ ಸಚಿವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಈ ಲಾಟಿ ಚಾರ್ಜ್ ನಡೆದಿದೆ ಕಾಡುಕೋಣ ಹಾಗೂ ಆನೆ ದಾಳಿಯಿಂದ ೧೩ ಜನ ಮೃತಪಟ್ಟಿದ್ದು ಅರಣ್ಯ ಸಚಿವರುನ್ನು ಸ್ಥಳಕ್ಕೆ ಕರೆಸುವದಾಗಿ ಈ ಹಿಂದೆ ಭರವಸೆ ನೀಡಿದ್ದಾ ಶಾಸಕರು ಸುಳ್ಳು ಹೇಳಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಈ ಹಿಂದೆ ಕ್ಷೇತ್ರ ಹಲವಾರು ಶಾಸಕರು ಅದೆ? ಪ್ರತಿಭಟನೆ ನಡೆದಾಗ ತಾಳ್ಮೆ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸಿದ್ದರು.ಆದರೆ ಕಡಬಿಗೆರೆಯಲ್ಲಿ ರೌಡಿ ಯಂತೆ ಶಾಸಕರು ವರ್ತಿಸಿದ್ದಾರೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ದೂರಿದರು

ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ರೈತಾಪಿ ಜನರ ಮೇಲೆ ಲಾಠಿಚಾರ್ಜ್ ಮಾಡ್ಸಿದ್ದು ಖಂಡನಿಯ ಪ್ರತಿಭಟನಕಾರರ ಮೇಲೆ ದಾಖಲಿಸಿರುವ ಪ್ರಕರಣಕ್ಕೆ ಬಿ ರಿಪೋರ್ಟ ಹಾಕಬೇಕು ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ದೇಶಕ್ಕೆ ಅನ್ನ ನೀಡುವ ರೈತ ಹೋರಾಟಗಾರರ ಮೇಲಿನ ದೌರ್ಜನ್ಯವನ್ನು ಖಂಡಿಸಿದರು. ದೇಶಕ್ಕೆ ಅನ್ನ ನೀಡುವ ರೈತಹೋರಟಗಾರ ನ್ಯಾಯುತ ಹೊರಾಡಕ್ಕೆ ಬೆಂಬಲ ನಿಡುವದಾಗಿ ತಿಳಿಸಿದರು

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ ಜಿಲ್ಲಾಧಿಕಾರಿಗಳನ್ನು ಹಾಗೂ ಪೊಲೀಸ್ ವರಿ?ಧಿಕಾರಿಗಳನ್ನು ಲಾಠಿಚಾರ್ಜ್ ಮಾಡಿಸಿದ ಬಗ್ಗೆ ಕೇಳಿದಾಗ ನಾವು ಲಾಠಿಚಾರ್ಜ್ ಮಾಡಿಸಿಲ್ಲ ಎಂದು ಹೇಳುತ್ತಾರೆ ಹಾಗಾದರೆ ಲಾಠಿ ಚಾರ್ಜ ಮಾಡಲು ಅವಕಾಶ ಮಾಡಿದವರು ಯಾರೆಂದು ಬಹಿರಂಗ ಪಡಿಸಬೇಕೆಂದರು. ಅಮಾಯಕ ರೈತರ ಹಾಗೂ ಹೋರಾಟಗಾರರ ಮೇಲೆ ದಬಾಳಿಕೆ ನಡೆಸಿದ ಸರ್ಕಾರಗಳು ಪತನಗೊಳ್ಳುತ್ತದೆ ಎಂದು ತಿಳಿಸಿದರು

ರೈತ ಒಕ್ಕೂಟದ ಅಧ್ಯಕ್ಷ ಗದ್ದೆಮನ ವಿಶ್ವನಾಥ್. ಪುಣ್ಯಪಾಲ್. ಸಂತೋಶ್. ಚಂದ್ರಶೇಖರ್ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಕೋಕಿಲಮ್ಮ. ನಾಗೇಶ್. ಸೇರಿದಂತೆ ಮುಖಂಡರು ಮಾತನಾಡಿದರು ನ್ಯಾಯ ದೂರಕದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು

ಖಾಸಗಿ ಬಸ್ಸುಗಳು ಸಂಚಾರ ಮಾಡದೆ ಬಸ್ ನಿಲ್ದಾಣದಲ್ಲಿ ನಿಂತಿದ್ದು ಬಂದಗೆ ಬೆಂಬಲ ಸೂಚಿಸಿದರು, ಪ್ರತಿಭಟನೆ ನಂತರ ಪ್ರಕರಣ ಹಿಂಪಡೆಯಬೇಕೆಂದು ರೈತ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು, ನಂತರ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕಾರಣವಿಲ್ಲದೆ ಪೋಲಿಸ್ ವ್ಯಾನಿನಲ್ಲಿ ತುಂಬಿಸಿದ ಹಿನ್ನೆಲೆಯಲ್ಲಿ ಹೋರಾಟಗಾರರು ಪೊಲೀಸ್ ವ್ಯಾನಿಗೆ ಪು?ರ್ಚನೆ ಮಾಡಿ ವಂದನೆ ಸಲ್ಲಿಸಿದರು. ಜೇಸಿ ವೃತದಲ್ಲಿ ಮಲೆನಾಡು ಹಿತ ರಕ್ಷೆಣೆ ವೇದಿಕೆಯವರು ಪ್ರತಿಭಟನೆ ನಡಸಿದರು

Massive protest in Balehonnur condemning lathi charge

Share

Leave a comment

Leave a Reply

Your email address will not be published. Required fields are marked *

Don't Miss

ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್

ಚಿಕ್ಕಮಗಳೂರು:  ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಗಾಳಿ-ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯಿಂದ ಬೃಹತ್ ಬಂಡೆಯೊಂದು ಹಾಗೂ ಮರ ರಸ್ತೆ ಮೇಲೆ ಧರೆಗುರುಳಿದ ಪರಿಣಾಮ ಸುಮಾರು ಅರ್ಧ ಗಂಟೆ...

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ

ಕೊಪ್ಪ: ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಇನ್ನೋವಾ ಕಾರಿನಲ್ಲಿ ಗೋವುಗಳ ಸಾಗಣೆಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಿಢೀರ್...

Related Articles

ಉಪ ಸಭಾಪತಿ ಸ್ಥಾನಕ್ಕೆ ಪ್ರಾಣೇಶ ರಾಜೀನಾಮೆ ಖಚಿತ

ಚಿಕ್ಕಮಗಳೂರು: ಉಪ ಸಭಾಪತಿ ಸ್ಥಾನಕ್ಕೆ ಎಂ,ಕೆ.ಪ್ರಾಣೇಶ್ ನಾಳೆ ರಾಜೀನಾಮೆನೀಡುತ್ತಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಪ್ರಾಣೇಶ್ ವಿಧಾನ...

ಬಹುಕೋಟಿ ರೂ.ಗಳ ಹಗರಣ ಪ್ರಕರಣದ ಸಿಬಿಐ-ಇಡಿ ತನಿಖೆಗೆ ತನಿಖೆ ಆಗ್ರಹ

ಚಿಕ್ಕಮಗಳೂರು : ವಿವಿಧ ಬ್ಯಾಂಕುಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಕೃಷಿಕರ ಹೆಸರಿನಲ್ಲಿ ಖಾತೆಗಳನ್ನು ತೆರೆದು ಬಹುಕೋಟಿ...

ಶಾಸಕಿ ನಯನ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಗೆದ್ದು ಬರಲಿ

ಚಿಕ್ಕಮಗಳೂರು: ಮೂಡಿಗೆರೆ ಶಾಸಕಿ ನಯನ ನೈತಿಕತೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ...

 ಹೊಸ ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಸಾವು

ಚಿಕ್ಕಮಗಳೂರು: ಹೊಸ ಬುಲೆಟ್ ಬೈಕ್‌ನಲ್ಲಿ ಸ್ನೇಹಿತನನ್ನು ಕರೆತರಲು ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯೊಬ್ಬ ರಸ್ತೆ ಅಪಘಾತದಲ್ಲಿ...